‘ಛೋಡೋ ಕಲ್ ಕೀ ಬಾತೇ…’: ಕರ್ತವ್ಯದ ಬಿಡುವಿನಲ್ಲಿ ಹಾಡು ಹಾಡಿ ರಿಲ್ಯಾಕ್ಸ್ ಆದ ಆರೋಗ್ಯ ಯೋಧರು
Team Udayavani, Mar 28, 2020, 1:17 AM IST
ಕೋವಿಡ್ 19 ವೈರಸ್ ನಂತಹ ಮಹಾಮಾರಿ ತಲ್ಲಣ ಸೃಷ್ಟಿಸಿರುವ ಈ ಸಂದರ್ಭದಲ್ಲಿ ನಮ್ಮ ಸುತ್ತಮುತ್ತಲಿರುವ ವೈದ್ಯರು, ದಾದಿಯರೇ ನಿಜವಾದ ಹೀರೋಗಳಾಗಿ ಹೊರಹೊಮ್ಮುತ್ತಿದ್ದಾರೆ. ಪ್ರತಿ ದಿನವೂ ಸೋಂಕು ಪೀಡಿತರ ಸಂಖ್ಯೆ ಏರಿಕೆಯಾಗುತ್ತಿದ್ದು, ಭಯಭೀತರಾಗಿ ಆಸ್ಪತ್ರೆಗಳಿಗೆ ಪರೀಕ್ಷೆಗೆಂದು ಧಾವಿಸುತ್ತಿರುವವರ ಸಂಖ್ಯೆಯೂ ಹೆಚ್ಚಾಗುತ್ತಿದೆ. ಹೀಗಾಗಿ, ವೈದ್ಯರು ಸೇರಿದಂತೆ ಆಸ್ಪತ್ರೆಯ ಸಿಬ್ಬಂದಿಯ ಮೇಲೆ ಒತ್ತಡವೂ ಹೆಚ್ಚಿದೆ.
ತಮ್ಮ ಕರ್ತವ್ಯದ ನಡುವೆ ಮಾನಸಿಕವಾಗಿಯೂ ದೃಢವಾಗಿರಬೇಕಾದ ಅನಿವಾರ್ಯತೆ ಇರುವಂಥ ಈ ಸಮಯದಲ್ಲಿ ರಾಜಸ್ಥಾನದ ವೈದ್ಯರ ತಂಡವೊಂದು ಗುಂಪಾಗಿ ಸೇರಿ ಹಾಡಿರುವ ವಿಡಿಯೋವೊಂದು ಈಗ ವೈರಲ್ ಆಗಿದೆ. ದೇಹಕ್ಕೆ ಸುರಕ್ಷತಾ ಉಡುಪುಗಳನ್ನು ಹಾಗೂ ಮಾಸ್ಕ್ ಧರಿಸಿಕೊಂಡು ಈ ವೈದ್ಯರು, ‘ಹಮ್ ಹಿಂದುಸ್ಥಾನಿ’ ಸಿನಿಮಾದ ‘ಛೋಡ್ ಕಲ್ ಕೀ ಬಾತೇಂ’ (ನಾಳೆಯ ವಿಷಯ ಬಿಟ್ಟುಬಿಡಿ) ಎಂಬ ಹಾಡನ್ನು ಹಾಡುವ ವಿಡಿಯೋವಿದು.
At the epicentre of COVID 19 in Rajasthan Government Hospital in Bhilwara – Drs Mushtaq, Gaur & Prajapat, paramedics Mukesh, Sain, Gyan, Urwashi, Sarfaraz and Jalam are working 24*7 to beat Coronavirus.
Take a bow, you are our true heroes!
This is the spirit of new India
???? pic.twitter.com/97ziZUrXOS— Rohit Kumar Singh (@rohitksingh) March 25, 2020
ಡಾಕ್ಟರ್ ಗಳಾದ ಮುಷ್ತಾಕ್, ಗೌರ್ ಹಾಗೂ ಪ್ರಜಾಪತ್ ಮತ್ತು ಪ್ಯಾರಾ ಮೆಡಿಕಲ್ ಸಿಬ್ಬಂದಿಗಳಾದ ಮುಖೇಶ್, ಸೈನ್, ಗ್ಯಾನ್, ಊರ್ವಶಿ, ಸರ್ಫರಾಜ್ ಮತ್ತು ಝಾಲಂ ಅವರ ತಂಡ ರಾಜಸ್ಥಾನದ ಭಿಲ್ವಾರದಲ್ಲಿರುವ ಸರಕಾರಿ ಆಸ್ಪತ್ರೆಯಲ್ಲಿ ಕೋವಿಡ್ 19 ಸೋಂಕು ಪೀಡಿತರ ಶುಷ್ರೂಷೆಯಲ್ಲಿ ಹಗಲಿರುಳೂ ತಮ್ಮನ್ನು ತೊಡಗಿಸಿಕೊಂಡಿದೆ.
ಇದನ್ನು ವೈದ್ಯಕೀಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ರೋಹಿತ್ ಕುರ್ಮಾ ಸಿಂಗ್ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ. ಜತೆಗೆ, ಈ ಮಾರಕ ವೈರಸ್ ವಿರುದ್ಧ ದಿನದ 24 ಗಂಟೆಯೂ ದಣಿವರಿಯದೇ ಹೋರಾಡುತ್ತಿರುವ ಈ ವೈದ್ಯರೇ ನಮ್ಮ ನಿಜವಾದ ಹೀರೋಗಳು. ಇದು ನವಭಾರತದ ಹುಮ್ಮಸ್ಸು ಎಂಬ ಅಡಿಬರಹವನ್ನೂ ಬರೆದಿದ್ದಾರೆ. ವಿಡಿಯೋ ಹೊರಬಂದ ಕೆಲವೇ ಕ್ಷಣಗಳಲ್ಲಿ ಇದು ಹಿಟ್ ಆಗಿದ್ದು, ಸಾವಿರಾರು ಮಂದಿ ವೈದ್ಯರನ್ನು ಹಾಡಿ ಹೊಗಳಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Goa ಕರಾವಳಿಯಲ್ಲಿ ನೌಕಾಪಡೆಯ ಸಬ್ ಮರೈನ್ ಗೆ ಡಿಕ್ಕಿ ಹೊಡೆದ ಬೋಟ್-ಇಬ್ಬರು ನಾಪತ್ತೆ!
Chhattisgarh: ಭದ್ರತಾ ಪಡೆ ದಾಳಿಗೆ 10 ನಕ್ಸಲರು ಹತ… ಅಪಾರ ಪ್ರಮಾಣದ ಶಸ್ತ್ರಾಸ್ತ್ರ ವಶ
Tragedy: ಸ್ನೇಹಿತನ ಮದುವೆ ಮಂಟಪದಲ್ಲೇ ಕುಸಿದು ಬಿದ್ದು ಅಮೆಜಾನ್ ಉದ್ಯೋಗಿ ಮೃತ್ಯು
Three Nation Trip: 5 ದಿನದಲ್ಲಿ 3 ದೇಶಗಳ ಪ್ರವಾಸ ಮುಗಿಸಿ ತವರಿಗೆ ಮರಳಿದ ಪ್ರಧಾನಿ ಮೋದಿ
Adani ವಿರುದ್ಧ ಲಂಚ ಆರೋಪ; ಏನಿದು ಪ್ರಕರಣ? ಅಮೆರಿಕದಲ್ಲಿ ಪ್ರಕರಣ ಏಕೆ?
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.