ರಾಹುಲ್‌ಗೆ ಇನ್ನೂ ಹಲವು ಕೇಸುಗಳಲ್ಲಿ ಜಾಮೀನು
Team Udayavani, Mar 26, 2023, 7:45 AM IST
ರಾಹುಲ್ ಗಾಂಧಿ “ಮೋದಿ ಹೆಸರಿನವರೆಲ್ಲಾ ಕಳ್ಳರೇ ಏಕೆ’ ಎಂದು ಪ್ರಶ್ನೆ ಮಾಡಿದ್ದಕ್ಕೆ ಸೂರತ್‌ನ ಕೋರ್ಟ್ ಜೈಲು ಶಿಕ್ಷೆ ಎದುರಿಸುತ್ತಿದ್ದಾರೆ. ಲೋಕಸಭೆಯ ಸದಸ್ಯತ್ವದಿಂದಲೂ ಅನರ್ಹಗೊಂಡಿದ್ದಾರೆ. ರಾಹುಲ್ ಈ ಹಿಂದೆಯೂ ಮಾನಹಾನಿ ಪ್ರಕರಣಗಳನ್ನು ಎದುರಿಸಿ, ಅಲ್ಲಿ ಜಾಮೀನು ಪಡೆದುಕೊಂಡಿದ್ದಾರೆ.
ನ್ಯಾಷಲನ್ ಹೆರಾಲ್ಡ್ (2015)
ನ್ಯಾಷನಲ್ ಹೆರಾಲ್ಡ್ ಪತ್ರಿಕೆಯನ್ನು ಯಂಗ್ ಇಂಡಿಯಾ ತನ್ನ ವಶಕ್ಕೆ ಪಡೆದುಕೊಂಡ ಪ್ರಕರಣದಲ್ಲಿ ರಾಹುಲ್ ಮಾನಹಾನಿ ಪ್ರಕರಣ ಎದುರಿಸಿ, 2015 ಡಿಸೆಂಬರ್‌ನಲ್ಲಿ ಜಾಮೀನು ಪಡೆದಿದ್ದರು.
ಮೋದಿ ವಿರುದ್ಧ ಲೇವಡಿ (2019)
ಯಾಕೆ ಎಲ್ಲ ಕಳ್ಳರು ಮೋದಿ ಕುಲನಾಮ ಹೊಂದಿರುತ್ತಾರೆ ಎಂದು ಮಹಾರಾಷ್ಟ್ರದ ರ್ಯಾಲಿಯೊಂದರಲ್ಲಿ ಹೇಳಿದ್ದ ರಾಹುಲ್‌ಗೆ ಪಾಟ್ನಾ ನ್ಯಾಯಾಲಯ 2019ರಲ್ಲಿ ಜಾಮೀನು ನೀಡಿತ್ತು.
ಡಿಸಿಸಿ ಬ್ಯಾಂಕ್ ವಿರುದ್ಧ ಆರೋಪ (2019)
ನೋಟು ಅಮಾನ್ಯಗೊಂಡ ಹೊತ್ತಿನಲ್ಲಿ ಅಮಾನತಾದ ನೋಟುಗಳ ವಿನಿಮಯ ದಂಧೆಯಲ್ಲಿ ಗುಜರಾತ್‌ನ ಅಹ್ಮದಾಬಾದ್ ಡಿಸಿಸಿ ಬ್ಯಾಂಕ್, ತೊಡಗಿತ್ತು ಎಂದು ರಾಹುಲ್ ಆರೋಪಿಸಿದ್ದರು. ಈ ಪ್ರಕರಣದಲ್ಲಿ ಸ್ಥಳೀಯ ಕೋರ್ಟ್ 2019ರಲ್ಲಿ ಜಾಮೀನು ನೀಡಿತ್ತು.
ಗೌರಿ ಲಂಕೇಶ್ ಹತ್ಯೆ (2019)
ಗೌರಿ ಲಂಕೇಶ್ ಹತ್ಯೆಗೆ ಬಿಜೆಪಿ-ಆರ್‌ಎಸ್‌ಎಸ್ ಸಿದ್ಧಾಂತವೇ ಕಾರಣವೆಂದು ಹೇಳಿದ್ದ ಅವರಿಗೆ ಮುಂಬೈ ನ್ಯಾಯಾಲಯದಿಂದ 2019ರಲ್ಲಿ ಜಾಮೀನು ದೊರೆತಿತ್ತು.
