ಜೈಲಲ್ಲಿ ದತ್ತು ಪುತ್ರಿ ಜತೆ ಇರಲು ಗುರ್ಮೀತ್‌ ಬಯಕೆ; ಕೋರ್ಟ್‌ ನಕಾರ


Team Udayavani, Aug 28, 2017, 4:50 PM IST

Dera Chief2-700.jpg

ಚಂಡೀಗಢ : ಹದಿನೈದು ವರ್ಷಗಳ ಹಿಂದಿನ ಅತ್ಯಾಚಾರ ಪ್ರಕರಣದಲ್ಲಿ ಅಪರಾಧಿ ಎಂದು ಘೋಷಿಸಲ್ಪಟ್ಟು ಹತ್ತು ವರ್ಷಗಳ ಜೈಲು ಶಿಕ್ಷೆಗೆ ಗುರಿಯಾಗಿರುವ ಡೇರಾ ಸಚ್ಚಾ ಸೌದಾ ಮುಖ್ಯಸ್ಥ ಗುರ್ಮೀತ್‌  ರಾಮ್‌ ರಹೀಮ್‌ ಸಿಂಗ್‌ “ಜೈಲಿನಲ್ಲಿ ನನಗೆ ನೆರವಾಗಲು ದತ್ತು ಪುತ್ರಿ ಹನಿಪ್ರೀತ್‌ ಗೆ ನನ್ನೊಂದಿಗೆ ಇರಲು ಅನುಮತಿ ನೀಡಬೇಕು’ ಎಂದು ಮಾಡಿಕೊಂಡಿದ್ದ  ಮನವಿಯನ್ನು ಸಿಬಿಐ ಕೋರ್ಟ್‌ ತಿರಸ್ಕರಿಸಿದೆ. 

ಹನಿಪ್ರೀತ್‌ ಕೂಡ ತನ್ನ ವಕೀಲರ ಮೂಲಕ “ನನಗೆ ನನ್ನ ತಂದೆಯೊಂದಿಗೆ ಜೈಲಿನಲ್ಲಿರಲು ಅನುಮತಿ ನೀಡಬೇಕು’ ಎಂದು ಕೋರಿ ಮನವಿ ಸಲ್ಲಿಸಿದ್ದಳು. ಆ ಮನವಿಯನ್ನು ಕೂಡ ಕೋರ್ಟ್‌ ತಿರಸ್ಕರಿಸಿದೆ. 2009ರಲ್ಲಿ ಡೇರಾ ಮುಖ್ಯಸ್ಥ ಹನಿಪ್ರೀತ್‌ ಳನ್ನು ದತ್ತು ಸ್ವೀಕರಿಸಿದ್ದ .

“ಈ ರೀತಿಯ ಮನವಿಯನ್ನು ನ್ಯಾಯಾಲಯ ಪುರಸ್ಕರಿಸುವಂತಿಲ್ಲ; ಸರಕಾರ ಅಥವಾ ಬಂಧಿಖಾನೆ ಆಡಳಿತೆಯು ಈ ಬಗ್ಗೆ ನಿರ್ಧಾರ ಕೈಗೊಳ್ಳಬಹುದಾಗಿದೆ’ ಎಂದು ಕೋರ್ಟ್‌ ಹೇಳಿತು.

ಹಾಗಿದ್ದರೂ ಹನಿಪ್ರೀತ್‌ ಮತ್ತು ಸ್ವತಃ ಗುರ್ಮೀತ್‌ , “ಜೈಲಿನಲ್ಲಿ  ತಮಗೆ ಜತೆಯಾಗಿರುವುದಕ್ಕೆ  ನ್ಯಾಯಾಲಯ ಅನುಮತಿ ನೀಡಿದೆ’ ಎಂದು ಜೈಲು ಅಧಿಕಾರಿಗಳಲ್ಲಿ ಸುಳ್ಳು ಹೇಳಿದ್ದರು. 

