ಬಿಗಿ ಭದ್ರತೆ; ರಾಮ್‌ರಹೀಂಗೆ 7 ವರ್ಷ ಅಥವಾ ಜೀವಾವಧಿ ಸಜೆ ಸಂಭವ
Team Udayavani, Aug 28, 2017, 6:15 AM IST
ರೋಹ್ಟಕ್/ನವದೆಹಲಿ: ಈಗಾಗಲೇ ಅತ್ಯಾಚಾರ ಪ್ರಕರಣದಲ್ಲಿ ದೋಷಿ ಎಂದು ಘೋಷಿತವಾಗಿರುವ ಡೇರಾ ಸಚ್ಚಾ ಸೌದಾದ ಸ್ವಘೋಷಿತ ದೇವಮಾನವ ಗುರ್ಮೀತ್ ರಾಂ ರಹೀಂ ಸಿಂಗ್‌ಗೆ ಸೋಮವಾರ ಶಿಕ್ಷೆ ಪ್ರಮಾಣ ಪ್ರಕಟವಾಗಲಿದ್ದು, ಹರ್ಯಾಣದ ಸೂಕ್ಷ್ಮ ಪ್ರದೇಶಗಳಲ್ಲಿ ಭದ್ರತಾ ಪಡೆಗಳ ಸರ್ಪಗಾವಲು ನಿಯೋಜಿಸಲಾಗಿದೆ.
ಪ್ರಕ್ಷುಬ್ಧ ಪರಿಸ್ಥಿತಿಯ ನಡುವೆಯೇ ರೋಹ್ಟಕ್ ಜೈಲಿನ ಕೊಠಡಿಯಲ್ಲಿ ತಾತ್ಕಾಲಿಕವಾಗಿ ವ್ಯವಸ್ಥೆ ಮಾಡಲಾಗಿರುವ ಸಿಬಿಐ ವಿಶೇಷ ಕೋರ್ಟ್‌ನಲ್ಲಿ ನ್ಯಾಯಾಧೀಶ ಜಗಿªàಪ್ ಸಿಂಗ್ ಅವರು ಮಧ್ಯಾಹ್ನ 2.30ಕ್ಕೆ ಶಿಕ್ಷೆ ಪ್ರಕಟಿಸಲಿದ್ದಾರೆ. ಇದಕ್ಕಾಗಿ ಜೈಲಿನ ಸುತ್ತ 7 ಹಂತದ ಭದ್ರತಾ ವ್ಯವಸ್ಥೆ ಕೈಗೊಳ್ಳಲಾಗಿದೆ. ರೋಹಕ್‌ಗೆ ಡೇರಾ ಬೆಂಬಲಿಗರು ಬರದಂತೆ ಸೂಕ್ತ ವ್ಯವಸ್ಥೆ ಮಾಡಲಾಗಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ. ಈ ಸಂಬಂಧ ಮಾಹಿತಿ ನೀಡಿರುವ ಹರ್ಯಾಣ ಗೃಹ ಕಾರ್ಯದರ್ಶಿ ರಾಮ್ ನಿವಾಸ್, ರೋಹ್ಟಕ್ನಲ್ಲಿರುವ ಜೈಲಿನ 10 ಕಿ.ಮೀ. ವ್ಯಾಪ್ತಿಯಲ್ಲಿ ಒಂದು ಪಕ್ಷಿಯನ್ನೂ ಬಿಡದಂತೆ ವ್ಯವಸ್ಥೆ ಮಾಡಲಾಗಿದೆ ಎಂದಿದ್ದಾರೆ.
ಪಂಚಕುಲದಲ್ಲಿ ಶುಕ್ರವಾರ ತೀರ್ಪು ಪ್ರಕಟವಾದ ನಂತರ ನಡೆದ ಹಿಂಸಾಚಾರದಲ್ಲಿ 37 ಮಂದಿ ಮೃತಪಟ್ಟಿದ್ದರು. ಮುನ್ನೂರಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದರು. ಹೀಗಾಗಿ ಕಾನೂನು ಸುವ್ಯವಸ್ಥೆಗೆ ಯಾವುದೇ ಭಂಗ ಬಾರದಂತೆ ಸೂಕ್ತ ವ್ಯವಸ್ಥೆ ಮಾಡಿದ್ದೇವೆ ಎಂದು ಪೊಲೀಸರು ಹೇಳಿದ್ದಾರೆ. ಇದೇ ವೇಳೆ, ಹಿಂಸಾಚಾರಕ್ಕೆ ಬಲಿಯಾದವರ ಸಂಖ್ಯೆ ಭಾನುವಾರ 38ಕ್ಕೇರಿದ್ದು, 926 ಮಂದಿಯನ್ನು ಬಂಧಿಸಲಾಗಿದೆ. ಈವರೆಗೆ 52 ಕೇಸುಗಳನ್ನು ದಾಖಲಿಸಲಾಗಿದೆ ಎಂದೂ ತಿಳಿಸಿದ್ದಾರೆ.
ರೋಹ್ಟಕ್ನಲ್ಲಿ 15 ಸಾವಿರ ಭಕ್ತರು?
