ಊಟ ಬಿಟ್ಟ ರಾಂ ರಹೀಂ; ಸೆಲ್‌ನೊಳಗೆ ಅತ್ತಿತ್ತ ಸಂಚಾರ
Team Udayavani, Aug 30, 2017, 8:55 AM IST
ಚಂಡೀಗಢ: ಮಾತಿಲ್ಲ, ಕಥೆಯಿಲ್ಲ. ರಾತ್ರಿ ಊಟವೂ ಮಾಡಿಲ್ಲ. ಬರೀ ನೀರು, ಬೆಳಗ್ಗೆದ್ದು ಒಂದು ಲೋಟ ಹಾಲು. ಇಡೀ ದಿನ ಸೆಲ್‌ನೊಳಗೇ ಅತ್ತಿತ್ತ ಓಡಾಟ…
ಇದು ಅತ್ಯಾಚಾರ ಪ್ರಕರಣದಲ್ಲಿ 20 ವರ್ಷ ಜೈಲು ಶಿಕ್ಷೆಗೆ ಒಳಗಾಗಿರುವ ಡೇರಾ ಸಚ್ಚಾ ಸೌದಾ ಮುಖ್ಯಸ್ಥ ಗುರ್ಮೀತ್ ರಾಂ ರಹೀಂ ಸಿಂಗ್‌ನ ಮೊದಲ ದಿನದ ಜೈಲುವಾಸದ ದಿನಚರಿ. ಜೈಲು ಶಿಕ್ಷೆ ಘೋಷಣೆಯಾದ ಬಳಿಕ ರಾಂ ರಹೀಂನನ್ನು ರೋಹrಕ್‌ನ ಸುನೈರಾ ಜೈಲಿನಲ್ಲಿರಿಸಲಾಗಿದೆ. ಸೋಮವಾರ ಶಿಕ್ಷೆ ಘೋಷಣೆ ವೇಳೆ ಹೈಡ್ರಾಮಾ ಮಾಡಿದ್ದ ರಾಂ ರಹೀಂ ರಾತ್ರಿ ಊಟವನ್ನೂ ಮಾ ಡದೇ ನಿದ್ರೆಗೆ ಜಾರಿದರು ಎಂದು ಜೈಲಿನ ಮೂಲ ಗಳು ತಿಳಿಸಿವೆ. ಬೆಳಗ್ಗೆದ್ದು ಒಂದು ಲೋಟ ಹಾಲು ಕುಡಿದಿದ್ದು ಬಿಟ್ಟರೆ, ಯಾರೊಂ ದಿಗೂ ಮಾತುಕತೆ ನಡೆಸದೇ ಜೈಲು ಕೊಠಡಿ ಯೊಳಗೇ ಚಿಂತಾಮಗ್ನ ನಾಗಿ ಅತ್ತಿತ್ತ ಚಲಿಸುತ್ತಿದ್ದ ಎನ್ನಲಾಗಿದೆ.
ಕರ್ಫ್ಯೂ ಸಡಿಲಿಕೆ: ಇನ್ನು, ರಾಂ ರಹೀಂ ದೋಷಿ ಎಂದು ಘೋಷಣೆಯಾದ ದಿನ ವ್ಯಾಪಕ ಹಿಂಸಾಚಾರಕ್ಕೆ ಸಾಕ್ಷಿಯಾಗಿದ್ದ ಹರ್ಯಾಣ ಇದೀಗ ಸಹಜ ಸ್ಥಿತಿಗೆ ಬಂದಿದೆ. ಸಿರ್ಸಾದಲ್ಲಿ ಮಂಗಳವಾರ 12 ಗಂಟೆಗಳ ಕಾಲ ಕರ್ಫ್ಯೂ ಸಡಿಲಿಸಲಾಗಿದೆ. ಸೂಕ್ಷ್ಮ ಪ್ರದೇಶಗಳಲ್ಲಿ ಇಂಟ ರ್ನೆಟ್ ಸಂಪರ್ಕ ಸ್ಥಗಿತವನ್ನು ಮುಂದುವರಿಸ ಲಾಗಿದೆ. ಡೇರಾ ಆಶ್ರಮದೊಳಗಿದ್ದ ರಾಂ ರಹೀಂ ಬೆಂಬಲಿಗರೂ ನಿಧಾನವಾಗಿ ಅಲ್ಲಿಂದ ತೆರಳಲಾ ರಂ ಭಿಸಿದ್ದಾರೆ. ಅವರಿಗಾಗಿ ಬಸ್ ವ್ಯವಸ್ಥೆಯನ್ನೂ ಕಲ್ಪಿಸಲಾಗಿತ್ತು. ಇನ್ನೊಂದೆಡೆ, ಡೇರಾ ಆಶ್ರಮದೊಳಗೆ ಇದ್ದ 18 ವರ್ಷದೊಳಗಿನ 18 ಮಂದಿ ಹೆಣ್ಣುಮಕ್ಕಳನ್ನು ಹೊರಕರೆತಂದು, ಪುನರ್ವಸತಿ ಕೇಂದ್ರಕ್ಕೆ ಕಳುಹಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಇದೇ ವೇಳೆ, ಸದ್ಯಕ್ಕೆ ಬಾಬಾ ಉತ್ತರಾಧಿಕಾರಿ ನೇಮಕ ಮಾಡುವುದಿಲ್ಲ. ಬಾಬಾಗೆ ವಿಧಿಸಿರುವ ಶಿಕ್ಷೆ ಪ್ರಶ್ನಿಸಿ ಮೇಲ್ಮನವಿ ಸಲ್ಲಿಸುವುದಕ್ಕೇ ಹೆಚ್ಚಿನ ಆದ್ಯತೆ ನೀಡುತ್ತೇವೆ ಎಂದು ಡೇರಾ ಆಡಳಿತ ಮಂಡಳಿ ಹೇಳಿದೆ.
