Rahul Gandhi ಯಾತ್ರೆ ಇಂದಿನಿಂದ : ಮಣಿಪುರದ ಥೌಬಾಲ್‌ನಲ್ಲಿ ಖರ್ಗೆ ಚಾಲನೆ
Team Udayavani, Jan 14, 2024, 6:25 AM IST
ಇಂಫಾಲ: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ರವಿವಾರದಿಂದ ಎರಡನೇ ಹಂತದ ಯಾತ್ರೆಯನ್ನು ಆರಂಭಿಸಲಿದ್ದಾರೆ. ದೇಶದ ಪೂರ್ವದಿಂದ ಪಶ್ಚಿಮಕ್ಕೆ ಸಂಚರಿಸಲಿರುವ “ಭಾರತ್ ಜೋಡೋ ನ್ಯಾಯ ಯಾತ್ರೆ’ಗೆ ಮಣಿಪುರದ ಥೌಬಾಲ್ ಜಿಲ್ಲೆಯಲ್ಲಿ ಎಐಸಿಸಿ ಅಧ್ಯಕ್ಷ ಮಲ್ಲಿ ಕಾರ್ಜುನ ಖರ್ಗೆ ಚಾಲನೆ ನೀಡಲಿದ್ದಾರೆ.
ಮಣಿಪುರ ರಾಜಧಾನಿ ಇಂಫಾಲ್‌ನ ಐತಿಹಾಸಿಕ ಪ್ಯಾಲೇಸ್ ಗ್ರೌಂಡ್‌ನಿಂದ ಯಾತ್ರೆ ಆರಂಭಿಸಲು ಕಾಂಗ್ರೆಸ್ ನಿರ್ಧರಿ
ಸಿತ್ತು. ಆದರೆ ಈ ಪ್ರದೇಶದಲ್ಲಿ ಹೆಚ್ಚಿನ ಜನರ ಜಮಾವಣೆಗೆ ಮಣಿಪುರ ಸರಕಾರ ನಿರ್ಬಂಧ ವಿಧಿಸಿದ ಹಿನ್ನೆಲೆಯಲ್ಲಿ ಕೊನೆಯ ಕ್ಷಣದಲ್ಲಿ ಇಂಫಾಲ್ ಬದಲಾಗಿ ಥೌಬಾಲ್‌ಗೆ ಕಾರ್ಯಕ್ರಮವನ್ನು ಸ್ಥಳಾಂತರಿಸಲಾಗಿದೆ.
ಮುಂಬಯಿಯಲ್ಲಿ ಮುಕ್ತಾಯ
ಈ ಬಾರಿ ಯಾತ್ರೆ ಬಸ್‌ನಲ್ಲೇ ಹೆಚ್ಚು ದೂರ ಕ್ರಮಿಸಲಿದ್ದು, ಕೆಲವು ಕಡೆ ಮಾತ್ರ ಪಾದಯಾತ್ರೆ ನಡೆಯಲಿದೆ. ಮಾ. 20 ಮತ್ತು 21ರಂದು ಮುಂಬಯಿಯಲ್ಲಿ ಯಾತ್ರೆ ಸಮಾರೋಪಗೊಳ್ಳಲಿದೆ ಎಂದು ಪಕ್ಷ ತಿಳಿಸಿದೆ.
ನ್ಯಾಯ ಗೀತೆ ಅನಾವರಣ
ಯಾತ್ರೆ ಹಿನ್ನೆಲೆಯಲ್ಲಿ ಕಾಂಗ್ರೆಸ್ ಪಕ್ಷವು ಶನಿವಾರ “ಸಹೋ ಮತ್, ಡರೋ ಮತ್’ (ನೋವುಣ್ಣದಿರಿ, ಧೈರ್ಯಗೆಡದಿರಿ) ಎಂಬ ಟ್ಯಾಗ್‌ಲೈನ್ ಇರುವ “ನ್ಯಾಯ ಗೀತೆ’ಯನ್ನು ಅನಾವರಣಗೊಳಿಸಿದೆ.
