Rajya Sabha; ನಿಲ್ಲದ ಗದ್ದಲಕ್ಕೆ ಕಲಾಪವೇ ಆಪೋಶನ

ಸಭಾಪತಿ ಧನಕರ್‌ ವಿರುದ್ಧ ಖರ್ಗೆ ಹೇಳಿಕೆ ಬಗ್ಗೆ ನಡ್ಡಾ ಕಿಡಿ

Team Udayavani, Dec 13, 2024, 6:15 AM IST

1-ram

ಹೊಸದಿಲ್ಲಿ: ಉಪ ರಾಷ್ಟ್ರಪತಿ ಮತ್ತು ರಾಜ್ಯಸಭೆ ಸಭಾಪತಿ ಜಗದೀಪ್‌ ಧನ್‌ಕರ್‌ ವಿರುದ್ಧ ಅವಿಶ್ವಾಸ ಗೊತ್ತುವಳಿ ಮಂಡಿಸಲು ಐಎನ್‌ಡಿಐಎ ಒಕ್ಕೂಟ ನೋಟಿಸ್‌ ಸಲ್ಲಿಸಿರುವುದು ಗುರುವಾರ ರಾಜ್ಯಸಭೆಯಲ್ಲಿ ಕೋಲಹಾಲಕ್ಕೆ ಕಾರಣವಾಯಿತು. ಜತೆಗೆ ದಿನವಿಡೀ ಕಲಾಪ ನಡೆಸಲು ಸಾಧ್ಯವೇ ಆಗಲಿಲ್ಲ. ಅಲಹಾಬಾದ್‌ ಹೈಕೋರ್ಟ್‌ ಜಡ್ಜ್ ಶೇಖರ್‌ ಯಾದವ್‌ ವಿರುದ್ಧ ವಾಗ್ಧಂಡನೆ ನೋಟಿಸ್‌ ಸೇರಿದಂತೆ ಯಾವ ವಿಷಯವನ್ನೂ ಚರ್ಚಿಸದೆ ಸಭಾಪತಿಗಳು ಕಲಾಪವನ್ನು ಶುಕ್ರವಾರಕ್ಕೆ ಮುಂದೂಡಿದ್ದಾರೆ.

ಕಲಾಪ ಆರಂಭವಾಗುತ್ತಿದ್ದಂತೆಯೇ ಸದನದ ನಾಯಕ ಜೆ.ಪಿ.ನಡ್ಡಾ ಮಾತನಾಡಿ, ಪತ್ರಿಕಾಗೋಷ್ಠಿಯಲ್ಲಿ ಸಭಾಪತಿಗಳ ವಿರುದ್ಧ ಹೇಳಿಕೆ ನೀಡುವ ಮೂಲಕ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಸದನ ಹಾಗೂ ಸಭಾಪತಿ ಇಬ್ಬರಿಗೂ ಅವಮಾನ ಮಾಡಿದ್ದಾರೆ. ಖುದ್ದು ಸಭಾಪತಿಗಳೇ ಪತ್ರ ಬರೆದು ಚರ್ಚೆಯಲ್ಲಿ ಭಾಗವಹಿಸಲು ಕೋರಿದರೂ ಬರ‌ದೇ ತಮಗೆ ಅವಕಾಶ ನೀಡಿಲ್ಲ ಎಂದು ಸುಳ್ಳು ಹೇಳಿದ್ದಾರೆ. ಸೊರೊಸ್‌ ಮತ್ತು ಸೋನಿಯಾ ನಡುವಿನ ನಂಟು ಏನು ಎಂದು ಇಡೀ ದೇಶ ಪ್ರಶ್ನಿಸುತ್ತಿದೆ ಹೀಗಾಗಿ ವಿಷಯಾಂತರಿಸಲು ಈ ಪತ್ರಿಕಾಗೋಷ್ಠಿ ನಡೆಸಲಾಗಿದೆ ಎಂದು ನಡ್ಡಾ ಆರೋಪಿಸಿದರು. ಇದು ಆಡಳಿತ ಹಾಗೂ ವಿಪಕ್ಷಗಳ ನಡುವೆ ವಾಗ್ವಾದಕ್ಕೆ ಕಾರಣವಾಗಿ ಕಲಾಪ ಮುಂದೂಡಲ್ಪಟ್ಟಿದೆ.

