Air India pilot;ಕೆಲಸದ ಅವಧಿ ಮುಗೀತು ಎಂದ ಪೈಲಟ್: 100 ಏರ್ ಇಂಡಿಯಾ ಪ್ರಯಾಣಿಕರು ಅತಂತ್ರ
Team Udayavani, Jul 25, 2023, 7:20 AM IST
ನವದೆಹಲಿ: ಗುಜರಾತ್‌ನ ರಾಜ್‌ಕೋಟ್ ವಿಮಾನನಿಲ್ದಾಣದಲ್ಲಿ ಭಾನುವಾರ ರಾತ್ರಿ ಬಿಜೆಪಿಯ ಮೂವರು ಸಂಸದರೂ ಸೇರಿ 100 ಪ್ರಯಾಣಿಕರು ಅತಂತ್ರಗೊಂಡಿದ್ದರು!
ಕಾರಣವೇನು ಗೊತ್ತಾ? ರಾತ್ರಿ 8.30ಕ್ಕೆ ಹೊರಡಬೇಕಿದ್ದ ಏರ್ ಇಂಡಿಯಾ ವಿಮಾನದ ಪೈಲಟ್ ತನ್ನ ಕೆಲಸದ ಅವಧಿ ಮುಗಿದಿದೆ, ಮತ್ತೆ ವಿಮಾನ ಚಲಾಯಿಸುವಷ್ಟು ಶಕ್ತಿಯಿಲ್ಲ ಎಂದಿದ್ದು.
ರಾಜ್‌ಕೋಟ್ ಸಂಸದ ಮೋಹನ್ ಕುಂದರಿಯ, ಜಾಮ್‌ನಗರ ಸಂಸದ ಪೂನಮ್ ಮಾದಾಮ್, ಹೊಸತಾಗಿ ರಾಜ್ಯಸಭೆಗೆ ಆಯ್ಕೆಯಾಗಿರುವ ಕೇಸರಿದೇವಸಿನ್ಹ ಝಲಾ ಅತಂತ್ರಗೊಂಡ 100 ಮಂದಿಯಲ್ಲೊಬ್ಬರಾಗಿದ್ದರು! ಇದರಿಂದ ನಿರ್ವಹಣಾ ಸಿಬ್ಬಂದಿ ತೀರಾ ಗೊಂದಲಕ್ಕೀಡಾಗಿದ್ದರು.
ಯಾರ್ಯಾರು ಕೂಡಲೇ ದೆಹಲಿಗೆ ತಲುಪಲೇಬೇಕಿತ್ತೋ ಅವರನ್ನು ಅಹ್ಮದಾಬಾದ್ ವಿಮಾನನಿಲ್ದಾಣಕ್ಕೆ ರಸ್ತೆ ಮಾರ್ಗದ ಮೂಲಕ ತಲುಪಿಸಲಾಯಿತು. ಉಳಿದವರಿಗೆ ಊಟ, ವಸತಿ ವ್ಯವಸ್ಥೆ ಮಾಡಿ, ಟಿಕೆಟ್ ಹಣವನ್ನೂ ಮರಳಿಸಲಾಯಿತು. ಮಾತ್ರವಲ್ಲ ಅವರಿಗೆ ಇನ್ನೊಂದು ವಿಮಾನದಲ್ಲಿ ಕಳಿಸಲು ಏರ್ಪಾಡೂ ಆಯಿತು. ನಾವು ಗಮನಿಸಬೇಕಾಗಿದ್ದೇನೆಂದರೆ, ಪೈಲಟ್ ಹೇಳಿರುವುದು ಸಂಪೂರ್ಣ ಕಾನೂನುಬದ್ಧವಾಗಿದೆ! ಎಫ್ಡಿಟಿಎಲ್ (ಫ್ಲೈಟ್ ಡ್ನೂಟಿ ಟೈಮ್ ಲಿಮಿಟ್) ನಿಯಮಗಳ ಪ್ರಕಾರ ಕೆಲಸದ ಸಮಯ ಮುಗಿದ ನಂತರ ಕಾಕ್‌ಪಿಟ್ ಸಿಬ್ಬಂದಿ ಕರ್ತವ್ಯ ಮುಂದುವರಿಸುವಂತಿಲ್ಲ. ಇದರಲ್ಲಿ ಯಾವುದೇ ರಾಜಿಗೆ ಅವಕಾಶವಿಲ್ಲ ಎಂದು ಏರ್ ಇಂಡಿಯಾ ವಕ್ತಾರರೇ ಸ್ಪಷ್ಟಪಡಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kasganj: ವಿವಾಹಿತನಿಗೆ ಪೊಲೀಸ್ ಠಾಣೆಯಲ್ಲಿ ಬಲವಂತದಿಂದ ಮತ್ತೊಂದು ವಿವಾಹ!SPಗೆ ದೂರು!
Uttara Pradesh: ಬುಲ್ಡೋಜರ್ ಬಳಸಿ ಬಿಜೆಪಿ ಕಚೇರಿಯನ್ನೇ ತೆರವುಗೊಳಿಸಿದ ಯುಪಿ ಸರ್ಕಾರ
Manipur ಗಲಭೆಗಳಲ್ಲಿ ‘ಸ್ಟಾರ್‌ಲಿಂಕ್’ ಬಳಕೆ: ಆರೋಪ ನಿರಾಕರಿಸಿದ ಎಲಾನ್ ಮಸ್ಕ್
AAP; ಸಂಜಯ್ ಸಿಂಗ್ ವಿರುದ್ಧ ಗೋವಾ ಸಿಎಂ ಪತ್ನಿಯಿಂದ 100 ಕೋಟಿ ಮಾನನಷ್ಟ ಮೊಕದ್ದಮೆ
ಯುವಕರನ್ನು ಆಕರ್ಷಿಸಲು ನಾನಾ “ರಜೆ’ಗಳ ಸುರಿಮಳೆ; ಸಾಕುಪ್ರಾಣಿಗಳ ಜತೆ ಕಾಲ ಕಳೆಯಲೂ ರಜೆ
MUST WATCH
ಹೊಸ ಸೇರ್ಪಡೆ
Mangaluru; ಕೆಲರೈ- ವಾಮಂಜೂರು ಸಂಪರ್ಕ ರಸ್ತೆ ಅವ್ಯವಸ್ಥೆ
Davangere: 2021ರಲ್ಲಿ ಅಪ್ರಾಪ್ತೆಯನ್ನು ಅಪಹರಿಸಿ ಅತ್ಯಾಚಾರವೆಸಗಿದ್ದವನಿಗೆ ಶಿಕ್ಷೆ ಪ್ರಕಟ
Chitradurga: ನಿವೃತ್ತ ಶಿಕ್ಷಕಿ ಬಳಿ ಲಂಚ ಸ್ವೀಕರಿಸುತ್ತಿದ್ದ ವೇಳೆ ಲೋಕಾಯುಕ್ತ ರೇಡ್
Mangaluru: ವೆನ್ಲಾಕ್‌ನಲ್ಲಿ ದೊರೆಯಲಿದೆ ಕಿಮೋಥೆರಪಿ
Ullal: ತೊಕ್ಕೊಟ್ಟು ಜಂಕ್ಷನ್ – ಭಟ್ನಗರ ರಸ್ತೆಯಲ್ಲಿ ಉಲ್ಟಾ ಸಂಚಾರ!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.