ರಾಜಕೀಯ ಯಾತ್ರೆಯಲ್ಲ
ಇದೊಂದು ಸೈದ್ಧಾಂತಿಕ ಯಾತ್ರೆಯೇ ವಿನಾ ರಾಜಕೀಯ ಯಾತ್ರೆಯಲ್ಲ. ನರೇಂದ್ರ ಮೋದಿ ಸರಕಾರದ 10 ವರ್ಷಗಳ “ಅನ್ಯಾಯ ಕಾಲ’ದ ವಿರುದ್ಧ ಇದನ್ನು ನಡೆಸಲಾಗುತ್ತಿದೆ ಎಂದು ಕಾಂಗ್ರೆಸ್ ಹೇಳಿದೆ. ಜತೆಗೆ ಸಂಸತ್ತಿನಲ್ಲಿ ಜನರ ಪರ ಧ್ವನಿಯೆತ್ತಲು ಕೇಂದ್ರ ಸರಕಾರ ನಮಗೆ ಅವಕಾಶ ನೀಡಲಿಲ್ಲ. ಈ ಕಾರಣಕ್ಕೆ ಈ ಯಾತ್ರೆ ಕೈಗೊಳ್ಳುತ್ತಿದ್ದೇವೆ. ಬಿಜೆಪಿಯು ರಾಮಮಂದಿರದಲ್ಲಿ ಬಾಲರಾಮನ ಪ್ರಾಣ ಪ್ರತಿಷ್ಠೆಯತ್ತ ಗಮನ ನೆಟ್ಟಿದ್ದರೆ, ನಾವು ಈ ಯಾತ್ರೆಯ ಮೂಲಕ ದೇಶದ ಜನರ ಹೊಟ್ಟೆಪಾಡಿನ ವಿಷಯಗಳತ್ತ ಗಮನ ಹರಿಸಲಿದ್ದೇವೆ ಎಂದೂ ಪಕ್ಷ ತಿಳಿಸಿದೆ.
ಮಹಿಳಾ ಕುಸ್ತಿಪಟುಗಳ ಪ್ರತಿಭಟನೆ, ರಾಹುಲ್ ಅವರ ಭಾರತ್ ಜೋಡೋ ಯಾತ್ರೆ, ರೈತರು, ಕಾರ್ಮಿಕರೊಂದಿಗಿನ ರಾಹುಲ್ ಸಂವಾದದ ತುಣುಕುಗಳನ್ನು ಈ ವೀಡಿಯೋ ಒಳಗೊಂಡಿದ್ದು, ಪಕ್ಷದ ಸಾಮಾಜಿಕ ಜಾಲತಾಣಗಳಲ್ಲಿ ಇದನ್ನು ಹಂಚಿಕೊಳ್ಳಲಾಗಿದೆ.
ಉ. ಪ್ರದೇಶದಲ್ಲೇ ಹೆಚ್ಚು
ಉತ್ತರಪ್ರದೇಶದಲ್ಲಿ ನ್ಯಾಯ ಯಾತ್ರೆಯ ಹೆಚ್ಚಿನ ಭಾಗ ನಡೆಯಲಿದೆ. ಗಾಂಧಿ ಕುಟುಂಬದ ಭದ್ರಕೋಟೆಯಾದ ರಾಯ್‌ಬರೇಲಿ ಮಾತ್ರವಲ್ಲದೆ ಅಮೇಠಿ, ಪ್ರಧಾನಿ ಮೋದಿಯವರ ಲೋಕಸಭಾ ಕ್ಷೇತ್ರ ವಾರಾಣಸಿಯನ್ನೂ ಯಾತ್ರೆ ಹಾದುಹೋಗಲಿದೆ.
ಯಾತ್ರೆಯ ಹಾದಿ
ಕ್ರಮಿಸಲಿರುವ ಒಟ್ಟು ದೂರ 6,713 ಕಿ.ಮೀ.
ಯಾತ್ರೆ ನಡೆಯುವ ದಿನಗಳು 67
ಯಾತ್ರೆ ಸಾಗಲಿರುವ ರಾಜ್ಯಗಳು 15
ಎಷ್ಟು ಜಿಲ್ಲೆಗಳಲ್ಲಿ ಸಂಚಾರ? 115
ಎಷ್ಟು ಲೋಕಸಭಾ ಕ್ಷೇತ್ರಗಳು?100
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Kundapura: ನಾಪತ್ತೆಯಾಗಿದ್ದ ಬೋಟ್ ರೈಡರ್ ಶವ 36 ಗಂಟೆಗಳ ಬಳಿಕ ಪತ್ತೆ
Shivamogga: ತಡರಾತ್ರಿ ಭೀಕರ ರಸ್ತೆ ಅಪಘಾತ… ಬೈಕ್ ನಲ್ಲಿದ್ದ ಇಬ್ಬರು ಯುವಕರು ಮೃ*ತ್ಯು
Plane Mishap: ಲಘು ವಿಮಾನ ಪತನ… ಬ್ರೆಜಿಲ್ ನ ಉದ್ಯಮಿ ಸೇರಿ ಹತ್ತು ಮಂದಿ ಮೃತ್ಯು
BBK11: ಬಾಯಿ ಮುಚ್ಕೊಂಡು ಇರು.. ಫೈಯರ್ ಬ್ರ್ಯಾಂಡ್ ಚೈತ್ರಾ ಕೋಪಕ್ಕೆ ಮನೆಮಂದಿ ಶಾಕ್.!
Kashmir cold: 34 ವರ್ಷಗಳಲ್ಲೇ ಕನಿಷ್ಠ ತಾಪಮಾನ ದಾಖಲು!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.