ರಜನಿಕಾಂತ್‌ಗೆ “ಕಮಲ’ ಸೂಕ್ತ; ವರ್ಷಾಂತ್ಯಕ್ಕೆ ಕಮಲ್ ಪಕ್ಷ
Team Udayavani, Sep 26, 2017, 6:50 AM IST
ಚೆನ್ನೈ: ಹೊಸ ವರ್ಷದ ಆರಂಭದಲ್ಲಿ ತಮ್ಮ ನೇತೃತ್ವದ ಪಕ್ಷ ಆರಂಭವಾಗಲಿದೆ ಎಂದು ಬಹುಭಾಷಾ ನಟ ಕಮಲ್ ಹಾಸನ್ ಹೇಳಿದ್ದಾರೆ. ತಮಿಳು ಸೂಪರ್‌ಸ್ಟಾರ್ ರಜನಿಕಾಂತ್ ಬಗ್ಗೆ ಮಾತನಾಡಿದ ಅವರು ಧಾರ್ಮಿಕ ಹಿನ್ನೆಲೆ ಹೊಂದಿರುವ ರಜನಿಗೆ ಬಿಜೆಪಿಯೇ ಸೂಕ್ತ ಎಂದಿದ್ದಾರೆ.
ತಾವು ವಿಚಾರವಾದಿ ಎಂದು ಹೇಳಿಕೊಂಡ ಕಮಲ್‌ಹಾಸನ್ ಜಾತಿ ಮತ್ತು ಭ್ರಷ್ಟಾಚಾರದ ವಿರೋಧಿ ಎಂದರು. ತಮಿಳುನಾಡಿಗೆ ಒಳ್ಳೆಯ ದಿನಗಳು ಇನ್ನೂ ಬಂದಿಲ್ಲ ಎಂದು ಹೇಳಿದ ಅವರು, ಉಳಿದ ರಾಜ್ಯಗಳ ಬಗ್ಗೆ ಮಾತನಾಡಲು ಹೋಗುವುದಿಲ್ಲ ಎಂದು ಪ್ರತಿಪಾದಿಸಿದರು. “ನ್ಯೂಸ್18′ ಮತ್ತು “ಎನ್‌ಡಿಟಿವಿ’ಗೆ ನೀಡಿದ ಸಂದರ್ಶನದಲ್ಲಿ ಅವರು ಮಾತನಾಡಿದರು.
“ಡಿಎಂಕೆ ಮತ್ತು ಎಐಎಡಿಎಂಕೆ ನಡೆಸಿದ ಭ್ರಷ್ಟಾಚಾರಗಳನ್ನು ತಮಿಳುನಾಡಿನ ಜನರು ನೋಡಿದ್ದಾರೆ. ನನ್ನ ನೇತೃತ್ವದ ಹೊಸ ಪಕ್ಷದ 2018ರ ಆರಂಭದಲ್ಲಿಯೇ ಶುರುವಾಗಲಿದೆ. ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಜತೆಗಿನ ಭೇಟಿಯಲ್ಲಿ ಯಾವುದೇ ಮಹತ್ವ ಇಲ್ಲ. ಎಲ್ಲ ರೀತಿಯ ಮುಖಂಡರು, ನಾಯಕರ ಜತೆಗೆ ನಾನು ಭೇಟಿಯಾಗುತ್ತೇನೆ. ಹೀಗಾಗಿ ಅದಕ್ಕೆ ಏನೂ ಮಹತ್ವ ಇಲ್ಲ’ ಎಂದು ಹೇಳಿಕೊಂಡಿದ್ದಾರೆ. ಅವರಾಗಿಯೇ ತಮ್ಮ ಬಳಿಗೆ ಬಂದಿದ್ದರು ಎಂದು ಹೇಳಿದ್ದಾರೆ ಕಮಲ್.