ಮಹಾತ್ಮ ಗಾಂಧಿ ಹತ್ಯೆ (2016)
ಮಹಾತ್ಮ ಗಾಂಧೀಜಿಯನ್ನು ಕೊಂದಿದ್ದೇ ಆರ್‌ಎಸ್‌ಎಸ್ ಎಂಬರ್ಥದಲ್ಲಿ ರಾಹುಲ್ ಒಮ್ಮೆ ಹೇಳಿಕೆ ನೀಡಿದ್ದರು. 2016, ನವೆಂಬರ್‌ನಲ್ಲಿ ಮಹಾರಾಷ್ಟ್ರದ ಭಿವಂಡಿ ನ್ಯಾಯಾಲಯ ರಾಹುಲ್‌ಗೆ 15 ಸಾವಿರ ರೂ. ಖಾತರಿ ಸಹಿತ ಜಾಮೀನು ನೀಡಿತ್ತು.
ಬಾರ್ಪೇಟಾ ಸತ್ರ (2016)
2015ರಲ್ಲಿ ಅಸ್ಸಾಂನಲ್ಲಿ ನಡೆದಿದ್ದ ಬಾರ್ಪೇಟಾ ಸತ್ರದಲ್ಲಿ ಪಾಲ್ಗೊಳ್ಳದಂತೆ ತನ್ನನ್ನು ತಡೆದಿದ್ದೇ ಆರ್‌ಎಸ್‌ಎಸ್ ಎಂದು ರಾಹುಲ್ ಆರೋಪಿಸಿದ್ದರು. 2016ರಲ್ಲಿ ಅವರಿಗೆ ಗುವಾಹಟಿ ನ್ಯಾಯಾಲಯ 50 ಸಾವಿರ ರೂ. ಖಾತರಿ ಸಹಿತ ಜಾಮೀನು ನೀಡಿತ್ತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Doctor: ಸೀರೆ ಉಟ್ಟ ಸ್ತ್ರೀಯರೇ,ಪೆಟಿಕೋಟ್ ಕ್ಯಾನ್ಸರ್ ಬಗ್ಗೆ ಎಚ್ಚರವಿರಲಿ
Panaji: ವಿದೇಶಿ ಪ್ರವಾಸಿಗರ ಕಳೆದುಕೊಂಡ ಗೋವಾ: ಆರ್ಥಿಕ ಅಪಾಯದ ಭೀತಿ!
Nagpur: ರಾಹುಲ್ ಕಾರ್ಯಕ್ರಮದಲ್ಲಿ ಖಾಲಿ ಸಂವಿಧಾನ ಪುಸ್ತಕ ಹಂಚಿಕೆ: ಬಿಜೆಪಿ ಆರೋಪ
Maharashtra: ಸ್ತ್ರೀಯರಿಗೆ ಮಾಸಿಕ 3000, ರೈತರ ಸಾಲ ಮನ್ನಾ: ಎಂವಿಎ
Jet Airways ಆಸ್ತಿ ಮಾರಾಟಕ್ಕೆ ಸುಪ್ರೀಂ ಕೋರ್ಟ್ ಅನುಮತಿ
MUST WATCH
ಹೊಸ ಸೇರ್ಪಡೆ
MUDA CASE: ಸಿಎಂ, ಪತ್ನಿಗೆ ಇ.ಡಿ. ನೋಟಿಸ್?
IND Vs SA: ಇಂದಿನಿಂದ 4 ಪಂದ್ಯಗಳ ಟಿ20 ಸರಣಿ; ಸೂರ್ಯ ಪಡೆಗೆ ಸೌತ್ ಆಫ್ರಿಕಾ ಸವಾಲು
Doctor: ಸೀರೆ ಉಟ್ಟ ಸ್ತ್ರೀಯರೇ,ಪೆಟಿಕೋಟ್ ಕ್ಯಾನ್ಸರ್ ಬಗ್ಗೆ ಎಚ್ಚರವಿರಲಿ
Panaji: ವಿದೇಶಿ ಪ್ರವಾಸಿಗರ ಕಳೆದುಕೊಂಡ ಗೋವಾ: ಆರ್ಥಿಕ ಅಪಾಯದ ಭೀತಿ!
Congress Gurantee: ಗೃಹಜ್ಯೋತಿ: 3 ತಿಂಗಳಲ್ಲಿ 85 ಸಾವಿರ ಗ್ರಾಹಕರಿಂದ “ರಿ-ಲಿಂಕ್’
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.