ಕೈದಿಯ ಜತೆಗೆ ಮಹಿಳೆ ಇರಲು ಬಂಧೀಖಾನೆಯ ನಿಯಮಗಳಲ್ಲಿ ಅವಕಾಶ ಇಲ್ಲ ಎಂದು ಜೈಲು ಅಧಿಕಾರಿಗಳು ಖಂಡತುಂಡವಾಗಿ ಹೇಳಿದಾಗ, ಡೇರಾ ಮುಖ್ಯಸ್ಥ, “ನನ್ನ ಆದೇಶವನ್ನು ನೀವು ಪಾಲಿಸದಿದ್ದರೆ ನಾನು ನಿಮ್ಮನ್ನು ಸಸ್ಪೆಂಡ್‌ ಮಾಡಿಸುತ್ತೇನೆ’ ಎಂದು ಬೆದರಿಕೆ ಹಾಕಿದ ! ಸ್ಥಳದಿಂದ ಹೊರಡುವ ಮುನ್ನ ಹನಿಪ್ರೀತ್‌ ದಿಲ್ಲಿ ಮತ್ತು ಚಂಡೀಗಢಕ್ಕೆ ಕೆಲವು ಫೋನ್‌ ಕರೆಗಳನ್ನು ಮಾಡಿದಳಾದರೂ ಪ್ರಯೋಜನವಾಗಲಿಲ್ಲ. 

ಗುರ್ಮೀತ್‌ ಗೆ ಹತ್ತು ವರ್ಷಗಳ ಜೈಲು ಶಿಕ್ಷೆಯನ್ನು ಸಿಬಿಐ ನ್ಯಾಯಾಧೀಶರು ಪ್ರಕಟಿಸಿದ ಬಳಿಕ ಸೇನಾ ಹೆಲಿಕಾಪ್ಟರ್‌ನಲ್ಲಿ ಆತನ ಜತೆಗೆ ಹೋದಾಕೆ ಯಾರು ಎಂಬುದು ಅನೇಕರಿಗೆ ಯಕ್ಷ ಪ್ರಶ್ನೆಯಾಗಿತ್ತು. ಆಕೆ ಗುರ್‌ಮೀತ್‌ ರಾಮ್‌ ರಹೀಮ್‌ 2009ರಲ್ಲಿ ದತ್ತು ಪಡೆದ ಪುತ್ರಿ ಹನಿಪ್ರೀತ್‌ ಎಂದು ಅನಂತರ ಎಲ್ಲರಿಗೂ ಗೊತ್ತಾಯಿತು. 

ಅಂದ ಹಾಗೆ ಡೇರಾ ಮುಖ್ಯಸ್ಥ ಗುರ್ಮೀತ್‌ ಗೆ ಮೈಗ್ರೇನ್‌ ಕಾಯಿದೆ ಇದೆ; ತೀವ್ರವಾದ ಬೆನ್ನ ನೋವಿದೆ; ಎಲ್ಲ ಬಗೆಯ ಕಾಯಿಲೆಗಳನ್ನು ಹೆಚ್ಚಿಸಬಲ್ಲ ಡಯಾಬಿಟೀಸ್‌ ಬೇರೆ ಇದೆ. ಹಾಗಾಗಿ “ನನಗೆ ಜೈಲಿನಲ್ಲಿ ನೆರವಾಗಲು ನನ್ನ ಮುದ್ದಿನ ಮಗಳು ಹನಿಪ್ರೀತ್‌ ಗೆ ನನ್ನೊಂದಿಗಿರಲು ಅನುಮತಿ ನೀಡಬೇಕು’ ಎಂದು ರಾಮ್‌ ರಹೀಮ್‌ ಕೋರಿದ್ದ. ಆದರೆ ಆ ಕೋರಿಕೆ ಫ‌ಲಕಾರಿಯಾಗಲಿಲ್ಲ. 

