Rajasthan Election: ಬಿಜೆಪಿ ಅಭ್ಯರ್ಥಿಗಳ ನಾಲ್ಕನೇ ಪಟ್ಟಿ ಬಿಡುಗಡೆ
Team Udayavani, Nov 3, 2023, 12:15 PM IST
ರಾಜಸ್ಥಾನ: ಮುಂಬರುವ ವಿಧಾನಸಭೆ ಚುನಾವಣೆಗೆ ರಾಜಸ್ಥಾನದಲ್ಲಿ ಬಿಜೆಪಿ ತನ್ನ ಅಭ್ಯರ್ಥಿಗಳ ನಾಲ್ಕನೇ ಪಟ್ಟಿಯನ್ನು ಇಂದು ಬಿಡುಗಡೆ ಮಾಡಿದೆ.
ಬಿಜೆಪಿ ಬಿಡುಗಡೆ ಮಾಡಿದ ಪಟ್ಟಿಯಲ್ಲಿ ರಾಮ್ ನಿವಾಸ್ ಮೀನಾ ಹಾಗೂ ಸ್ವರೂಪ್ ಸಿಂಗ್ ಖಾರಾ ಇಬ್ಬರ ಹೆಸರನ್ನು ಮಾತ್ರ ಬಿಡುಗಡೆಮಾಡಿದ್ದು , ಅದರಲ್ಲಿ ರಾಮ್ ನಿವಾಸ್ ಮೀನಾ ಅವರು ತೋಡಭೀಮ್ (ಎಸ್‌ಸಿ) ಸ್ಥಾನದಿಂದ ಕಣಕ್ಕಿಳಿದಿದ್ದಾರೆ. ಆದರೆ, ಸ್ವರೂಪ್ ಸಿಂಗ್ ಖಾರಾ ಅವರಿಗೆ ಶಿವ ಕ್ಷೇತ್ರದಿಂದ ಟಿಕೆಟ್ ನೀಡಲಾಗಿದೆ.
ಇದಕ್ಕೂ ಮುನ್ನ ಬಿಜೆಪಿ ಮೂರು ಪಟ್ಟಿಗಳನ್ನು ಬಿಡುಗಡೆ ಮಾಡುವ ಮೂಲಕ 182 ಅಭ್ಯರ್ಥಿಗಳ ಹೆಸರನ್ನು ಬಹಿರಂಗಪಡಿಸಿತ್ತು, ಇದೀಗ ನಾಲ್ಕನೇ ಪಟ್ಟಿ ಬಿಡುಗಡೆ ಮಾಡಿದ್ದೂ ಇದರಲ್ಲಿ ಇಬ್ಬರ ಹೆಸರನ್ನು ಬಹಿರಂಗಪಡಿಸುವ ಮೂಲಕ ಒಟ್ಟು 184 ಸ್ಥಾನಗಳಿಗೆ ಅಭ್ಯರ್ಥಿಗಳ ಹೆಸರನ್ನು ಬಿಡುಗಡೆ ಮಾಡಿದಂತಾಗಿದೆ.
ಇನ್ನು ಬಿಜೆಪಿ ಕೇವಲ 16 ಸ್ಥಾನಗಳಿಗೆ ಅಭ್ಯರ್ಥಿಗಳನ್ನು ಘೋಷಿಸಬೇಕಾಗಿದೆ.