ವಿಪಕ್ಷದ ವಾಕ್‌ಸ್ವಾತಂತ್ರ್ಯ ಹತ್ತಿಕ್ಕುವ ಸಭಾಪತಿ: ಖರ್ಗೆ
ರಾಜ್ಯಸಭೆಯಲ್ಲಿ ಪ್ರಜಾಪ್ರಭುತ್ವ ತುಳಿಯುವ ಪ್ರವೃತ್ತಿ ಮಾಮೂಲಿ ಆಗಿಬಿಟ್ಟಿದೆ. ವಿಪಕ್ಷಗಳು ಸಾರ್ವಜನಿಕ ಸಮಸ್ಯೆಗಳನ್ನು ಚರ್ಚೆಗೆಂದು ತಂದರೆ ಅವುಗಳನ್ನು ನಿರಾಕರಿಸುವುದು, ಅನಗತ್ಯ ಮಧ್ಯಪ್ರವೇಶಿಸಿ ಅನುಚಿತ ಹೇಳಿಕೆ ನೀಡುತ್ತಾ ವಿಪಕ್ಷಗಳ ವಾಕ್‌ ಸ್ವಾತಂತ್ರ್ಯವನ್ನು ರಾಜ್ಯಸಭಾ ಸಭಾಪತಿ ಹತ್ತಿಕ್ಕುತ್ತಿದ್ದಾರೆ ಎಂದು ಖರ್ಗೆ ಟ್ವೀಟ್‌ ಮಾಡಿದ್ದಾರೆ. ಜತೆಗೆ ಸಭಾಪತಿ ಧನ್‌ಕರ್‌ ಅಧಿಕಾರದ ದುರುಪಯೋಗ ಮಾಡುತ್ತಿದ್ದು, ಕಲಾಪ ಪ್ರಸಾರ ಮಾಡುವ ಸಂಸದ್‌ ಟಿವಿಯಲ್ಲೂ ಪಕ್ಷಪಾತ ಮಾಡಲಾಗುತ್ತಿದೆ ಎಂದೂ ಆರೋಪಿಸಿದ್ದಾರೆ.

ಟಾಪ್ ನ್ಯೂಸ್

1-udu

Udupi; ಮಕರ ಸಂಕ್ರಾಂತಿ ಸಂಭ್ರಮ: ಕೃಷ್ಣ ಗೀತಾನುಗ್ರಹ ಮಂಟಪ ಉದ್ಘಾಟನೆ

1-BINIL

Ukraine-Russia war: ರಷ್ಯಾ ಸೇನೆಯಲ್ಲಿದ್ದ ಕೇರಳದ ವ್ಯಕ್ತಿ ಸಾ*ವು

Udupi ಗೀತಾರ್ಥ ಚಿಂತನೆ-155: ಶೀತೋಷ್ಣಕ್ಕೂ ಸುಖದುಃಖಕ್ಕೂ ಸಂಬಂಧ

Udupi ಗೀತಾರ್ಥ ಚಿಂತನೆ-155: ಶೀತೋಷ್ಣಕ್ಕೂ ಸುಖದುಃಖಕ್ಕೂ ಸಂಬಂಧ

Mangaluru Airport: ದಾಖಲೆ ಸಂಖ್ಯೆ ಪ್ರಯಾಣಿಕರ ನಿರ್ವಹಣೆ

Mangaluru Airport: ದಾಖಲೆ ಸಂಖ್ಯೆ ಪ್ರಯಾಣಿಕರ ನಿರ್ವಹಣೆ

UPCL-Kasaragod: ಕಾಮಗಾರಿ ಚುರುಕು; ಭೂಮಿ, ಮರಗಳಿಗೆ ಹೆಚ್ಚಿನ ಪರಿಹಾರ: ವೆಂಕಟೇಶ್‌

UPCL-Kasaragod: ಕಾಮಗಾರಿ ಚುರುಕು; ಭೂಮಿ, ಮರಗಳಿಗೆ ಹೆಚ್ಚಿನ ಪರಿಹಾರ: ವೆಂಕಟೇಶ್‌

ಜ. 14-16: ಮಾರಣಕಟ್ಟೆಯಲ್ಲಿ ಮಕರ ಸಂಕ್ರಾಂತಿ

ಜ. 14-16: ಮಾರಣಕಟ್ಟೆಯಲ್ಲಿ ಮಕರ ಸಂಕ್ರಾಂತಿ

Belthangady ಕಡಿರುದ್ಯಾವರ: ಮತ್ತೆ ಕಾಡಾನೆ ದಾಳಿ

Belthangady ಕಡಿರುದ್ಯಾವರ: ಮತ್ತೆ ಕಾಡಾನೆ ದಾಳಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

suicide (2)

