ರಾಜ್ಯಸಭೆಗೆ 250ನೇ ಅಧಿವೇಶನ ಸಂಭ್ರಮ: ಇಲ್ಲಿದೆ ಕೆಲವು ಕುತೂಹಲಕಾರಿ ಅಂಶಗಳು


Team Udayavani, Nov 19, 2019, 3:33 PM IST

Parliament-of-India-726

ಸಾಂದರ್ಭಿಕ ಚಿತ್ರವನ್ನು ಬಳಸಲಾಗಿದೆ – Representative Image Used

ನವದೆಹಲಿ: ಸೋಮವಾರದಿಂದ ಸಂಸತ್ತಿನ ಚಳಿಗಾಲದ ಅಧಿವೇಶನ ಆರಂಭವಾಗಿದೆ. ಈ ಅಧಿವೇಶನದ ಮೂಲಕ 67 ವರ್ಷಗಳ ಇತಿಹಾಸವುಳ್ಳ ರಾಜ್ಯಸಭೆ ತನ್ನ 250ನೇ ಆಧಿವೇಶನದ ಸಂಭ್ರಮದಲ್ಲಿದೆ. 1952ರ ಮೇ 13ರಂದು ಮೊದಲ ಅಧಿವೇಶನಕ್ಕೆ ಸಾಕ್ಷಿಯಾಗಿತ್ತು.

ಈ ಕುರಿತಂತೆ ಮೇಲ್ಮನೆಯ ಇತಿಹಾಸ ಮತ್ತು ಪ್ರಮುಖ ಘಟನೆಗಳನ್ನು ಸಾರುವ ಕೈಪಿಡಿಯನ್ನು ಉಪರಾಷ್ಟ್ರಪತಿಗಳು ಬಿಡುಗಡೆ ಮಾಡಿದ್ದಾರೆ. ಅದರಲ್ಲಿ ಹಲವಾರು ಕುತೂಹಲಕಾರಿ ಅಂಕಿ ಅಂಶಗಳನ್ನು ಉಲ್ಲೇಖಿಸಲಾಗಿದೆ.

ಆಸಕ್ತಿದಾಯಕ ಅಂಕಿ ಅಂಶಗಳು:
ಇದುವರೆಗೆ ಮೇಲ್ಮನೆ ಅಂಗೀಕರಿಸಿದ ಮಸೂದೆಗಳು : 3,924

ತಿರಸ್ಕರಿಸಿದ ಸಂವಿಧಾನ ತಿದ್ದುಪಡಿ ಮಸೂದೆಗಳು : 03

ರಾಜ್ಯಸಭೆಯಿಂದ ಉಚ್ಚಾಟನೆಗೊಂಡಿರುವ ಸದಸ್ಯರು : 03

ವಾಗ್ದಂಡನೆ ಪ್ರಕ್ರಿಯೆ : 01

ಲೋಕಸಭೆಯಲ್ಲಿ ಅಂಗೀಕೃತವಾಗಿ ರಾಜ್ಯಸಭೆಯು ತಿರಸ್ಕರಿಸಿದ ಮಸೂದೆಗಳ ಒಟ್ಟು ಸಂಖ್ಯೆ: 05

ರಾಜ್ಯಸಭೆ ಮಂಡಿಸಿದ ಮಸೂದೆಗಳು ಪಾಸ್‌ : 120

ರಾಜ್ಯಸಭೆಯಲ್ಲಿ ನಡೆದ ಕಾರ್ಯ ಕಲಾಪಗಳು : 5466

ಮಂಡಿಸಲಾದ ಒಟ್ಟು ಮಸೂದೆಗ‌ಳು : 944

ಹಿಂದಕ್ಕೆ ಪಡೆದ ಬಿಲ್‌ಗ‌ಳು : 104

ಬಾಕಿ ಉಳಿದಿರುವ ಬಿಲ್‌ಗ‌ಳು : 38

ರಾಜ್ಯಸಭೆ ಅನುಮೋದಿಸಿದ ಬಿಲ್‌ಗ‌ಳು : 3,817

ರಾಜ್ಯಸಭೆಗೆ ಈವರೆಗೆ ಆಯ್ಕೆಗೊಂಡಿರುವ ಒಟ್ಟು ಸದಸ್ಯರು : 2,282

ರಾಜ್ಯ ಸಭೆಯಲ್ಲಿ ಕಾರ್ಯನಿರ್ವಹಿಸಿದ ಮಹಿಳೆಯರು : 208

ಮಹಿಳೆಯರ ಮೀಸಲಾತಿ

ವರ್ಷ  –        ಸಂಸದೆಯರು            –  ಶೇ.

