ರಾಜಸ್ಥಾನ್ ಪಂಚಾಯತ್ ಚುನಾವಣೆ ಫಲಿತಾಂಶ: ಬಿಜೆಪಿಗೆ ಭರ್ಜರಿ ಜಯ, ಆಡಳಿತಾರೂಢ “ಕೈ”ಗೆ ಹಿನ್ನಡೆ
ರಾಜ್ಯದ 636 ಜಿಲ್ಲಾ ಪರಿಷತ್ ವಾರ್ಡ್ ಗಳಲ್ಲಿ ಬಿಜೆಪಿ 312 ಸ್ಥಾನಗಳಲ್ಲಿ ಜಯ ಸಾಧಿಸಿದೆ.
Team Udayavani, Dec 9, 2020, 11:00 AM IST
ಜೈಪುರ್: ರಾಜಸ್ಥಾನದಲ್ಲಿ ನಡೆದ ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಭಾರತೀಯ ಜನತಾ ಪಕ್ಷ ಭರ್ಜರಿ ಗೆಲುವು ಸಾಧಿಸುವ ಮೂಲಕ ಆಡಳಿತ ಚುಕ್ಕಾಣಿ ಹಿಡಿದಿದೆ. ಆಡಳಿತಾರೂಢ ಕಾಂಗ್ರೆಸ್ ಪಂಚಾಯತ್ ಚುನಾವಣೆಯಲ್ಲಿ ಹಿನ್ನಡೆ ಅನುಭವಿಸಿದೆ.
ರಾಜಸ್ಥಾನದ 4,371 ಪಂಚಾಯತ್ ಸಮಿತಿ ವಾರ್ಡ್ ಗೆ ನಡೆದ ಚುನಾವಣೆಯಲ್ಲಿ ಬಿಜೆಪಿ 1,835 ವಾರ್ಡ್ ಗಳಲ್ಲಿ ಗೆಲುವು ಸಾಧಿಸಿದೆ. ಅಲ್ಲದೇ 11 ಜಿಲ್ಲಾ ಪರಿಷತ್ ನಲ್ಲಿ ಪೂರ್ಣ ಬಹುಮತ ಪಡೆದಿದೆ. ರಾಜ್ಯದ 636 ಜಿಲ್ಲಾ ಪರಿಷತ್ ವಾರ್ಡ್ ಗಳಲ್ಲಿ ಬಿಜೆಪಿ 312 ಸ್ಥಾನಗಳಲ್ಲಿ ಜಯ ಸಾಧಿಸಿರುವುದಾಗಿ ರಾಜಸ್ಥಾನದ ಚುನಾವಣಾ ಆಯೋಗ ಬಿಡುಗಡೆಗೊಳಿಸಿರುವ ಮಾಹಿತಿಯಲ್ಲಿ ವಿವರ ನೀಡಿದೆ.
1835 ವಾರ್ಡ್ ಗಳಲ್ಲಿ ಬಿಜೆಪಿ ಅಭ್ಯರ್ಥಿಗಳು ಗೆಲುವು ಸಾಧಿಸಿದ್ದು, ಕಾಂಗ್ರೆಸ್ ಪಕ್ಷ 1,718 ವಾರ್ಡ್ ಗಳಲ್ಲಿ ಜಯ ಸಾಧಿಸಿದೆ. 422 ಪಕ್ಷೇತರ ಅಭ್ಯರ್ಥಿಗಳು ಪಂಚಾಯತ್ ಚುನಾವಣೆಯಲ್ಲಿ ಜಯಗಳಿಸಿದ್ದಾರೆ. ಆರ್ ಎಲ್ ಪಿ 56 ವಾರ್ಡ್ಗಗಳಲ್ಲಿ, ಸಿಪಿಎಂ 16 ವಾರ್ಡ್ ಗಳಲ್ಲಿ ಹಾಗೂ ಮಾಯಾವತಿ ನೇತೃತ್ವದ ಬಿಎಸ್ಪಿ ಕೇವಲ 3 ವಾರ್ಡ್ ಗಳಲ್ಲಿ ಗೆಲುವು ಸಾಧಿಸಿರುವುದಾಗಿ ಆಯೋಗ ತಿಳಿಸಿದೆ.
