ರೈಲಿನಲ್ಲಿ ಟೀ ಕಾಫಿಗೆ ಟಾಯ್ಲೆಟ್ ನೀರು ಬಳಕೆ: 1 ಲಕ್ಷ ರೂ. ದಂಡ
Team Udayavani, May 3, 2018, 11:16 AM IST
ಹೊಸದಿಲ್ಲಿ : ರೈಲಿನಲ್ಲಿ ಪ್ರಯಾಣಿಕರಿಗೆ ಪೂರೈಸುವ ಟೀ ಕಾಫಿಗೆ ರೈಲಿನ ಟಾಯ್ಲೆಟ್ ನೀರನ್ನು ಬಳಸಿದ ಪೂರೈಕೆದಾರನಿಗೆ ರೈಲ್ವೆ ಇಲಾಖೆ ಒಂದು ಲಕ್ಷ ರೂ. ದಂಡ ಹೇರಿದೆ.
ಕಳೆದ ವರ್ಷ ಡಿಸೆಂಬರ್ನಲ್ಲಿ ತೆಲಂಗಾಣದಲ್ಲಿ ಚೆನ್ನೆ ಸೆಂಟ್ರಲ್ – ಹೈದರಾಬಾದ್ ಚಾರ್ಮಿನಾರ್ ಎಕ್ಸ್ಪ್ರೆಸ್ ರೈಲಿನ ಟಾಯ್ಲೆಟ್ಲ್ಲಿ ನೀಲಿ ಶರ್ಟ್ಧಾರಿ ವ್ಯಕ್ತಿಯೊಬ್ಬ ಟೀ ಕಾಫಿ ಗಾಗಿ ಕ್ಯಾನ್ಗಳಲ್ಲಿ ನೀರು ತುಂಬಿಸಿಕೊಂಡು ಶೌಚಾಲಯದ ಹೊರಗೆ ನಿಂತಿದ್ದ ಟೀ-ಕಾಫಿ ಪೂರೈಕೆದಾರನಿಗೆ ಕೊಡುತ್ತಿದ್ದ ದೃಶ್ಯವನ್ನು ರೈಲು ಪ್ರಯಾಣಿಕರೊಬ್ಬರು ವಿಡಿಯೋ ಮಾಡಿದ್ದರು.
ಬಳಿಕ ಅದು ಸಾಮಾಜಿಕ ಜಾಲ ತಾಣಗಳಲ್ಲಿ ವೈರಲ್ ಆಗಿತ್ತು. ಈ ವಿಡಿಯೋ ಕಂಡು ತೀವ್ರ ಜುಗುಪ್ಸೆ ಪಟ್ಟು ಆಕ್ರೋಶಿತರಾಗಿದ್ದ ಪ್ರಯಾಣಿಕರು ರೈಲಿನಲ್ಲಿ ಶುದ್ಧ ಆಹಾರ ಪೂರೈಸುವ ರೈಲು ಅಧಿಕಾರಿಗಳ ಬದ್ಧತೆಯನ್ನು ಪ್ರಶ್ನಿಸಿದ್ದರು.
ಕಳೆದ ತಿಂಗಳಲ್ಲಷ್ಟೇ ರೈಲ್ವೇ ಸಚಿವ ಪಿಯೂಷ್ ಗೋಯಲ್ ಅವರು ರೈಲುಗಳಲ್ಲಿ ಟೀ ಕಾಫಿ ಆಹಾರ ಪೂರೈಸುವವರಿಗೆ ಗುಣಮಟ್ಟದೊಂದಿಗೆ ಎಂದೂ ರಾಜಿ ಮಾಡಕೂಡದೆಂದು ಅಪ್ಪಣೆ ಕೊಡಿಸಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.