ತತ್ಕಾಲ್ ಬುಕಿಂಗ್‌ಗೆ ‘ಬುಕ್ ನೌ ಪೇ ಲೇಟರ್’ ಸೌಲಭ್ಯ
Team Udayavani, Aug 4, 2017, 9:10 AM IST
ಹೊಸದಿಲ್ಲಿ: ಇನ್ನು ಮುಂದೆ ತತ್ಕಾಲ್ ಟಿಕೆಟ್ ಕಾಯ್ದಿರಿಸುವುದನ್ನು ಭಾರತೀಯ ರೈಲ್ವೇ ಮತ್ತಷ್ಟು ಸುಲಭವಾಗಿಸಿದೆ. ಮೊದಲು ಕಾಯ್ದಿರಿಸಿ ಅನಂತರ ಹಣ ಪಾವತಿಸುವಂಥ ‘ಬುಕ್ ನೌ ಪೇ ಲೇಟರ್’ ಎಂಬ ವ್ಯವಸ್ಥೆಯನ್ನು ಐಆರ್‌ಸಿಟಿಸಿ ಪರಿಚಯಿಸಿದೆ. ಈ ಕುರಿತು ರೈಲ್ವೇ ಖಾತೆ ಸಹಾಯಕ ಸಚಿವ ರಾಜೆನ್ ಗೋಹೈನ್ ಲೋಕಸಭೆಗೆ ಮಾಹಿತಿ ನೀಡಿದರು.
ಗ್ರಾಹಕರು ಮೊದಲಿಗೆ ವೆಬ್‌ಸೈಟ್ ಮೂಲಕ ಟಿಕೆಟ್ ಬುಕ್ ಮಾಡಬೇಕು. ಟಿಕೆಟ್ ಖಾತರಿ ಕುರಿತು ಇ-ಮೇಲ್ ಅಥವಾ ಎಸ್‌ಎಂಎಸ್‌ನಲ್ಲಿ ಸಂದೇಶ ದೊರಕುತ್ತದೆ. ಒಮ್ಮೆ ಟಿಕೆಟ್ ಖಚಿತವಾದ ಬಳಿಕ ಗ್ರಾಹಕರು ತಮ್ಮ ಇ-ವ್ಯಾಲೆಟ್‌ನಿಂದ ಹಣ ಪಾವತಿಸಬೇಕು. ಹಣ ಪಾವತಿಗೆ ಟಿಕೆಟ್ ಖಾತರಿಯಾದ ಬಳಿಕ 14 ದಿನಗಳ ಕಾಲಾವಕಾಶ ಇರುತ್ತದೆ. 14 ದಿನಗಳೊಳಗೆ ಹಣ ಪಾವತಿಸದಿದ್ದರೆ ಟಿಕೆಟ್ ಬೆಲೆ ಮೇಲೆ ವಾರ್ಷಿಕ ಶೇ.36ರಷ್ಟು ಬಡ್ಡಿ ರೂಪದಲ್ಲಿ ದಂಡ ವಿಧಿಸಲಾಗುತ್ತದೆ. ಈ ಸೌಲಭ್ಯ ಪಡೆಯಲು ಗ್ರಾಹಕರು ಮೊದಲಿಗೆ irctc.payonedelivery.co.in ವೆಬ್‌ಸೈಟ್‌ನಲ್ಲಿ ತಮ್ಮ ವೈಯಕ್ತಿಕ ವಿವರವನ್ನು ಆಧಾರ್ ಅಥವಾ ಪ್ಯಾನ್ ಸಂಖ್ಯೆಯೊಂದಿಗೆ ನೋಂದಣಿ ಮಾಡಿಕೊಳ್ಳಬೇಕು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Pollution: ವಾಯುಮಾಲಿನ್ಯ ನಿಯಂತ್ರಣ ಸರಕಾರ ಇಚ್ಛಾಶಕ್ತಿ ಪ್ರದರ್ಶಿಸಲಿ
By Election: ಯೋಗೇಶ್ವರ್ ನಿಂದಿಸಿದ್ದ ಡಿ.ಕೆ.ಸುರೇಶ್ ಆಡಿಯೋ ಎಚ್‌ಡಿಕೆ ಬಿಡುಗಡೆ
By Election: ನಾಗೇಂದ್ರ, ಜಮೀರ್, ಡಿಕೆಶಿ ಮೇಲೆ ಚುನಾವಣಾ ಆಯೋಗ ಕಣ್ಣಿಡಲಿ: ಡಿವಿಎಸ್
Waqf: ಮುಸ್ಲಿಮರ ಗುರಿ ಮಾಡುವುದು ಬಿಟ್ಟರೆ ಬಿಜೆಪಿಗೆ ಬೇರೇನೂ ಇಲ್ಲ: ಸಚಿವ ದಿನೇಶ್
Maharashtra: ಸ್ತ್ರೀಯರಿಗೆ ಮಾಸಿಕ 3000, ರೈತರ ಸಾಲ ಮನ್ನಾ: ಎಂವಿಎ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.