ಮೂಲಗಳ ಪ್ರಕಾರ ರೋಹಕ್‌ನಲ್ಲಿ ಸುಮಾರು 15 ಸಾವಿರ ಮಂದಿ ಡೇರಾ ಸಚ್ಚಾ ಸೌದಾದ ಅನುಯಾಯಿಗಳು ಈಗಾಗಲೇ ಬಂದು ಸೇರಿದ್ದಾರೆ ಎಂದು ಹೇಳಲಾಗಿದೆ. ಅಲ್ಲದೆ ಬೇರೆ ಬೇರೆ ಮಾರ್ಗಗಳ ಮೂಲಕ ಇನ್ನೂ ಎರಡು ಸಾವಿರ ಮಂದಿ ಬಂದು ಸೇರಿರಬೇಕು ಎಂದು ಅಂದಾಜಿಸಲಾಗಿದೆ. ಇವರ್ಯಾರೂ ಪೊಲೀಸರ ಕಣ್ಣಿಗೆ ಕಾಣಿಸದಿದ್ದರೂ, ಎಲ್ಲೆಲ್ಲೋ ಅವಿತುಕೊಂಡಿರಬೇಕು ಎಂದು ಹೇಳಲಾಗುತ್ತಿದೆ. ಭಾನುವಾರ ರಾತ್ರಿ ಅಥವಾ ಸೋಮವಾರ ಬೆಳಗ್ಗೆಯಷ್ಟೊತ್ತಿಗೆ ಇವರೆಲ್ಲಾ ಒಂದು ಕಡೆ ಸೇರಬಹುದು ಎನ್ನಲಾಗಿದೆ. ಶಿಕ್ಷೆ ಘೋಷಣೆಯಾದೊಡನೆ ಮತ್ತೂಂದು ಸುತ್ತಿನ ಹಿಂಸಾಚಾರ ಸಂಭವಿಸಬಹುದೇ, ಈ ಬೆಂಬಲಿಗರ ಯೋಜನೆಯೇನು ಎಂಬುದೇ ಈಗ ಪೊಲೀಸರಿಗೆ ದೊಡ್ಡ ತಲೆನೋವಾಗಿ ಕಾಡತೊಡಗಿದೆ.
ಒಟ್ಟಿನಲ್ಲಿ, ಯಾವುದೇ ಹಿಂಸಾಚಾರ ನಡೆಯದಂತೆ ತಡೆಯಲು ರೋಹrಕ್ ಅನ್ನು ಈಗ ಸಂಪೂರ್ಣವಾಗಿ ಪೊಲೀಸರ ಭದ್ರಕೋಟೆಯಾಗಿ ಮಾರ್ಪಡಿಸಲಾಗಿದೆ. ಎಲ್ಲೆಲ್ಲೂ ಪೊಲೀಸರು, ಅರೆ ಸೇನಾ ಪಡೆ ಮತ್ತು ಸೇನೆಯ ಯೋಧರೇ ಕಾಣಿಸುತ್ತಿದ್ದಾರೆ. ಯಾರೇ ಅನುಮಾನಾಸ್ಪದವಾಗಿ ಕಂಡರೂ ಬಿಡುತ್ತಿಲ್ಲ. ಯಾವುದೇ ಅಹಿತಕರ ಘಟನೆ ನಡೆಯದಂತೆ ಈ ಬಂದೋಬಸ್ತ್ ಮಾಡಿದ್ದೇವೆ ಎಂದು ಅವರು ಹೇಳುತ್ತಿದ್ದಾರೆ.
ಈಗಾಗಲೇ ಹರ್ಯಾಣದಲ್ಲಿ ಮತ್ತೂಬ್ಬ ಸ್ವಘೋಷಿತ ದೇವಮಾನವ ರಾಮ್‌ಪಾಲ್‌ಗೆ ಸಂಬಂಧಿಸಿದ ತೀರ್ಪು ಬಂದಾಗ ಮತ್ತು ಜಾಟ್ ಪ್ರತಿಭಟನೆ ವೇಳೆ ನಡೆದ ಹಿಂಸಾಚಾರದ ಬಗ್ಗೆ ಸರ್ಕಾರ ಪಾಠ ಕಲಿಯದೇ ಇದ್ದುದರಿಂದ ಶುಕ್ರವಾರ ಭಾರೀ ಮಟ್ಟದ ಹಿಂಸಾಚಾರ ಸಂಭವಿಸಿತ್ತು ಎಂಬ ಆರೋಪಗಳು ಕೇಳಿಬಂದಿವೆ. ಇದಕ್ಕೆ ಪ್ರತಿಯಾಗಿ ಸೋಮವಾರವೂ ಕೊಂಚ ಎಚ್ಚರ ತಪ್ಪಿದರೂ, ಮತ್ತೆ ಅದೇ ರೀತಿಯ ಹಿಂಸಾಚಾರವಾಗುವ ಸಾಧ್ಯತೆ ಇರುವುದರಿಂದ ಪೊಲೀಸರು ಮುನ್ನೆಚ್ಚರಿಕೆ ವಹಿಸಿದ್ದಾರೆ.