ನಿಗದಿತ ಸಮಯ ಸಾಧ್ಯವಿಲ್ಲ: ಹೊಸ ಪಕ್ಷ ಯಾವಾಗ ಆರಂಭವಾಗುತ್ತದೆ ಎಂದು ಖಚಿತವಾಗಿ ಹೇಳಲು ಸಾಧ್ಯವಿಲ್ಲವಾದರೂ, ಮುಂದಿನ ವರ್ಷದ ಆರಂಭದಲ್ಲಿ ಅದು ಕಾರ್ಯರೂಪಕ್ಕೆ ಬರಬಹುದು ಎಂದು ಹೇಳಿದ್ದಾರೆ. ಅದಕ್ಕಾಗಿ ಬಹಳಷ್ಟು ತಯಾರಿ ಮಾಡಬೇಕಾಗಿದೆ ಎಂದು ಬಹು ಭಾಷಾ ನಟ ಪ್ರತಿಪಾದಿಸಿದ್ದಾರೆ.
ಹೋಲಿಕೆ ಸಲ್ಲದು
ಜಾತಿಪದ್ಧತಿ ಮತ್ತು ಭ್ರಷ್ಟಾಚಾರದ ವಿರೋಧಿ ಎಂದು ಹೇಳಿಕೊಂಡ ಕಮಲ್‌ಹಾಸನ್, ಸೂಪರ್‌ಸ್ಟಾರ್ ರಜನಿಕಾಂತ್ ಧಾರ್ಮಿಕ ಸ್ವಭಾವ ಇರುವ ವ್ಯಕ್ತಿ. ಹೀಗಾಗಿ ಅವರು ಬಿಜೆಪಿಗೆ ಸೂಕ್ತವಾದವರು ಎಂದರು. “ಅವರ ಮತ್ತು ನನ್ನ ದಾರಿ ಒಂದೇ ಆಗಿ ರಲು ಸಾಧ್ಯವಿಲ್ಲ. ಕಮಲ್ ಮತ್ತು ರಜನಿ ಎಂದು ಹೋಲಿಕೆ ಮಾಡುವುದೇ ಕೆಟ್ಟದ್ದು. ರಾಜಕೀಯ ಪ್ರವೇಶ ಮಾಡುತ್ತೇನೆ ಎಂದು ನಾನು ಘೋಷಣೆ ಮಾಡಿದ್ದೇನೆ’ ಎಂದು ಕಮಲ್ ಹೇಳಿದ್ದಾರೆ.
ರಾಜಕೀಯವೆಂದರೆ 100 ದಿನಗಳ ಕಾಲ ಓಡುವ ಸಿನಿಮಾ ಎಂದುಕೊಂಡಿದ್ದಾರೆ ಕಮಲ್ ಹಾಸನ್. ಮುಖ್ಯಮಂತ್ರಿಯ ಹುದ್ದೆ ಎಂದರೆ ಅಂಗಡಿಯಿಂದ ಕೊಳ್ಳುವ ಆಟಿಕೆಯೇ? ಅದಕ್ಕೆ ಜನರು ಒಪ್ಪಿಕೊಂಡು ಸ್ವೀಕರಿಸಬೇಕು.
– ಡಿ.ಜಯಕುಮಾರ್, ತಮಿಳುನಾಡು ಹಣಕಾಸು ಸಚಿವ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Baby Boy: ಎರಡನೇ ಮಗುವಿಗೆ ತಂದೆಯಾದ ಖುಷಿಯಲ್ಲಿ ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ
Waqf Notice: ಬಸನಗೌಡ ಪಾಟೀಲ್ ಯತ್ನಾಳ್ ತಂಡದಿಂದ 1 ತಿಂಗಳು ಜನ ಜಾಗೃತಿ
Waqf Issue: ಕಾಂಗ್ರೆಸ್ ಸರಕಾರದ ವಿರುದ್ಧ ಬಿಜೆಪಿಯಿಂದ “ನಮ್ಮ ಭೂಮಿ ನಮ್ಮ ಹಕ್ಕು” ಹೋರಾಟ
Employees: 70 ಗಂಟೆ ಕೆಲಸ ಹೇಳಿಕೆಗೆ ಸದಾ ಬದ್ಧ: ಇನ್ಫಿ ನಾರಾಯಣ ಮೂರ್ತಿ
Black Days: ಜಮೀರ್+ ನಾಲ್ವರು ಕೊಚ್ಚೆ, ದೂರ ಇಟ್ಟಿದ್ದೇನೆ: ಎಚ್.ಡಿ.ಕುಮಾರಸ್ವಾಮಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.