1952  –        15      –        6.94

2014  –        31      –        12.76

2019  –        26      –        10.83

ಪ್ರಸ್ತುತ ಏಳನೇ ಅವಧಿಗೆ ಆಯ್ಕೆಗೊಂಡಿರುವ ಬಿಜೆಪಿಯ ಮಹೇಂದ್ರ ಪ್ರಸಾದ್‌ ಅವರು ರಾಜ್ಯಸಭೆಯಲ್ಲಿ ಅತಿ ದೀರ್ಘ‌ಕಾಲ ಸೇವೆ ಸಲ್ಲಿಸಿರುವ ಸದಸ್ಯರಾಗಿದ್ದಾರೆ. ಆ ಬಳಿಕದ ಸ್ಥಾನದಲ್ಲಿ ಮಾಜೀ ಪ್ರಧಾನಿ ಮತ್ತು ಹಣಕಾಸು ತಜ್ಞ ಡಾ| ಮನಮೋಹನ್‌ ಸಿಂಗ್‌ ಅವರಿದ್ದು, ಒಟ್ಟು ಆರು ಸಲ ಇವರು ರಾಜ್ಯಸಭೆಗೆ ಆಯ್ಕೆಯಾಗಿದ್ದಾರೆ. ಮಣಿಪುರದ ರಾಜ್ಯಪಾಲೆಯಾಗಿರುವ ನಜ್ಮಾ ಹೆಫ್ತುಲ್ಲಾ ಅವರು ರಾಜ್ಯಸಭೆಯಲ್ಲಿ 36 ವರ್ಷಗಳ ಸುದೀರ್ಘ‌ ಸೇವೆ ಸಲ್ಲಿಸಿದ ಮಹಿಳೆಯಾಗಿದ್ದಾರೆ.

ಅಪರೂಪದ ದಾಖಲೆಗಳು
ರಾಜ್ಯಸಭೆಯು 2 ಬಾರಿ ಬೇರೆ ರಾಜ್ಯಗಳಲ್ಲಿ ರಾಷ್ಟ್ರಪತಿ ಆಡಳಿತ ಹೇರಿಕೆಗೆ ಅನುಮತಿ ನೀಡಿತ್ತು. ಸಂವಿಧಾನದ ವಿಧಿ 356(3)ರ ಅಡಿ ಲೋಕಸಭೆಯನ್ನು ವಿರ್ಜಿಸಿದ್ದ ಸಂದರ್ಭದಲ್ಲಿ ರಾಜ್ಯಸಭೆಯು ಈ ಕೆಲಸ ಮಾಡಿತ್ತು.

  1. 1977ರಲ್ಲಿ ಮೊದಲಬಾರಿಗೆ ತಮಿಳುನಾಡು ಮತ್ತು ನಾಗಾಲ್ಯಾಂಡ್‌.
  2. 1991ರಲ್ಲಿ ಹರಿಯಾಣದಲ್ಲಿ ರಾಷ್ಟ್ರಪತಿ ಆಳ್ವಿಕೆ ಹೇರಲಾಗಿತ್ತು.

