60 ದಿನದಲ್ಲಿ ರೈಲ್ವೇ ಸೇತುವೆ ರಿಪೇರಿ !
Team Udayavani, Nov 20, 2017, 8:58 AM IST
ಹೊಸದಿಲ್ಲಿ: ಮನಸ್ಸಿದ್ದರೆ ಮಾರ್ಗ ಎಂಬ ಮಾತು ಇಲ್ಲಿ ನಿಜವಾಗಿದೆ. ರಿಪೇರಿಗೆ ಇನ್ನೆಷ್ಟು ತಿಂಗಳುಗಳು ಬೇಕೋ ಎನ್ನುವಂತಿದ್ದ ಮುರಿದು ಬಿದ್ದ ರೈಲ್ವೇ ಸೇತುವೆಯೊಂದನ್ನು ಸಮರೋಪಾದಿಯಲ್ಲಿ ಕಾಮಗಾರಿ ಕೈಗೆತ್ತಿಕೊಂಡು ಮುಗಿಸಿ ತೋರಿಸಿದ್ದಾರೆ ರೈಲ್ವೇ ಸಿಬಂದಿ.
ಆಂಧ್ರಪ್ರದೇಶದ ಅರಕು ಕಣಿವೆ ಪ್ರದೇಶದಲ್ಲಿ ಅ.7ರಂದು ರೈಲು ಹಳಿಯ ಮೇಲೆ ಬೃಹತ್ ಗಾತ್ರದ ಬಂಡೆ ಬಿದ್ದು 28 ಮೀ. ಉದ್ದಕ್ಕೆ ಸೇತುವೆ ಮುರಿದು ಬಿತ್ತು. ಅದು ದೇಶದಲ್ಲಿ ಸದ್ಯ ಬಳಕೆಯಲ್ಲಿರುವ ಅತ್ಯಂತ ಎತ್ತರದ ಬ್ರಾಡ್ಗೆàಜ್ ರೈಲು ಮಾರ್ಗ. ಘಟನೆ ನಡೆದ 5 ದಿನಗಳ ಬಳಿಕ ದುರಸ್ತಿ ಕಾರ್ಯ ಶುರು ಮಾಡಿದ ರೈಲ್ವೇ ಇಲಾಖೆ ಕೇವಲ 60 ದಿನಗಳಲ್ಲಿ ಅದನ್ನು ಪೂರ್ಣಗೊಳಿಸಿದೆ.
50 ವರ್ಷಗಳ ಹಿಂದೆ ಈ ಮಾರ್ಗ ನಿರ್ಮಿಸಲಾಗಿತ್ತು. ಇದರ ಮರು ನಿರ್ಮಾಣವು ಅಂದುಕೊಂಡಷ್ಟು ಸುಲಭವಾಗಿರಲಿಲ್ಲ. ಕಡಿದಾದ ಗುಡ್ಡದ ನಡುವೆಯೇ ಕಾಮಗಾರಿ ನಡೆಸಬೇಕಾಗಿತ್ತು ಮತ್ತು ಮುರಿದ ಸ್ಥಳದಲ್ಲಿಯೇ ಇರುವ 8 ಡಿಗ್ರಿ ಕೋನದಲ್ಲಿ ಜಲಪಾತ ಹರಿವ ದಿಕ್ಕನ್ನು ತಾತ್ಕಾಲಿಕವಾಗಿ ಬದಲಿಸುವುದೂ ಸವಾ ಲಾಗಿತ್ತು. ಈಗಾಗಲೇ ಹೆಚ್ಚಿನ ಕಾಮಗಾರಿ ಮುಕ್ತಾಯವಾಗಿದ್ದು, ಡಿ.12ರಂದು ಕೆಲಸ ಪೂರ್ತಿಯಾಗಲಿದೆ. ದಿನದ 24 ಗಂಟೆ ಕಾಲ ಡ್ರೋನ್ ಕೆಮರಾ ಮತ್ತು ಇತರ ಅತ್ಯಾಧುನಿಕ ವ್ಯವಸ್ಥೆ ಮೂಲಕ ಕೆಲಸದ ಮೇಲೆ ನಿಗಾ ವಹಿಸಲಾಗುತ್ತಿದೆ. 445 ಕಿಮೀ ದೂರದ ಕೊತವಲಸದಿಂದ ಕಿರಾಂದುಲ್ ನಡುವಿನ ರೈಲ್ವೇ ಮಾರ್ಗವನ್ನು 1960ರಲ್ಲಿ ಜಪಾನ್ ತಂತ್ರಜ್ಞಾನ ಮತ್ತು ಹಣಕಾಸಿನ ನೆರವಿನಿಂದ ಆರಂಭಿಸಲಾಯಿತು. ಈ ಲೈನ್ನಲ್ಲಿ 58 ಸುರಂಗ ಮಾರ್ಗಗಳು, 84 ದೊಡ್ಡ ಸೇತುವೆಗಳು ಇವೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Junior Doctor: ಮಾತನಾಡಲು ಕರೆಸಿ ಕಿರಿಯ ವೈದ್ಯೆ ಮೇಲೆ ಸಹೋದ್ಯೋಗಿಯಿಂದಲೇ ಅತ್ಯಾಚಾರ…
Bird Flu: ಹಕ್ಕಿ ಜ್ವರಕ್ಕೆ 3 ಹುಲಿ, 1 ಚಿರತೆ ಸಾ*ವು… ಪ್ರಾಣಿಗಳಿಗೆ ಕ್ವಾರಂಟೈನ್
540 ಅಡಿ ಆಳದ ಬೋರ್ವೆಲ್ಗೆ ಬಿದ್ದ ಯುವತಿ: ಯುವಕನ ಜತೆ ಮನಸ್ತಾಪದಿಂದ ಆತ್ಮಹತ್ಯೆಗೆ ಯತ್ನ?
Delhi Assembly Election: ದೆಹಲಿ ವಿಧಾನಸಭೆ ಚುನಾವಣೆಗೆ ಇಂದು ದಿನಾಂಕ ನಿಗದಿ
ಏಕಕಾಲದಲ್ಲಿ ಭಾರತ ಸೇರಿ 3 ದೇಶಗಳಲ್ಲಿ ಕಂಪಿಸಿದ ಭೂಮಿ… ಟಿಬೆಟ್ನಲ್ಲಿ 7.1 ತೀವ್ರತೆ ಭೂಕಂಪ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.