Kota ಸರಣಿ ಸುಸೈ*ಡ್‌ ಬೆನ್ನಲ್ಲೇ ಐಐಟಿ ಕ್ಯಾಂಪಸ್‌ನಲ್ಲಿ ವಿದ್ಯಾರ್ಥಿ ಆತ್ಮಹ*ತ್ಯೆ!

congress

LDF; ನೀಲಂಬೂರ್‌ ಶಾಸಕ ಅನ್ವರ್‌ ರಾಜೀನಾಮೆ: ‘ಕೈ’ಗೆ ಬೆಂಬಲ

MONEY (2)

Odisha:ಎಮರ್ಜೆನ್ಸಿ ವೇಳೆ ಜೈಲು ಸೇರಿದ್ದವರಿಗೆ 20,000 ಪಿಂಚಣಿ

MVA-Cong

Rift Widen: ಮೈತ್ರಿಕೂಟ ಪಾಲನೆ ಎನ್‌ಡಿಎ ನೋಡಿ ಕಲಿಯಿರಿ: ಕಾಂಗ್ರೆಸ್‌ಗೆ ಉದ್ಧವ್‌ ಬಣ ಪಾಠ

Siachen: ವಿಶ್ವದ ಅತಿ ಎತ್ತರದ ಯುದ್ಧಭೂಮಿಯಲ್ಲಿ ಜಿಯೋ 5ಜಿ

Siachen: ವಿಶ್ವದ ಅತಿ ಎತ್ತರದ ಯುದ್ಧಭೂಮಿಯಲ್ಲಿ ಜಿಯೋ 5ಜಿ

MUST WATCH

udayavani youtube

ಮಿದುಳು ನಿಷ್ಕ್ರಿಯಗೊಂಡಿದ್ದ ಮಹಿಳೆಯ ಅಂಗಾಂಗ ದಾನ

udayavani youtube

ಅಮೇರಿಕಾದಲ್ಲಿ ವೈಕುಂಠ ಏಕಾದಶಿ ಸಂಭ್ರಮ

udayavani youtube

ನಕ್ಸಲರ ಶರಣಾಗತಿಯಲ್ಲಿ ಸರಕಾರದ ನಡೆ ಸಂಶಯ ಮೂಡಿಸುವಂತಿದೆ: ಅಣ್ಣಾಮಲೈ |

udayavani youtube

ಹೇಗಿತ್ತು ಎಂ.ಜಿ.ಎಂ ಅಮೃತ ಮಹೋತ್ಸವ ಸಂಭ್ರಮ

udayavani youtube

ಕೇರಳದ ಉತ್ಸವದ ಆನೆ ರೌದ್ರಾವತಾರ: ಹಲವರಿಗೆ ಗಾಯ | ವಿಡಿಯೋ ಸೆರೆ

ಹೊಸ ಸೇರ್ಪಡೆ

Mahakumbaha1

Mahakumbh Mela 2025: 144 ವರ್ಷಗಳಿಗೆ ಒಮ್ಮೆ ನಡೆಯುವ ಆಧ್ಯಾತ್ಮಿಕ ವಿಸ್ಮಯ ಮಹಾ ಕುಂಭಮೇಳ

1-udu

Udupi; ಮಕರ ಸಂಕ್ರಾಂತಿ ಸಂಭ್ರಮ: ಕೃಷ್ಣ ಗೀತಾನುಗ್ರಹ ಮಂಟಪ ಉದ್ಘಾಟನೆ

1-palak

ಅಲಸಂಡೆ ಆಯಿತು, ಈಗ ಬಾಹ್ಯಾಕಾಶದಲ್ಲಿ ಚಿಗುರಿದ ಅಮಿಟಿ ವಿವಿಯ ಪಾಲಾಕ್‌

suicide (2)

Kota ಸರಣಿ ಸುಸೈ*ಡ್‌ ಬೆನ್ನಲ್ಲೇ ಐಐಟಿ ಕ್ಯಾಂಪಸ್‌ನಲ್ಲಿ ವಿದ್ಯಾರ್ಥಿ ಆತ್ಮಹ*ತ್ಯೆ!

1-BINIL

Ukraine-Russia war: ರಷ್ಯಾ ಸೇನೆಯಲ್ಲಿದ್ದ ಕೇರಳದ ವ್ಯಕ್ತಿ ಸಾ*ವು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.