1 ಟೈ-ಟೈ

1991ರಲ್ಲಿ ಅಪರಾಧ ಪ್ರಕ್ರಿಯೆಯ ತಿದ್ದುಪಡಿ ಸುಗ್ರೀವಾಜ್ಞೆಗೆ ಒಪ್ಪಿಗೆ ಪಡೆಯಲಾಗುತ್ತಿತ್ತು. ಇದನ್ನು ಮತಕ್ಕೆ ಹಾಕಿದಾಗ ಪರ-ವಿರುದ್ಧ ತಲಾ 39 ಮತಗಳು ಬಂದಿದ್ದವು. ಇಂತಹ ಪರಿಸ್ಥಿತಿ ಎದುರಾದಾಗ ಸಭಾಧ್ಯಕರ ಮತಕ್ಕೆ ಮೌಲ್ಯ ಬರುತ್ತದೆ. ಆಗ ಸಭಾಪತಿ ಪೀಠದಲ್ಲಿದ್ದ ಸಿಪಿಎಂ ಸದಸ್ಯ ಎಂ.ಎ. ಬೇಬಿ ಅವರು ನಿರ್ಣಯದ ಪರ ಮತ ಚಲಾಯಿಸಿದ್ದರು. ಇದು ಏಕೈಕ ಉದಾಹರಣೆಯಾಗಿದೆ.

9 ಮಧ್ಯರಾತ್ರಿ ಕಲಾಪ

– ಒಂಬತ್ತು ಬಾರಿ ಮಧ್ಯರಾತ್ರಿಯವರೆಗೂ ಕಲಾಪ ನಡೆಸಿದ ದಾಖಲೆಯನ್ನು ರಾಜ್ಯಸಭೆ ಹೊಂದಿದೆ.

– 1981ರ ಡಿ. 17ರಂದು ನಡೆದ ಚರ್ಚೆಯು ಮರುದಿನ ನಸುಕಿನ 4.43ರ ವರೆಗೆ ನಡೆದಿತ್ತು. ಇದು ಮೇಲ್ಮನೆಯ ಇತಿಹಾಸದಲ್ಲಿ ದಾಖಲಾಗಿರುವ ಅತೀ ಸುದೀರ್ಘ‌ ಕಲಾಪವಾಗಿದೆ.

– 1986ರ ಡಿ.29ರಂದು ಬೊಫೋರ್ಸ್‌ ಗನ್‌ ಖರೀದಿಗಾಗಿ ನಡೆದ ಚರ್ಚೆಯು ಮರುದಿನ ನಸುಕಿನ 3.22ರ ವರೆಗೆ ನಡೆದಿತ್ತು.

ಉಚ್ಚಾಟನೆಗೊಂಡವರು
ಸುಬ್ರಮಣಿಯನ್‌ ಸ್ವಾಮಿ ಅವರು ತುರ್ತು ಪರಿಸ್ಥಿತಿಯ ಸಂದರ್ಭದಲ್ಲಿ ಅವರ ನಡವಳಿಕೆಗಳು ಸದನಕ್ಕೆ ಅಗೌರವ ತರುವಂತಿತ್ತು ಎಂಬ ಕಾರಣಕ್ಕೆ ನ.15, 1976ರಂದು ಉಚ್ಚಾಟನೆಗೊಂಡಿದ್ದರು.

ಛತ್ರಪಾಲ್‌ ಸಿಂಗ್‌ ಲೋಧ ಅವರು  ರಾಜ್ಯಸಭೆಯಲ್ಲಿ ಪ್ರಶ್ನೆ ಕೇಳಲು ಹಣ ಕೊಡುವಂತೆ ಬೇಡಿಕೆ ಮಂಡಿಸಿದ ಕಾರಣ 2005ರಲ್ಲಿ ಉಚ್ಚಾಟನೆಗೊಂಡಿದ್ದರು. ಸಂಸದರ ಕ್ಷೇತ್ರಾಭಿವೃದ್ಧಿಗಾಗಿ ಸರಕಾರ ಕೊಡುವ ನಿಧಿ ದುರ್ಬಳಕೆ ಆರೋಪದಲ್ಲಿ ಸಾಕ್ಷಿ ಮಹರಾಜ್‌ ಅವರನ್ನು 2006ರಲ್ಲಿ ಉಚ್ಚಾಟಿಸಲಾಗಿತ್ತು.