ಟಾಪ್ ನ್ಯೂಸ್

Fraud; ಯುವಕರು, ಸ್ತ್ರೀಯರನ್ನು ಗುರಿಯಾಗಿಸಿ ಹೂಡಿಕೆ ವಂಚನೆ: ಕೇಂದ್ರ ಎಚ್ಚರಿಕೆ

Fraud; ಯುವಕರು, ಸ್ತ್ರೀಯರನ್ನು ಗುರಿಯಾಗಿಸಿ ಹೂಡಿಕೆ ವಂಚನೆ: ಕೇಂದ್ರ ಎಚ್ಚರಿಕೆ

1-horoscope

Horoscope: ಉದ್ಯೋಗ,ವ್ಯವಹಾರ ಎರಡರಲ್ಲೂ ಯಶಸ್ಸು,ಅನಾದರದ ಮಾತುಗಳಿಗೆ ಪ್ರತಿಕ್ರಿಯೆ ತೋರದಿರಿ

Karnataka Govt.,: ಹೊಸ ಗೋಶಾಲೆ ಇಲ್ಲ, ಇರುವುದಕ್ಕೆ ಬಲ

Karnataka Govt.,: ಹೊಸ ಗೋಶಾಲೆ ಇಲ್ಲ, ಇರುವುದಕ್ಕೆ ಬಲ

Kerala: ಅಂಗಿ ತೆಗೆದು ದೇಗುಲ ಪ್ರವೇಶ ಪದ್ಧತಿಗೆ ಕೊಕ್‌?

Kerala: ಅಂಗಿ ತೆಗೆದು ದೇಗುಲ ಪ್ರವೇಶ ಪದ್ಧತಿಗೆ ಕೊಕ್‌?

ರಾಜ್ಯದಲ್ಲಿ ಶೇ. 27 ಪ್ರೌಢಶಾಲಾ ಶಿಕ್ಷಕ ಹುದ್ದೆ ಖಾಲಿ! ಕಲ್ಯಾಣ ಕರ್ನಾಟಕದಲ್ಲಿಯೇ ಹೆಚ್ಚುರಾಜ್ಯದಲ್ಲಿ ಶೇ. 27 ಪ್ರೌಢಶಾಲಾ ಶಿಕ್ಷಕ ಹುದ್ದೆ ಖಾಲಿ! ಕಲ್ಯಾಣ ಕರ್ನಾಟಕದಲ್ಲಿಯೇ ಹೆಚ್ಚು

ರಾಜ್ಯದಲ್ಲಿ ಶೇ. 27 ಪ್ರೌಢಶಾಲಾ ಶಿಕ್ಷಕ ಹುದ್ದೆ ಖಾಲಿ! ಕಲ್ಯಾಣ ಕರ್ನಾಟಕದಲ್ಲಿಯೇ ಹೆಚ್ಚು

New Virus: ಚೀನದಲ್ಲಿ ಹೊಸ ವೈರಸ್‌ ಹಬ್ಬುತ್ತಿರುವ ಬಗ್ಗೆ ವದಂತಿ!

New Virus: ಚೀನದಲ್ಲಿ ಹೊಸ ವೈರಸ್‌ ಹಬ್ಬುತ್ತಿರುವ ಬಗ್ಗೆ ವದಂತಿ!

