Parliament Session: ಅದಾನಿ, ಸೊರೊಸ್ ಗದ್ದಲಕ್ಕೆ ಸಂಸತ್ ಕಲಾಪ ಬಲಿ
Team Udayavani, Dec 10, 2024, 9:38 PM IST
ನವದೆಹಲಿ: ಅದಾನಿ ಗ್ರೂಪ್ ವಿರುದ್ಧದ ಲಂಚ ಆರೋಪ, ಅಮೆರಿಕ-ಹಂಗೇರಿ ಮೂಲದ ಉದ್ಯಮಿ ಜಾರ್ಜ್ ಸೊರೊಸ್ ಬೆಂಬಲಿತ ಸಂಸ್ಥೆ ಜತೆಗೆ ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿಗೆ ಲಿಂಕ್ ಇದೆ ಎಂಬ ವಿಚಾರ ಮಂಗಳವಾರ ಕೂಡ ಸಂಸತ್ ಕಲಾಪಕ್ಕೆ ಅಡ್ಡಿಯಾಯಿತು.
ಸತತ 2ನೇ ವಾರ ಕೂಡ ಕಲಾಪ ನಡೆಸಲು ಸಾಧ್ಯವಾಗಿಲ್ಲ. ಲೋಕಸಭೆ ಬೆಳಗ್ಗೆ 11 ಗಂಟೆಗೆ ಸಮಾವೇಶಗೊಳ್ಳುತ್ತಿದ್ದಂತೆಯೇ ಸೊರೊಸ್ ವಿಚಾರ, ಅದಾನಿ ಲಂಚ ಪ್ರಕರಣ ಕೋಲಾಹಲಕ್ಕೆ ಕಾರಣವಾಯಿತು. ಶೂನ್ಯ ವೇಳೆಯಲ್ಲಿ ಮಾತಾಡಿದ ಸಚಿವ ಕಿರಣ್ ಕಾಂಗ್ರೆಸ್ ನಾಯಕರು ಉದ್ಯಮಿ ಸೊರೊಸ್ ಕೈಜೋಡಿಸಿದ್ದಾರೆ ಎಂದರು. ಅವರ ಮಾತು ಕೋಲಾಹಲ ಸೃಷ್ಟಿಸಿತು. ಹೀಗಾಗಿ, ಕಲಾಪ ನಡೆಸಲು ಸಾಧ್ಯವಾಗದೆ ಬುಧವಾರಕ್ಕೆ ಕಲಾಪ ಮುಂದೂಡಲಾಯಿತು. ರಾಜ್ಯಸಭೆಯಲ್ಲಿ ಸಚಿವ ಜೆ.ಪಿ.ನಡ್ಡಾ ಕಾಂಗೆಸ್ ನಾಯಕರ ವಿರುದ್ಧ ಸೊರೊಸ್ ಜತೆಗಿನ ಲಿಂಕ್ ಬಗ್ಗೆ ಆರೋಪ ಮಾಡಿದಾಗ ಕೋಲಾಹಲ ಉಂಟಾಯಿತು. ನಂತರ ಕಲಾಪವನ್ನು ದಿನದ ಮಟ್ಟಿಗೆ ಮುಂದೂಡಲಾಯಿತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Henley Passport Index: ಸಿಂಗಾಪುರಕ್ಕೆ ಮೊದಲ ಸ್ಥಾನ: ಭಾರತದ ಪಾಸ್ಪೋರ್ಟ್ ಎಷ್ಟು ಸದೃಢ?
Dense Fog: ದೆಹಲಿ-ಲಖನೌ ಹೆದ್ದಾರಿಯಲ್ಲಿ ಸರಣಿ ಅಪಘಾತ, ವಿಮಾನ, ರೈಲು ಸಂಚಾರದಲ್ಲಿ ವ್ಯತ್ಯಯ
ಸೊಸೆಯಾಗಿ ಬರಬೇಕಾಗಿದ್ದವಳನ್ನೇ ಮದುವೆಯಾದ ಅಪ್ಪ… ಬೇಸರದಿಂದ ಸನ್ಯಾಸಿಯಾಗಲು ಹೊರಟ ಮಗ
Bhopal: ಬಿಜೆಪಿ ಮಾಜಿ ಶಾಸಕ ಸಿಂಗ್ ನಿವಾಸದ ಮೇಲೆ ಐಟಿ ದಾಳಿ; ನಗದು, 3 ಮೊಸಳೆ ಪತ್ತೆ!
ಪರೀಕ್ಷೆಯಿಂದ ತಪ್ಪಿಸಿಕೊಳ್ಳಲು 23ಶಾಲೆಗೆ ಬಾಂಬ್ ಬೆದರಿಕೆ ಹಾಕಿದ್ದ 12ನೇ ತರಗತಿ ವಿದ್ಯಾರ್ಥಿ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.