ಭೂಮಿಪೂಜೆ ಜಗದಗಲ ವೀಕ್ಷಣೆ ; ಯೂಟ್ಯೂಬ್‌ನಲ್ಲೂ ಹಿಟ್
Team Udayavani, Aug 7, 2020, 6:34 AM IST
ಸಾಂದರ್ಭಿಕ ಚಿತ್ರವನ್ನು ಬಳಸಲಾಗಿದೆ – Representative Image Used
ಹೊಸದಿಲ್ಲಿ: ಪ್ರಧಾನಿ ಮೋದಿ ಅವರು ಶ್ರೀರಾಮ ಮಂದಿರಕ್ಕೆ ಶಿಲಾನ್ಯಾಸ ನೆರವೇರಿಸಿದ ದಿವ್ಯಕ್ಷಣ ವಿಶ್ವಾದ್ಯಂತ ಅಪಾರ ವೀಕ್ಷಣೆ ಪಡೆದಿದೆ.
ಭೂಮಿಪೂಜೆಯನ್ನು ದೂರದರ್ಶನ ನೇರಪ್ರಸಾರ ಮಾಡಿತ್ತು. ಡಿಡಿ ಹಿಂದೆಂದಿಗಿಂತ ಹೆಚ್ಚು ಕೆಮರಾಗಳನ್ನು ಇದಕ್ಕೆ ನಿಯೋಜಿಸಿತ್ತು.
ಎಲ್ಲೆಲ್ಲಿ ವೀಕ್ಷಣೆ?
ಅಮೆರಿಕ, ಇಂಗ್ಲೆಂಡ್‌ನ ಜನರು ಹೆಚ್ಚಿನ ಸಂಖ್ಯೆಯಲ್ಲಿ ಭೂಮಿಪೂಜೆ ವೀಕ್ಷಿಸಿದ್ದಾರೆ. ಕೆನಡಾ, ಆಸ್ಟ್ರೇಲಿಯಾದಲ್ಲಿರುವ ಭಾರತೀಯರು ಟಿವಿಯಲ್ಲಿ ಭೂಮಿಪೂಜೆಯನ್ನು ವೀಕ್ಷಿಸಿ ಪುನೀತರಾಗಿದ್ದಾರೆ.
ರಾಮಾಯಣದ ಸಾಂಸ್ಕೃತಿಕ ಅಲೆಯಿರುವ ಇಂಡೋನೇಷ್ಯಾ, ಕಾಂಬೋಡಿಯಾ, ಥಾಯ್ಲೆಂಡ್, ನೇಪಾಲಗಳಲ್ಲೂ ಹೆಚ್ಚು ಮಂದಿ ಕಾರ್ಯಕ್ರಮ ವೀಕ್ಷಿಸಿದ್ದಾರೆ.
200ಕ್ಕೂ ಹೆಚ್ಚು ಚಾನೆಲ್
ಭಾರತದಲ್ಲೂ ಭೂಮಿಪೂಜೆ ನಿರೀಕ್ಷೆಗೂ ಮೀರಿ ವೀಕ್ಷಣೆ ಪಡೆದಿದೆ. 200ಕ್ಕೂ ಹೆಚ್ಚು ಖಾಸಗಿ ಚಾನೆಲ್‌ಗಳಲ್ಲಿ ಐತಿಹಾಸಿಕ ಕ್ಷಣದ ನೇರಪ್ರಸಾರ ಬಿತ್ತರವಾಗಿದೆ. ಎಎನ್‌ಐ ಸುದ್ದಿಸಂಸ್ಥೆ ಮೂಲಕ ದೇಶದ 1,200 ಸ್ಟೇಷನ್‌ಗಳಿಗೆ ಸಿಗ್ನಲ್ ಹಂಚಿಕೆ ಮಾಡಲಾಗಿತ್ತು. ಅಲ್ಲದೆ ವಿದೇಶದ 450 ಸುದ್ದಿಮನೆಗಳಿಗೆ ಅಸೋಸಿಯೇಟ್ ಪ್ರಸ್ ಟೆಲಿವಿಷನ್ ನ್ಯೂಸ್ (ಎಪಿಟಿಎನ್) ಸಿಗ್ನಲ್ ಗಳನ್ನು ಹಂಚಿತ್ತು. ಏಷ್ಯಾ ಪೆಸಿಫಿಕ್ ದೇಶಗಳಿಗೆ ಡಿಡಿ ನ್ಯೂಸ್ ವಿಶೇಷವಾಗಿ ದೃಶ್ಯ ಪ್ರಸಾರ ಮಾಡಿತ್ತು.
