ಮಾಜಿ ಪ್ರಧಾನಿ ರಾಜೀವ್ ಗಾಂಧಿ ಹತ್ಯೆಯಾಗಿ ಇಂದಿಗೆ 28 ವರ್ಷ
ಮಾಜಿ ಪ್ರಧಾನಿ ಪುಣ್ಯ ತಿಥಿ; ಕಾಂಗ್ರೆಸ್ ನಾಯಕರಿಂದ ಪುಷ್ಪನಮನ
Team Udayavani, May 21, 2019, 9:45 AM IST
ಹೊಸದಿಲ್ಲಿ: ಮಾಜಿ ಪ್ರಧಾನಿ ರಾಜೀವ್ ಗಾಂಧಿ ಅವರ ಪುಣ್ಯ ತಿಥಿಯನ್ನು ಮಂಗಳವಾರ ಆಚರಿಸಲಾಗುತ್ತಿದ್ದು, ಯಮುನಾ ತೀರದಲ್ಲಿರುವ ವೀರಭೂಮಿಯಲ್ಲಿರುವ ಅವರ ಸಮಾಧಿಗೆ ಕುಟುಂಬ ಸದಸ್ಯರು ಸೇರಿ ಕಾಂಗ್ರೆಸ್ ನಾಯಕರು ಪುಷ್ಪನಮನ ಸಲ್ಲಿಸಿದರು.
ಸೋನಿಯಾ ಗಾಂಧಿ , ರಾಹುಲ್ ಗಾಂಧಿ, ಪ್ರಿಯಾಂಕಾ ಗಾಂಧಿ ವಾದ್ರಾ , ರಾಬರ್ಟ್ ವಾದ್ರಾ ಸೇರಿದಂತೆ ಕುಟುಂಬ ಸದಸ್ಯರು ಪುಷ್ಪ ನಮನ ಸಲ್ಲಿಸಿದರು.
ಮಾಜಿ ಪ್ರಧಾನಿ ಡಾ.ಮನಮೋಹನ್ ಸಿಂಗ್, ಮಾಜಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅವರು ಪುಪ್ಪ ನಮನ ಸಲ್ಲಿಸಿದರು.
1944 ರ ಅಗಸ್ಟ್ 20 ರಂದು ಜನಿಸಿದ್ದ ರಾಜೀವ್ ಗಾಂಧಿ ಅವರು ಭಾರತದ 6 ನೇ ಪ್ರಧಾನಮಂತ್ರಿಯಾಗಿದ್ದರು. ಉತ್ತರ ಪ್ರದೇಶದ ಅಮೇಥಿ ಲೋಕಸಭಾ ಕ್ಷೇತ್ರವನ್ನು ಪ್ರತಿನಿಧಿಸುತ್ತಿದ್ದರು.
1991 ಮೇ 21 ರಂದು ತಮಿಳುನಾಡಿನ ಶ್ರೀಪೆರಂಬದೂರುವಿನಲ್ಲಿ ಎಲ್‌ಟಿಟಿಇ ಉಗ್ರರು ಬಾಂಬ್ ಇಟ್ಟು ಹತ್ಯೆಗೈದಿದ್ದರು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.