ರಾಹುಲ್ ಆದಾಯ 55 ಲಕ್ಷದಿಂದ 9 ಕೋಟಿಗೆ ಏರಿಕೆ!
Team Udayavani, Mar 24, 2019, 11:34 AM IST
ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿಯ ಆದಾಯ 2004 ರಿಂದ 2014ರ ಅವಧಿಯಲ್ಲಿ ಭಾರೀ ಪ್ರಮಾಣದಲ್ಲಿ ಏರಿಕೆಯಾಗಿದೆ ಎಂದು ಬಿಜೆಪಿ ಶನಿವಾರ ಆರೋಪಿಸಿದೆ.
ಮೂಲವೇ ಇಲ್ಲದೆ ಆದಾಯ ಈ ಅವಧಿಯಲ್ಲಿ ಏರಿಕೆಯಾಗಿದೆ. 2004ರಲ್ಲಿ ಇವರ ಆದಾಯ 55 ಲಕ್ಷ ರೂ. ಇತ್ತು. 2014ಕ್ಕೆ ಇದು 9 ಕೋಟಿ ರೂ. ಆಗಿದೆ. ಇದು ಅವರ ಚುನಾವಣೆ ಅಫಿಡವಿಟ್‌ನಲ್ಲೇ ದಾಖಲಾಗಿದೆ. ಓರ್ವ ಸಾಮಾನ್ಯ ಸಂಸದನ ಆದಾಯ ಈ ಮಟ್ಟದಲ್ಲಿ ಏರಿಕೆಯಾಗಲು ಹೇಗೆ ಸಾಧ್ಯ ಎಂದು ಬಿಜೆಪಿ ಪ್ರಶ್ನಿಸಿದೆ.
ಈ ಬಗ್ಗೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕೇಂದ್ರ ಸಚಿವ ರವಿಶಂಕರ್ ಪ್ರಸಾದ್, ರಾಹುಲ್ ತಮ್ಮ ಆದಾಯವನ್ನು 2009ರಲ್ಲಿ 2 ಕೋಟಿ ರೂ. ಎಂದು ಚುನಾವಣೆ ಅಫಿದವಿತ್‌ನಲ್ಲಿ ತೋರಿಸಿದರು. ಆದಾಯದ ಮೂಲವೇ ಇಲ್ಲದೆ ಈ ರೀತಿ ಏರಿಕೆಯಾಗಿದ್ದರ ಹಿಂದಿನ ಕಾರಣವನ್ನು ರಾಹುಲ್ ವಿವರಿಸಬೇಕು ಎಂದು ಆಗ್ರಹಿಸಿದ್ದಾರೆ. ಕಾಂಗ್ರೆಸ್ ಈವರೆಗೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Jammu – Kashmir: ಮತ್ತೆ ಅಟ್ಟಹಾಸ ಮೆರೆದ ಉಗ್ರರು… ಇಬ್ಬರನ್ನು ಅಪಹರಿಸಿ ಹ*ತ್ಯೆ
Maharashtra: ಮತ ನೀಡಿದರೆ ಮದುವೆ ಮಾಡಿಸುವೆ: ಶರದ್ ಬಣದ ನಾಯಕ
India-Afghanistan: ಆಫ್ಘನ್ ಜೊತೆಗೆ ಬಾಂಧವ್ಯ ಪುನಃಸ್ಥಾಪನೆಗೆ ಭಾರತ ಸಜ್ಜು?
Doctor: ಸೀರೆ ಉಟ್ಟ ಸ್ತ್ರೀಯರೇ,ಪೆಟಿಕೋಟ್ ಕ್ಯಾನ್ಸರ್ ಬಗ್ಗೆ ಎಚ್ಚರವಿರಲಿ
Panaji: ವಿದೇಶಿ ಪ್ರವಾಸಿಗರ ಕಳೆದುಕೊಂಡ ಗೋವಾ: ಆರ್ಥಿಕ ಅಪಾಯದ ಭೀತಿ!
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.