ರಾಜಕೀಯಕ್ಕೆ ತಲೈವಾ ಎಂಟ್ರಿ : ಶೀಘ್ರದಲ್ಲಿ ಪಕ್ಷದ ಹೆಸರು ಘೋಷಣೆ
Team Udayavani, Mar 12, 2020, 11:20 AM IST
ಚೆನ್ನೈ : ದೇಶದ ರಾಜಕೀಯ ವ್ಯವಸ್ಥೆಯನ್ನು ಬದಲಾಯಿಸುವ ಅಗತ್ಯವಿದೆ. ರಾಜಕೀಯ ಪಕ್ಷಗಳು ಮತಕ್ಕಾಗಿ ಮಾತ್ರ ಜನರ ಬಳಿ ಹೋಗುತ್ತವೆ. ಯುವ ಜನತೆ ರಾಜಕೀಯದಲ್ಲಿ ಹೆಚ್ಚಾಗಿ ತೊಡಗಿಕೊಳ್ಳಬೇಕೆಂದು ನಟ ರಜನಿಕಾಂತ್ ಹೇಳಿದರು.
ಚೆನ್ನೈ ನ ಖಾಸಗಿ ಹೋಟೇಲ್ ನಲ್ಲಿ ನಡೆಸಿದ ಸುದ್ದಿಗೋಷ್ಠಿಯಲ್ಲಿ ಮಾತಾನಾಡಿದ ಅವರು, ನನ್ನ ರಾಜಕೀಯ ಊಹಾಪೋಹದ ಬಗ್ಗೆ ಕಳೆದ 15 ವರ್ಷಗಳಿಂದ ಸುದ್ಧಿ ಹಬ್ಬುತ್ತಲೇ ಇದೆ. 1996 ರಿಂದಲೂ ನನ್ನ ಹೆಸರು ರಾಜಕೀಯದ ಜೊತೆ ನಂಟಾಗಿತ್ತು. 2017 ರಲ್ಲಿ ರಾಜಕೀಯ ಪ್ರವೇಶದ ಬಗ್ಗೆ ಉಹಾಪೋಹ ಹರಡಿತ್ತು. ಸರ್ಕಾರದ ಕೆಲಸಗಳು ಸಮಯಕ್ಕೆ ಸರಿಯಾಗಿ ಆಗುವುದಿಲ್ಲ. ರಾಜಕೀಯ ಪಕ್ಷಗಳು ಮತಕ್ಕಾಗಿ ಮಾತ್ರ ಜನರ ಬಳಿ ಹೋಗುತ್ತವೆ ಎಂದರು.
ರಾಜ್ಯದಲ್ಲಿ ಜಯಲಲಿತಾ ಬಳಿಕ ಪ್ರಬಲ ನಾಯಕತ್ವದ ಕೊರತೆಯಿದೆ. ರಾಜಕೀಯದಲ್ಲಿ ವಯಸ್ಸಾದವರೆ ಹೆಚ್ಚಿದ್ದಾರೆ. ನಿವೃತ ಐ.ಪಿ.ಎಸ್ , ಐ.ಎ.ಎಸ್ ಅಧಿಕಾರಿಗಳಿಗೆ ಪಕ್ಷಕ್ಕೆ ಆಹ್ವಾನ ನೀಡಿ ಪಕ್ಷವನ್ನು ಬಲಿಷ್ಠ ಗೊಳಿಸುತ್ತೇನೆ. ನನ್ನ ಪಕ್ಷದಲ್ಲಿ ಅನಗತ್ಯವಾಗಿ ಸಂಪನ್ಮೂಲಗಳಿಗೆ ಖರ್ಚು ಮಾಡುವುದಿಲ್ಲ, ಕೆಲಸ ಮಾಡದವರಿಗೆ ನನ್ನ ಪಕ್ಷದಲ್ಲಿ ಅವಕಾಶವಿಲ್ಲ ಎಂದರು. ಯುವ ಜನತೆ ರಾಜಕೀಯದಲ್ಲಿ ಹೆಚ್ಚಾಗಿ ತೊಡಗಿಕೊಳ್ಳಬೇಕು, ನನ್ನ ಪಕ್ಷದಲ್ಲಿ ಶೇ. 60-65 ರಷ್ಟು ಯುವಜನತೆಗೆ ಅವಕಾಶವನ್ನು ನೀಡುತ್ತೇನೆ ಎಂದು ಹೇಳಿದರು.
ರಾಜಕೀಯ ರಂಗಕ್ಕೆ ಪ್ರವೇಶಿಸಿದ ರಜನಿಕಾಂತ್, ಶೀಘ್ರದಲ್ಲಿ ತಮ್ಮ ರಾಜಕೀಯ ಪಕ್ಷದ ಹೆಸರನ್ನು ಘೋಷಿಸುವುದಾಗಿ ಹೇಳಿದರು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.