ರಾಹುಲ್ ಮನವೊಲಿಕೆ ಯತ್ನ
ಅಧ್ಯಕ್ಷರ ಭೇಟಿಯಾದ ಕಾಂಗ್ರೆಸ್ ಮುಖ್ಯಮಂತ್ರಿಗಳು
Team Udayavani, Jul 2, 2019, 5:21 AM IST
ನವದೆಹಲಿ: ಲೋಕಸಭೆ ಚುನಾವಣೆಯ ಹೀನಾಯ ಸೋಲಿನ ಬಳಿಕ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿರುವ ರಾಹುಲ್ ಗಾಂಧಿ ಅವರ ಮನವೊಲಿಸಲು ಕಾಂಗ್ರೆಸ್ ಆಡಳಿತದ ರಾಜ್ಯಗಳ ಮುಖ್ಯಮಂತ್ರಿಗಳು ಶತಾಯಗತಾಯ ಯತ್ನಿಸಿದ್ದಾರೆ.
ಸೋಮವಾರ ರಾಹುಲ್ರನ್ನು ಭೇಟಿಯಾದ ಸಿಎಂಗಳು, ನೀವು ಅಧ್ಯಕ್ಷ ಸ್ಥಾನದಲ್ಲಿ ಮುಂದುವರಿಯಬೇಕು ಎಂದು ಒತ್ತಾಯಿಸಿದ್ದು, ತಮ್ಮ ಸಲಹೆಯನ್ನು ರಾಹುಲ್ ಸಕಾರಾತ್ಮಕವಾಗಿ ಸ್ವೀಕರಿಸುತ್ತಾರೆ ಎಂಬ ವಿಶ್ವಾಸವನ್ನು ವ್ಯಕ್ತಪಡಿಸಿದ್ದಾರೆ.
ರಾಜಸ್ಥಾನ, ಪಂಜಾಬ್, ಮಧ್ಯಪ್ರದೇಶ, ಛತ್ತೀಸ್‌ಗಡ ಮತ್ತು ಪುದುಚೇರಿ ಮುಖ್ಯಮಂತ್ರಿಗಳು ರಾಹುಲ್ ಜತೆ ಮಾತುಕತೆ ನಡೆಸಿದ್ದು, ಲೋಕಸಭೆ ಚುನಾವಣೆಯ ಸೋಲಿನ ಪರಾಮರ್ಶೆಯನ್ನೂ ನಡೆಸಿದ್ದಾರೆ. 2 ಗಂಟೆಗಳ ಕಾಲ ಚರ್ಚೆ ನಡೆದಿದ್ದು, ದೇಶದ ಎಲ್ಲ ಕಾಂಗ್ರೆಸ್ ಕಾರ್ಯಕರ್ತರೂ ನೀವೇ ಅಧ್ಯಕ್ಷ ಸ್ಥಾನದಲ್ಲಿ ಮುಂದುವರಿಯಬೇಕೆಂದು ಬಯಸುತ್ತಿದ್ದಾರೆ. ಹಾಗಾಗಿ, ದಯವಿಟ್ಟು ಅವರ ಮನಸ್ಸನ್ನು ನೋಯಿಸದಿರಿ ಎಂದು ಕೇಳಿಕೊಂಡಿದ್ದೇವೆ ಎಂದು ರಾಜಸ್ಥಾನ ಸಿಎಂ ಅಶೋಕ್ ಗೆಹ್ಲೋಟ್ ತಿಳಿಸಿದ್ದಾರೆ.
ಇದೇ ವೇಳೆ, ಈ ನಾಯಕರು ಪಕ್ಷದ ಸೋಲಿನ ಹೊಣೆಯನ್ನೂ ನಾವೇ ಹೊರುವುದಾಗಿಯೂ ರಾಹುಲ್ಗೆ ತಿಳಿಸಿದ್ದಾರೆ ಎಂದು ಮೂಲಗಳು ಹೇಳಿವೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ರಿವರ್ಸ್ ತೆಗೆಯುವಾಗ ಸಮುದ್ರಕ್ಕೆ ಬಿದ್ದ ಕಾರು… ನೌಕಾಪಡೆ ಅಧಿಕಾರಿ ಪಾರು, ಚಾಲಕ ನಾಪತ್ತೆ
Ambedkar remarks; ಅಮಿತ್ ಶಾ ರಾಜೀನಾಮೆ ನೀಡಬೇಕು: ಕಾಂಗ್ರೆಸ್ ಒತ್ತಾಯ
Kasganj: ವಿವಾಹಿತನಿಗೆ ಪೊಲೀಸ್ ಠಾಣೆಯಲ್ಲಿ ಬಲವಂತದಿಂದ ಮತ್ತೊಂದು ವಿವಾಹ!SPಗೆ ದೂರು!
Uttara Pradesh: ಬುಲ್ಡೋಜರ್ ಬಳಸಿ ಬಿಜೆಪಿ ಕಚೇರಿಯನ್ನೇ ತೆರವುಗೊಳಿಸಿದ ಯುಪಿ ಸರ್ಕಾರ
Manipur ಗಲಭೆಗಳಲ್ಲಿ ‘ಸ್ಟಾರ್‌ಲಿಂಕ್’ ಬಳಕೆ: ಆರೋಪ ನಿರಾಕರಿಸಿದ ಎಲಾನ್ ಮಸ್ಕ್
MUST WATCH
ಹೊಸ ಸೇರ್ಪಡೆ
ರಿವರ್ಸ್ ತೆಗೆಯುವಾಗ ಸಮುದ್ರಕ್ಕೆ ಬಿದ್ದ ಕಾರು… ನೌಕಾಪಡೆ ಅಧಿಕಾರಿ ಪಾರು, ಚಾಲಕ ನಾಪತ್ತೆ
Cold Weather: ಕೊನೆಗೂ ಚಳಿ ಶುರು ಆಯ್ತು ಗುರು
Ambedkar remarks; ಅಮಿತ್ ಶಾ ರಾಜೀನಾಮೆ ನೀಡಬೇಕು: ಕಾಂಗ್ರೆಸ್ ಒತ್ತಾಯ
BBK11: ಗೆಲ್ಲಲೇ ಬೇಕಾದ ಟಾಸ್ಕ್‌ನಲ್ಲಿ ಎಡವಿದ ಚೈತ್ರಾ.. ನನ್ನಿಂದ ಆಗಲ್ಲವೆಂದು ಕಣ್ಣೀರು
ShivaRajkumar: ಅಮೆರಿಕಾಕ್ಕೆ ತೆರಳುವ ಮುನ್ನ ಶಿವಣ್ಣನ ಮನೆಯಲ್ಲಿ ವಿಶೇಷ ಪೂಜೆ; ಕಿಚ್ಚ ಭಾಗಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.