ರಾಜ್-ಸೋನಿಯಾ ಭೇಟಿ ಪರಾಜಿತ ನಾಯಕರ ಸಭೆ: ಮುಂಗಂತಿವಾರ್ ಅಣಕ
Team Udayavani, Jul 11, 2019, 12:47 PM IST
ಮುಂಬಯಿ: ಸಚಿವ ಸುಧೀರ್ ಮುಂಗಂತಿವಾರ್ ಅವರು ಯುಪಿಎ ಅಧ್ಯಕ್ಷೆ ಸೋನಿಯಾ ಗಾಂಧಿ ಮತ್ತು ಎಂಎನ್‌ಎಸ್ ಮುಖ್ಯಸ್ಥ ರಾಜ್ ಠಾಕ್ರೆ ಅವರನ್ನು ಪರಾಜಿತ ನಾಯಕರು ಎಂದು ಬಣ್ಣಿಸಿದ್ದು, ಅವರಿಬ್ಬರ ನಡುವೆ ನಡೆದ ಸಭೆಯು ಚುನಾವಣೆಯ ಸೋಲಿನ ನೋವನ್ನು ಕಡಿಮೆ ಮಾಡಲು ಎಂದು ವ್ಯಂಗ್ಯವಾಡಿದ್ದಾರೆ.
ಠಾಕ್ರೆ ಸೋಮವಾರ ಹೊಸದಿಲ್ಲಿಯಲ್ಲಿ ಸೋನಿಯಾ ಅವರನ್ನು ಭೇಟಿಯಾಗಿ ಇವಿಎಂಗಳ ಸಮಸ್ಯೆ ಮತ್ತು ಈ ವರ್ಷದ ಕೊನೆಯಲ್ಲಿ ನಡೆಯಲಿರುವ ರಾಜ್ಯ ವಿಧಾನಸಭಾ ಚುನಾವಣೆಯ ರಾಜಕೀಯ ಪರಿಸ್ಥಿತಿ ಕುರಿತು ಚರ್ಚಿಸಿದ್ದರು. ಕ್ಯಾಬಿನೆಟ್ ಸಭೆಯ ಅನಂತರ ಇಲ್ಲಿ ಮಾತನಾಡಿದ ಮುಂಗಂತಿವಾರ್, ಇಬ್ಬರೂ ಪರಾಜಿತ ನಾಯಕರು ಒಗ್ಗೂಡಿದಾಗ, ಅವರ ನಷ್ಟದ (ಚುನಾವಣ) ನೋವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ ಎಂದು ಕುಹುಕವಾಡಿದರು.
ಮಹಾರಾಷ್ಟ್ರ ನವನಿರ್ಮಾಣ ಸೇನೆ (ಎಂಎನ್‌ಎಸ್) ಕಾಂಗ್ರೆಸ್ ಅನ್ನು ಹೊರಹಾಕಲು ಯಾವಾಗಲೂ ಸಹಾಯ ಮಾಡಿದೆ. ಒಂದೊಮ್ಮೆ ಅವರು ಒಗ್ಗೂಡಿದರೆ, ರಾಜ್ ಠಾಕ್ರೆ ಅವರು ಕಾಂಗ್ರೆಸ್‌ಗೆ ಅಧಿಕೃತವಾಗಿ ಸಹಾಯ ಮಾಡಲಿದ್ದಾರೆ ಎಂದು ಮುಂಗಂತಿವಾರ್ ಹೇಳಿದ್ದಾರೆ.
ಅಲ್ಲದೆ, ಲೋಕಸಭಾ ಚುನಾವಣೆಯ ಹೀನಾಯ ಸೋಲಿನ ಜವಾಬ್ದಾರಿಯನ್ನು ಹೊತ್ತು ಪಕ್ಷದ ಮುಖ್ಯಸ್ಥ ರಾಹುಲ್ ಗಾಂಧಿ ಅವರು ರಾಜೀನಾಮೆ ನೀಡಿದ ಅನಂತರ ಕಾಂಗ್ರೆಸ್‌ನಲ್ಲಿ ನಡೆಯುತ್ತಿರುವ ಮಂಥನವನ್ನು ಕೂಡ ಅವರು ಲೇವಡಿ ಮಾಡಿದ್ದಾರೆ.