ರಾಜ್ಯದ 21 ಜಿಲ್ಲಾ ಪರಿಷತ್ ಕ್ಷೇತ್ರದ 636 ವಾರ್ಡ್ ಗಳ ಪೈಕಿ 597 ವಾರ್ಡ್ ಗಳ ಫಲಿತಾಂಶವನ್ನು ಮಂಗಳವಾರ ರಾತ್ರಿ 11.30ಕ್ಕೆ ಚುನಾವಣಾ ಆಯೋಗ ಘೋಷಿಸಿದ್ದು, ಇದರಲ್ಲಿ ಬಿಜೆಪಿ 312 ವಾರ್ಡ್ ಗಳಲ್ಲಿ ಹಾಗೂ ಕಾಂಗ್ರೆಸ್ 239 ವಾರ್ಡ್ ಗಳಲ್ಲಿ ಮತ್ತು ಬಿಜೆಪಿ ಮೈತ್ರಿ ಪಕ್ಷ ಆರ್ ಎಲ್ ಪಿ 10 ವಾರ್ಡ್ ಗಳಲ್ಲಿ ಜಯ ಸಾಧಿಸಿರುವುದಾಗಿ ಆಯೋಗ ಹೇಳಿದೆ.
ಜಿಲ್ಲಾ ಪರಿಷತ್ ಚುನಾವಣೆಯಲ್ಲಿ ಒಟ್ಟು 17 ಪಕ್ಷೇತರ ಅಭ್ಯರ್ಥಿಗಳು ಗೆಲುವು ಸಾಧಿಸಿದ್ದು, ಹನುಮಾನ್ ಘಢ್ ಜಿಲ್ಲಾ ಪರಿಷತ್ ನ ಎರಡು ವಾರ್ಡ್ ಗಳಲ್ಲಿ ಸಿಪಿಎಂ ಗೆಲುವು ಸಾಧಿಸಿ ದಾಖಲೆ ಬರೆದಿರುವುದಾಗಿ ವರದಿ ತಿಳಿಸಿದೆ. ಭಾರತೀಯ ಜನತಾ ಪಕ್ಷ 11 ಜಿಲ್ಲಾ ಪರಿಷತ್ ನಲ್ಲಿ ಬಹುಮತ ಪಡೆದಿದ್ದು, ಆಡಳಿತಾರೂಢ ಕಾಂಗ್ರೆಸ್ ಐದು ಜಿಲ್ಲಾ ಪರಿಷತ್ ನಲ್ಲಿ ಪೂರ್ಣ ಬಹುಮತ ಪಡೆದಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Chennai: ತಮಿಳುನಾಡಿನಲ್ಲಿ ಮತ್ತೊಬ್ಬ ವೈದ್ಯನ ಮೇಲೆ ದಾಳಿ, ಪರಾರಿ
Manipur: ಮತ್ತೆ ಸಶಸ್ತ್ರಪಡೆಗಳ ಕಾಯ್ದೆ ಜಾರಿ; ಸೇನಾ ಕಾರ್ಯಾಚರಣೆ:ಶಸ್ತ್ರಾಸ್ತ್ರಗಳು ವಶಕ್ಕೆ
Waqf; ಅಮಾನತುಲ್ಲಾ ಖಾನ್ ಗೆ ಜಾಮೀನು: ಮೋದಿಯ ಸುಳ್ಳು ಪ್ರಕರಣ ಬಹಿರಂಗ ಎಂದ ಆಪ್
Kochi airport; ಶಬರಿಮಲೆ ಭಕ್ತರಿಗೆ ಅನುಕೂಲವಾಗುವಂತೆ ವಿಶೇಷ ವ್ಯವಸ್ಥೆಗಳು
Maharashtra Election; ಫಡ್ನವಿಸ್ ಪತ್ನಿಯ ವಿರುದ್ಧ ಕನ್ಹಯ್ಯಾ ಕುಮಾರ್ ಹೇಳಿಕೆ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.