Kolar: “ಗೃಹಲಕ್ಷ್ಮಿ’ಗೆ ಆಸಕ್ತಿ ತೋರದ 21 ಸಾವಿರ ಕೋಲಾರ ಸ್ತ್ರೀಯರು

Kolar: “ಗೃಹಲಕ್ಷ್ಮಿ’ಗೆ ಆಸಕ್ತಿ ತೋರದ 21 ಸಾವಿರ ಕೋಲಾರ ಸ್ತ್ರೀಯರು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Fraud; ಯುವಕರು, ಸ್ತ್ರೀಯರನ್ನು ಗುರಿಯಾಗಿಸಿ ಹೂಡಿಕೆ ವಂಚನೆ: ಕೇಂದ್ರ ಎಚ್ಚರಿಕೆ

Fraud; ಯುವಕರು, ಸ್ತ್ರೀಯರನ್ನು ಗುರಿಯಾಗಿಸಿ ಹೂಡಿಕೆ ವಂಚನೆ: ಕೇಂದ್ರ ಎಚ್ಚರಿಕೆ

Kerala: ಅಂಗಿ ತೆಗೆದು ದೇಗುಲ ಪ್ರವೇಶ ಪದ್ಧತಿಗೆ ಕೊಕ್‌?

Kerala: ಅಂಗಿ ತೆಗೆದು ದೇಗುಲ ಪ್ರವೇಶ ಪದ್ಧತಿಗೆ ಕೊಕ್‌?

Delhi polls: ದಿಲ್ಲಿಯಲ್ಲೀಗ ಬಿಜೆಪಿ-ಆಪ್‌ ಪೋಸ್ಟರ್‌ ವಾರ್‌!

Delhi polls: ದಿಲ್ಲಿಯಲ್ಲೀಗ ಬಿಜೆಪಿ-ಆಪ್‌ ಪೋಸ್ಟರ್‌ ವಾರ್‌!

Power subsidy: ಹಿಮಾಚಲ ಪ್ರದೇಶ ಸರ್ಕಾರಕ್ಕೆ ಆರ್ಥಿಕ ಬಿಕ್ಕಟ್ಟು

Power subsidy: ಹಿಮಾಚಲ ಪ್ರದೇಶ ಸರ್ಕಾರಕ್ಕೆ ಆರ್ಥಿಕ ಬಿಕ್ಕಟ್ಟು

water

ರಾಜ್ಯದ ಅಂತರ್ಜಲ ವಿಷಮಯ: ಪ್ರತಿಕೂಲ ಪರಿಣಾಮ ಏನು?

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

Court-1

Kundapura: ಗ್ರಾಮ ಸಹಾಯಕಿಗೆ ಕಿರುಕುಳ; ಆರೋಪಿಗಳಿಗೆ ನಿರೀಕ್ಷಣ ಜಾಮೀನು

Fraud; ಯುವಕರು, ಸ್ತ್ರೀಯರನ್ನು ಗುರಿಯಾಗಿಸಿ ಹೂಡಿಕೆ ವಂಚನೆ: ಕೇಂದ್ರ ಎಚ್ಚರಿಕೆ

Fraud; ಯುವಕರು, ಸ್ತ್ರೀಯರನ್ನು ಗುರಿಯಾಗಿಸಿ ಹೂಡಿಕೆ ವಂಚನೆ: ಕೇಂದ್ರ ಎಚ್ಚರಿಕೆ

1-horoscope

Horoscope: ಉದ್ಯೋಗ,ವ್ಯವಹಾರ ಎರಡರಲ್ಲೂ ಯಶಸ್ಸು,ಅನಾದರದ ಮಾತುಗಳಿಗೆ ಪ್ರತಿಕ್ರಿಯೆ ತೋರದಿರಿ

courts

Kasaragod: ಯೂತ್‌ ಕಾಂಗ್ರೆಸ್‌ ಕಾರ್ಯಕರ್ತರಿಬ್ಬರ ಕೊಲೆ; ಇಂದು ಶಿಕ್ಷೆ ಪ್ರಮಾಣ ಘೋಷಣೆ

Karnataka Govt.,: ಹೊಸ ಗೋಶಾಲೆ ಇಲ್ಲ, ಇರುವುದಕ್ಕೆ ಬಲ

Karnataka Govt.,: ಹೊಸ ಗೋಶಾಲೆ ಇಲ್ಲ, ಇರುವುದಕ್ಕೆ ಬಲ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.