ಸಾಮಾಜಿಕ ಮಾಧ್ಯಮದಲ್ಲಿ ನಡೆಯುತ್ತಿರುವ ಕಾಂಗ್ರೆಸ್ ನಾಯಕರ ಪರಸ್ಪರ ಕಚ್ಚಾಟದ ಸಂಬಂಧ ಪ್ರಶ್ನೆಗೆ ಉತ್ತರಿಸಿದ ಅವರು, ಕಾಂಗ್ರೆಸ್‌ನ ಅವನತಿಯನ್ನು ಪ್ರಸ್ತುತ ಯಾರಿಗೂ ನೋಡಲಾಗುತ್ತಿಲ್ಲ ಎಂದು ವ್ಯಂಗ್ಯವಾಡಿದ್ದಾರೆ. ವಾಸ್ತವವಾಗಿ, ಕಾಂಗ್ರೆಸ್‌ನ ಮುಂಬಯಿ ಘಟಕದ ಮುಖ್ಯಸ್ಥ ಸ್ಥಾನಕ್ಕೆ ರಾಜೀನಾಮೆ ನೀಡಿರುವ ಮಾಜಿ ಕೇಂದ್ರ ಸಚಿವ ಮಿಲಿಂದ್ ದೇವ್ರಾ ಮತ್ತು ಘಟಕದ ಮಾಜಿ ಮುಖ್ಯಸ್ಥ ಸಂಜಯ್ ನಿರುಪಮ್ ಅವರ ನಡುವೆ ಟ್ವಿಟ್ಟರ್‌ನಲ್ಲಿ ಕಚ್ಚಾಟ ನಡೆಯುತ್ತಿದೆ.
ರಾಜಕೀಯವಾಗಿ ಬೆಳೆಯಲು ಏಣಿಯೇ: ನಿರುಪಮ್
ದೇವ್ರಾ ರಾಜೀನಾಮೆ ಸಲ್ಲಿಸಿದ ಅನಂತರ, ನಾನು ಮೂರು ಸದಸ್ಯರ ಸಮಿತಿಯನ್ನು (ನಗರ ಪಕ್ಷದ ಘಟಕದ ಮೇಲ್ವಿಚಾರಣೆಗೆ) ಸೂಚಿಸಿದ್ದೇನೆ ಮತ್ತು ಹೆಸರುಗಳನ್ನು ಗುರುತಿಸಲು ನಾಯಕರನ್ನು ಸಂಪರ್ಕಿಸುತ್ತಿದ್ದೇನೆ. ಪಕ್ಷವನ್ನು ಸ್ಥಿರಗೊಳಿಸಲು ರಾಷ್ಟ್ರೀಯ ಪಾತ್ರವನ್ನು ವಹಿಸಲು ನಾನು ಎದುರು ನೋಡುತ್ತಿದ್ದೇನೆ ಎಂದು ಟ್ವೀಟ್ ಮಾಡಿದ್ದರು. ಇದಕ್ಕೆ ಪ್ರತಿದಾಳಿ ನಡೆಸಿರುವ ನಿರುಪಮ್, ರಾಜೀನಾಮೆ ತ್ಯಾಗದ ಭಾವನೆಯೊಂದಿಗೆ ಸಂಬಂಧ ಹೊಂದಿದೆ. ಆದರೆ, ಈ ವಿಷಯದಲ್ಲಿ “ರಾಷ್ಟ್ರೀಯ’ ಮಟ್ಟದ ಹು¨ªೆಯನ್ನು ಕೋರಲಾಗುತ್ತಿದೆ. ಇದು ರಾಜೀನಾಮೆಯೇ ಅಥವಾ ರಾಜಕೀಯವಾಗಿ ಬೆಳೆಯಲು ಏಣಿಯೇ? ಇಂತಹ ಜನರ ಬಗ್ಗೆ ಪಕ್ಷವು ಜಾಗರೂಕವಾಗಿರಬೇಕು ಎಂದಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Vasundhara Raje ಬೆಂಗಾವಲು ವಾಹನ ಪಲ್ಟಿ; ನಾಲ್ವರು ಪೊಲೀಸರಿಗೆ ಗಾಯ
Highest honour: ಪ್ರಧಾನಿ ನರೇಂದ್ರ ಮೋದಿಗೆ ಕುವೈಟ್‌ನ ಅತ್ಯುನ್ನತ ಗೌರವ ಪ್ರದಾನ
Delhi; ಅಕ್ರಮ ಬಾಂಗ್ಲಾ ವಲಸಿಗರ ವಿರುದ್ಧ ಕಾರ್ಯಾಚರಣೆ: 175 ಮಂದಿ ಪತ್ತೆ
Mohan Bhagwat; ತಿಳಿವಳಿಕೆಯ ಕೊರತೆಯಿಂದ ಧರ್ಮದ ಹೆಸರಿನಲ್ಲಿ ಶೋಷಣೆ
Allu Arjun: ನಟ ಅಲ್ಲು ಅರ್ಜುನ್ ಮನೆ ಮೇಲೆ ಕಲ್ಲು ತೂರಾಟ; ದಾಳಿಗೆ ಯತ್ನ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.