120 ತಿದ್ದುಪಡಿ
– ಲೋಕಪಾಲ ಮತ್ತು ಲೋಕಾಯುಕ್ತ ಮಸೂದೆಗಳು ಸೇರಿದಂತೆ ಲೋಕಸಭೆಯು ಅಂಗೀಕರಿಸಿದ್ದ ಒಟ್ಟು 120 ಮಸೂದೆಗಳಿಗೆ ರಾಜ್ಯಸಭೆ ಅನುಮೋದನೆ ನೀಡಿದೆ.

ಸುದೀರ್ಘಚರ್ಚೆಗಳು
12.04 ಗಂಟೆ:
1991ರ ಜೂನ್‌ 4ರಂದು ರಾಜೀವ್‌ ಗಾಂಧಿ ಅವರಿಗೆ ಭದ್ರತೆ ಒದಗಿಸುವಲ್ಲಿ ಆಗಿರುವ ವೈಫ‌ಲ್ಯದ ಬಗ್ಗೆ ನಡೆದ ಚರ್ಚೆಯ ಅವಧಿ.

11.37 ಗಂಟೆ: 1992ರ ಡಿ. 18 ಮತ್ತು 21ರಲ್ಲಿ ಬಾಬರಿ ಮಸೀದಿ ಕೆಡವಿದ ವಿಚಾರವಾಗಿ ನಡೆದ ಚರ್ಚೆಯ ಅವಧಿ.

10.06 ಗಂಟೆ: 2007ರ ಡಿ. 4 ಮತ್ತು 12ರಂದು ಭಾರತ- ಅಮೆರಿಕ ಅಣು ಒಪ್ಪಂದ ಕುರಿತ ಚರ್ಚೆಯ ಅವಧಿ.

ಟಾಪ್ ನ್ಯೂಸ್

UV-Navaroopa

Manipal: ಗ್ರಾಮೀಣ ಓದುಗರ ಸ್ಪಂದನೆಯೇ ಯಶಸ್ಸು: ಎಂಡಿ, ಸಿಇಒ ವಿನೋದ್‌ ಕುಮಾರ್‌

uppunda1

Uppunda: ಶ್ರೀದುರ್ಗಾಪರಮೇಶ್ವರಿ ಅಮ್ಮನವರ ಸಂಭ್ರಮದ ಮನ್ಮಹಾರಥೋತ್ಸವ

Govinda-pai-Book

Udupi: ಗೋವಿಂದ ಪೈಗಳ ಸಂಶೋಧನ ಬರಹಗಳು ಸಮಗ್ರತೆಯ ಹೂರಣ: ಡಾ.ವಿವೇಕ್‌ ರೈ

DK SHI NEW

MLAs 50 ಕೋಟಿ ರೂ.; ಸಾಕ್ಷಿ ಕೊಡುವ ಹೊಣೆ ಯತ್ನಾಳ್‌ದು: ಡಿಕೆಶಿ

Patla-yakshadruva

Mangaluru: ಎಲ್ಲ ವರ್ಗದ ಜನರ ಸಹಕಾರದಿಂದ ಸಾಮಾಜಿಕ ಸಾಧನೆ: ಕನ್ಯಾನ ಸದಾಶಿವ ಶೆಟ್ಟಿ

Vijayendra (2)

Congress 40 ಪರ್ಸೆಂಟ್‌ ಕಮಿಷನ್‌ ಆರೋಪ ಸುಳ್ಳೆಂದು ಸಾಬೀತು: ಬಿಜೆಪಿ

police

Belgavi; ವೇಶ್ಯಾವಾಟಿಕೆ ಆರೋಪ: ತಾಯಿ, ಮಗಳನ್ನು ರಸ್ತೆಗೆ ಎಳೆದು ಹಲ್ಲೆ!