ರಾಜಸ್ಥಾನದಲ್ಲಿ ಬಿಜೆಪಿ ಮತ್ತೆ ಅಧಿಕಾರಕ್ಕೆ ಮರಳಲು ಹೆಚ್ಚಿನ ತಯಾರಿ ನಡೆಸುತ್ತಿದೆ. ಪೃಥ್ವಿರಾಜ್ ಮೀನಾ ತೋಡಭೀಮ್ ಕ್ಷೇತ್ರದ ಶಾಸಕರಾಗಿದ್ದಾರೆ. ಇಲ್ಲಿ 2018ರ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ನ ಪೃಥ್ವಿರಾಜ್ ಮೀನಾ ತೋಡಭೀಮ್‌ನಿಂದ ಗೆದ್ದಿದ್ದರು. ಪೃಥ್ವಿರಾಜ್ 1,07,691 ಮತಗಳಿಂದ ಗೆಲುವು ಸಾಧಿಸಿದ್ದಾರೆ. ಬಿಜೆಪಿಯ ರಮೇಶ್ ಚಂದ್ ಅವರಿಗೆ ಕೇವಲ 34,385 ಮತಗಳು ಮಾತ್ರ ಸಿಕ್ಕಿತ್ತು ಆದರೆ ಈ ಬಾರಿ ಈ ಕ್ಷೇತ್ರವನ್ನು ಬಿಜೆಪಿ ಪಡೆಯಲು ಸಾಕಷ್ಟು ಪ್ರಯತ್ನಮಾಡುತ್ತಿದೆ.
ಅದರಂತೆ ರಾಜಸ್ಥಾನದ ಪಶ್ಚಿಮ ವಲಯದ ಲಾಲ್ ಶಿವ ವಿಧಾನಸಭಾ ಸ್ಥಾನಕ್ಕೆ ಚುನಾವಣಾ ಸ್ಪರ್ಧೆಯು ಬಹುತೇಕ ಪೈಪೋಟಿಯಿಂದ ಕೂಡಿದೆ. ಒಂದು ಕಾಲದಲ್ಲಿ ಅಭ್ಯರ್ಥಿಗಳೂ ಸಿಗದ ಕ್ಷೇತ್ರವಿದು. ಜನರನ್ನು ಬಲವಂತವಾಗಿ ಮನೆಯಿಂದ ಕರೆದೊಯ್ದು ದಾಖಲಾತಿ ಮಾಡಲಾಯಿತು. ಆದರೆ, ಈಗ ಈ ಸ್ಥಾನ ರಾಜಕೀಯವಾಗಿ ಮಹತ್ವ ಪಡೆದಿದೆ. 30 ವರ್ಷಗಳಿಂದ ಇಲ್ಲಿ ಪಕ್ಷ ಪುನರಾವರ್ತನೆಯಾಗಿಲ್ಲ. 1993ರಿಂದ ಇಲ್ಲಿಗೆ ಕಾಂಗ್ರೆಸ್ ಒಮ್ಮೆ, ಬಿಜೆಪಿ ಒಮ್ಮೆ ಅಧಿಕಾರಕ್ಕೆ ಬಂದಿವೆ.
ಇದನ್ನೂ ಓದಿ: Rave paryt: ಹಾವಿನ ವಿಷದ ರೇವ್ ಪಾರ್ಟಿ;BigBoss OTT 2 ವಿಜೇತ ಎಲ್ವಿಶ್ ಸೇರಿ ಐವರ ಬಂಧನ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Allu Arjun ನಿವಾಸದಲ್ಲಿ ದಾಂಧಲೆ!; 8 ಮಂದಿ ಬಂಧನ: ಕೃತ್ಯ ಎಸಗಿದ್ದು ಯಾರು?
Vasundhara Raje ಬೆಂಗಾವಲು ವಾಹನ ಪಲ್ಟಿ; ನಾಲ್ವರು ಪೊಲೀಸರಿಗೆ ಗಾಯ
Highest honour: ಪ್ರಧಾನಿ ನರೇಂದ್ರ ಮೋದಿಗೆ ಕುವೈಟ್‌ನ ಅತ್ಯುನ್ನತ ಗೌರವ ಪ್ರದಾನ
Delhi; ಅಕ್ರಮ ಬಾಂಗ್ಲಾ ವಲಸಿಗರ ವಿರುದ್ಧ ಕಾರ್ಯಾಚರಣೆ: 175 ಮಂದಿ ಪತ್ತೆ
Mohan Bhagwat; ತಿಳಿವಳಿಕೆಯ ಕೊರತೆಯಿಂದ ಧರ್ಮದ ಹೆಸರಿನಲ್ಲಿ ಶೋಷಣೆ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.