ಯೂಟ್ಯೂಬ್‌ನಲ್ಲೂ ಹಿಟ್
ಡಿಜಿಟಲ್ ವೇದಿಕೆಯಲ್ಲೂ ಭೂಮಿಪೂಜೆ ಸೂಪರ್ ಹಿಟ್ ಆಗಿದೆ. ಅಮೆರಿಕ, ಇಂಗ್ಲೆಂಡ್, ಫ್ರಾನ್ಸ್, ಇಟಲಿ, ನೆದರ್ಲೆಂಡ್, ಜಪಾನ್, ಕೆನಡಾ, ಆಸ್ಟ್ರೇಲಿಯಾ, ನ್ಯೂಜಿಲೆಂಡ್, ಯುಎಇ, ಸೌದಿ ಅರೇಬಿಯಾ, ಒಮಾನ್, ಕುವೈಟ್, ನೇಪಾಲ, ಪಾಕಿಸ್ಥಾನ, ಬಾಂಗ್ಲಾ ದೇಶ, ಮಲೇಷ್ಯಾ, ಇಂಡೋ ನೇಷ್ಯಾ, ಥಾಯ್ಲೆಂಡ್, ಫಿಲಿಪ್ಪೀನ್ಸ್, ಸಿಂಗಾ ಪುರ, ಶ್ರೀಲಂಕಾ ಮತ್ತು ಮಾರಿಷಸ್‌ನ ನೆಟ್ಟಿಗರು ಯೂಟ್ಯೂಬ್ ಸ್ಟ್ರೀಮಿಂಗ್‌ನಲ್ಲಿ ಚಾರಿತ್ರಿಕ ಸಮಾರಂಭಕ್ಕೆ ಸಾಕ್ಷಿಯಾಗಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಹೋಮ್ ವರ್ಕ್ ಮಾಡದ್ದಕ್ಕೆ ಥಳಿಸಿದ ಶಿಕ್ಷಕ; ಕಣ್ಣ ದೃಷ್ಟಿಯನ್ನೇ ಕಳೆದುಕೊಂಡ ವಿದ್ಯಾರ್ಥಿ
AAP ತೊರೆದ ಬೆನ್ನಲ್ಲೇ ಬಿಜೆಪಿ ಸೇರ್ಪಡೆಗೊಂಡ ಕೇಜ್ರಿವಾಲ್ ಆಪ್ತ ಕೈಲಾಶ್ ಗೆಹ್ಲೋಟ್!
Gujarat: ಹಿರಿಯ ವಿದ್ಯಾರ್ಥಿಗಳ Ragging-ಪ್ರಥಮ ವರ್ಷದ ಎಂಬಿಬಿಎಸ್ ವಿದ್ಯಾರ್ಥಿ ಸಾ*ವು
Army Wepon: ಭಾರತದ ಬತ್ತಳಿಕೆಗೆ ದೇಸಿ ಹೈಪರ್‌ಸಾನಿಕ್ ಅಸ್ತ್ರ !
Mobs Storm: ಮಣಿಪುರದಲ್ಲಿ ಭುಗಿಲೆದ್ದ ಹಿಂಸಾಚಾರ!, ಮೈತೇಯಿ ಸಮುದಾಯದಿಂದ ಭಾರೀ ಪ್ರತಿಭಟನೆ
MUST WATCH
ಹೊಸ ಸೇರ್ಪಡೆ
Bidar: ಬಿಜೆಪಿಯವರು ಅಧಿಕಾರಕ್ಕಾಗಿ ಏನು ಮಾಡಲೂ ಹೇಸದವರು: ಈಶ್ವರ್ ಖಂಡ್ರೆ
Grant Fight: ಕರ್ನಾಟಕಕ್ಕೆ ಅನ್ಯಾಯವಾದಾಗ ಎಚ್‌ಡಿಡಿ, ಎಚ್‌ಡಿಕೆ ಮಾತಾಡಿದ್ದಾರಾ?: ಸಿಎಂ
PCB: ಒಂದು ವರ್ಷದಲ್ಲಿ ಐದು ಕೋಚ್; ಪಾಕಿಸ್ತಾನ ವೈಟ್ ಬಾಲ್ ಕೋಚ್ ಆಗಿ ಆಖಿಬ್ ಜಾವೇದ್ ಆಯ್ಕೆ
Muddebihal: ತೆರೆದ ಬಾವಿಯಲ್ಲಿ ತಾಯಿ-ಮಗಳ ಶವ ಪತ್ತೆ
Dubai ಬಾನೆತ್ತರದಲ್ಲಿ ಹಾರಾಟಕ್ಕೆ ಸಿದ್ದವಾಗುತ್ತಿದೆ…Drone ಏರ್‌ಟ್ಯಾಕ್ಸಿ-ಏನಿದರ ವಿಶೇಷ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.