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ec-aa

Poll code violations ; ಖರ್ಗೆ, ನಡ್ಡಾ ಪ್ರತಿಕ್ರಿಯೆ ಕೇಳಿದ ಚುನಾವಣ ಆಯೋಗ

amit Shah (2)

Rahul Gandhi ಭರವಸೆಗಳನ್ನು ನೀಡುತ್ತಾರೆ ಮತ್ತು ವಿದೇಶಕ್ಕೆ ಹಾರುತ್ತಾರೆ: ಶಾ ವಾಗ್ದಾಳಿ

1-ragaaa

PM Modi ಅವರು ಜೋ ಬೈಡೆನ್ ಅವರಂತೆ ನೆನಪಿನ ಶಕ್ತಿ ಕಳೆದುಕೊಳ್ಳುತ್ತಿದ್ದಾರೆ: ರಾಹುಲ್ ಗಾಂಧಿ

Resign: ಶಿರೋಮಣಿ ಅಕಾಲಿದಳದ ಅಧ್ಯಕ್ಷ ಸ್ಥಾನಕ್ಕೆ ಸುಖಬೀರ್ ಸಿಂಗ್ ಬಾದಲ್ ರಾಜೀನಾಮೆ

Resign: ಶಿರೋಮಣಿ ಅಕಾಲಿದಳದ ಅಧ್ಯಕ್ಷ ಸ್ಥಾನಕ್ಕೆ ಸುಖಬೀರ್ ಸಿಂಗ್ ಬಾದಲ್ ರಾಜೀನಾಮೆ

DKShi

Maharashtra; ನಮ್ಮ ಮೈತ್ರಿ ಕೂಟ ಗೆದ್ದು ಮಹಾರಾಷ್ಟ್ರ ಉಳಿಸಲಿದೆ: ಡಿ.ಕೆ. ಶಿವಕುಮಾರ್

MUST WATCH

udayavani youtube

ಇಂಗ್ಲೀಷ್ ಒಂದು ಭಾಷೆ ಅನ್ನೋದೇ ತಪ್ಪು -ಪ್ರಕಾಶ್ ಬೆಳವಾಡಿ

udayavani youtube

ಕಾರಿನ ಟಯರ್ ಒಳಗಿತ್ತು ಬರೋಬ್ಬರಿ 50 ಲಕ್ಷ

udayavani youtube

ಹೊಸ ತಂತ್ರಜ್ಞಾನಕ್ಕೆ ತೆರೆದುಕೊಂಡ ತುಳುನಾಡ ಕಂಬಳ

udayavani youtube

ಉಡುಪಿಯ ಶ್ರೀ ಕೃಷ್ಣ ಮಠದಲ್ಲಿ ಕಾರ್ತಿಕ ಲಕ್ಷದೀಪೋತ್ಸವ

udayavani youtube

ಪುಂಗನೂರು ತಳಿಯ ಹಾಲು ಯಾವೆಲ್ಲ ಕಾಯಿಲೆಗಳನ್ನು ಗುಣಪಡಿಸುತ್ತದೆ ?

ಹೊಸ ಸೇರ್ಪಡೆ

UV-Navaroopa

Manipal: ಗ್ರಾಮೀಣ ಓದುಗರ ಸ್ಪಂದನೆಯೇ ಯಶಸ್ಸು: ಎಂಡಿ, ಸಿಇಒ ವಿನೋದ್‌ ಕುಮಾರ್‌

puttige-4

Udupi; ಗೀತಾರ್ಥ ಚಿಂತನೆ 96 : ವ್ಯಾಮೋಹ ಜಾಲ vs ಜಾಗೃತಾತ್ಮ

uppunda1

Uppunda: ಶ್ರೀದುರ್ಗಾಪರಮೇಶ್ವರಿ ಅಮ್ಮನವರ ಸಂಭ್ರಮದ ಮನ್ಮಹಾರಥೋತ್ಸವ

Govinda-pai-Book

Udupi: ಗೋವಿಂದ ಪೈಗಳ ಸಂಶೋಧನ ಬರಹಗಳು ಸಮಗ್ರತೆಯ ಹೂರಣ: ಡಾ.ವಿವೇಕ್‌ ರೈ

DK SHI NEW

MLAs 50 ಕೋಟಿ ರೂ.; ಸಾಕ್ಷಿ ಕೊಡುವ ಹೊಣೆ ಯತ್ನಾಳ್‌ದು: ಡಿಕೆಶಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.