ಶಾಲೆಗಳಿಗೆ ರಜೆ ಘೋಷಣೆ, ಇಂಟರ್ನೆಟ್ ಸಂಪರ್ಕ ಸ್ಥಗಿತ:
ವದಂತಿಗಳು ಹಬ್ಬಿ ಯಾವುದೇ ರೀತಿಯ ಹಿಂಸಾಚಾರ ಸಂಭವಿಸದಂತೆ ಮುಂಜಾಗ್ರತೆ ಕ್ರಮವಾಗಿ ಇನ್ನೂ ಎರಡು ದಿನ, ಅಂದರೆ ಮಂಗಳವಾರದ ವರೆಗೆ ಹರ್ಯಾಣ ಮತ್ತು ಪಂಜಾಬ್‌ನಲ್ಲಿ ಮೊಬೈಲ್ ಇಂಟರ್ನೆಟ್ ಅನ್ನು ನಿರ್ಬಂಧಿಸಲಾಗಿದೆ. ಕಿಡಿಗೇಡಿಗಳು ಸುಖಾಸುಮ್ಮನೆ ವದಂತಿಗಳನ್ನು ಹಬ್ಬಿಸುವ ಆತಂಕವಿರುವುದರಿಂದ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ. ಜತೆಗೆ, ಹರ್ಯಾಣದಾದ್ಯಂತ ಸೋಮವಾರ ಶಾಲೆ, ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ.
ಸಹಜ ಸ್ಥಿತಿಗೆ ಪಂಚಕುಲ
ಪಂಚಕುಲ ಮತ್ತು ಸಿರ್ಸಾದಲ್ಲಿ ಹೇರಲಾಗಿದ್ದ ಕರ್ಫ್ಯೂವನ್ನು ಭಾನುವಾರ ಕೊಂಚ ಸಡಿಲಿಸಲಾಗಿದೆ. ಅಲ್ಲದೆ ಹರ್ಯಾಣದ ಬೇರೆ ಕಡೆಗಳಲ್ಲೂ ಜೀವನ ಸಹಜ ಸ್ಥಿತಿಗೆ ಬರುತ್ತಿದೆ. ಆದರೆ ರೋಹrಕ್‌ನಲ್ಲಿ ಮಾತ್ರ ಭದ್ರತೆ ಮುಂದುವರಿಸಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Odisha: ಕಾರಿಗೆ ಟ್ರಕ್ ಢಿಕ್ಕಿ ಹೊಡೆದು ಇಬ್ಬರು ಬಿಜೆಪಿ ನಾಯಕರು ಮೃ*ತ್ಯು
Delhi; ರಸ್ತೆಗಳು ಪ್ರಿಯಾಂಕಾ ಗಾಂಧಿ ಕೆನ್ನೆಯಂತಿರಬೇಕು: ಬಿಜೆಪಿ ನಾಯಕನ ಹೇಳಿಕೆಗೆ ಟೀಕೆ
Gujarat: ಕೋಸ್ಟ್ ಗಾರ್ಡ್ ಹೆಲಿಕಾಪ್ಟರ್ ಪತನ; ಮೂವರು ಮೃ*ತ್ಯು
Oyo Rooms: ಮದುವೆಯಾಗದ ಜೋಡಿಗೆ ಇನ್ಮುಂದೆ ʼಓಯೋʼ ರೂಮ್ ಸಿಗೋದು ಕಷ್ಟ – ವರದಿ
Jammu and Kashmir: ಕಮರಿಗೆ ಬಿದ್ದ ವಾಹನ; ಕನಿಷ್ಠ ನಾಲ್ವರು ಸಾವು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Mollywood: ʼಮಾರ್ಕೊʼ ಬಳಿಕ ಮೋಹನ್ ಲಾಲ್ ನಿರ್ದೇಶನದ ʼಬರೋಜ್ʼ ಚಿತ್ರಕ್ಕೂ ಪೈರಸಿ ಕಾಟ
BGT; ಬಾರ್ಡರ್-ಗಾವಸ್ಕರ್ ಟ್ರೋಫಿ ವಿತರಣೆಗೆ ಗಾವಸ್ಕರ್ ಗೆ ಆಹ್ವಾನವಿಲ್ಲ! ದಿಗ್ಗಜನ ಬೇಸರ
Gundlupete: ಅಕ್ರಮವಾಗಿ 3 ಕೆ.ಜಿ. 100 ಗ್ರಾಂ ಗಾಂಜಾ ಸಾಗಣೆ: ಬಂಧನ
Odisha: ಕಾರಿಗೆ ಟ್ರಕ್ ಢಿಕ್ಕಿ ಹೊಡೆದು ಇಬ್ಬರು ಬಿಜೆಪಿ ನಾಯಕರು ಮೃ*ತ್ಯು
Delhi; ರಸ್ತೆಗಳು ಪ್ರಿಯಾಂಕಾ ಗಾಂಧಿ ಕೆನ್ನೆಯಂತಿರಬೇಕು: ಬಿಜೆಪಿ ನಾಯಕನ ಹೇಳಿಕೆಗೆ ಟೀಕೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.