2 ಕೇಸಲ್ಲಿ ದೇವಮಾನವ ರಾಂಪಾಲ್ ಖುಲಾಸೆ
ಮತ್ತೂಬ್ಬ ಸ್ವಘೋಷಿತ ದೇವ ಮಾನವ ರಾಂಪಾಲ್‌ನನ್ನು 2 ಕ್ರಿಮಿನಲ್ ಕೇಸುಗಳಲ್ಲಿ ಹಿಸಾರ್‌ನ ಕೋರ್ಟ್ ಮಂಗಳವಾರ ಖುಲಾಸೆಗೊಳಿಸಿದೆ. ಬರ್ವಾಲಾದ ರಾಂಪಾಲ್ ವಿರುದ್ಧ ಗಲಭೆ, ಕಾನೂನು ಬಾಹಿರವಾಗಿ ಜನ ಸೇರಿಸಿದ, ಪೊಲೀಸ್ ಕರ್ತವ್ಯಕ್ಕೆ ಅಡ್ಡಿಪಡಿಸಿದ ಆರೋಪಗಳಿದ್ದವು. ಸಾಕ್ಷ್ಯ ಕೊರತೆ ಹಿನ್ನೆಲೆಯಲ್ಲಿ ಆತ ಮುಕ್ತನಾಗಿದ್ದಾನೆ. ಆದರೆ, ಆತನ ವಿರುದ್ಧದ ಕೊಲೆ ಪ್ರಕರಣದ ತೀರ್ಪು ಇನ್ನೂ ಪ್ರಕಟವಾಗದ ಕಾರಣ, ಸದ್ಯಕ್ಕೆ ಜೈಲಿನಲ್ಲೇ ಇರಬೇಕಾಗಿದೆ.
ಒಳಗೆ ಹೋದವರು ಅಳುತ್ತಾ ಹೊರಬರುತ್ತಿದ್ದರು!
ಹಲವಾರು ಮಹಿಳಾ ಭಕ್ತರು ರಾಂ ರಹೀಂನಿಂದ ಲೈಂಗಿಕ ಶೋಷಣೆಗೆ ಒಳಗಾಗಿದ್ದಾರೆ. ಆದರೆ, ಸಮಾಜಕ್ಕೆ ಹೆದರಿ ಅವರು ಎಲ್ಲವನ್ನೂ ಮುಚ್ಚಿಡುತ್ತಿದ್ದಾರೆ ಎಂದು ಕಾನೂನು ಹೋರಾಟದಲ್ಲಿ ಗೆದ್ದ ಸಂತ್ರಸ್ತೆ ಹೇಳಿದ್ದಾರೆ. 15 ವರ್ಷಗಳ ಕಾಲ ನಾನು ಮತ್ತು ನಮ್ಮ ಕುಟುಂಬ ಹಲವು ಬೆದರಿಕೆಗಳು, ಮಾನಸಿಕ ಒತ್ತಡಕ್ಕೆ ಗುರಿಯಾಗಬೇಕಾಯಿತು. ನನ್ನ ಸಹೋದರನನ್ನೂ ಬಾಬಾ ಬೆಂಬಲಿಗರು ಗುಂಡಿಟ್ಟು ಹತ್ಯೆಗೈದರು. ಆ ಪ್ರಕರಣದಲ್ಲೂ ನಾವು ನ್ಯಾಯಕ್ಕಾಗಿ ಕಾಯುತ್ತಿದ್ದೇವೆ ಎಂದಿದ್ದಾರೆ. ನಮ್ಮ ಕುಟುಂಬ 40 ವರ್ಷಗಳಿಂದ ಡೇರಾ ಜತೆ ಸಂಪರ್ಕದಲ್ಲಿತ್ತು. ಅಲ್ಲಿನ ಶಾಲೆಯಲ್ಲಿ ನಾನು ಶಿಕ್ಷಕಿಯಾಗಿದ್ದೆ. ಬಾಬಾ ವಾಸಿಸುತ್ತಿದ್ದ ಗುಫಾ(ಗುಹೆ)ದ ಹೊರಗೆ ಅಮಾಯಕ ಹೆಣ್ಣುಮಕ್ಕಳನ್ನು ನಿಯೋಜಿಸಲಾಗುತ್ತಿತ್ತು. ಅವರನ್ನು ಗುಹೆಯೊಳಗೆ ಕರೆದು ಅತ್ಯಾಚಾರ ಮಾಡಲಾಗುತ್ತಿತ್ತು. ಹೊರಗೆ ಬರುವಾಗ ಎಲ್ಲರೂ ಅಳುತ್ತಾ ಬರುತ್ತಿದ್ದರು. ಒಂದು ದಿನ ಬಾಬಾನ ಕಣ್ಣು ನನ್ನ ಮೇಲೂ ಬಿತ್ತು. ನನ್ನ ಮೇಲೂ ಆತ ಅತ್ಯಾಚಾರ ಎಸಗಿದ. ಈ ವಿಚಾರವನ್ನು ಮನೆಯವರಿಗೆ ತಿಳಿಸಿದೆ. ನಂತರ ನಮ್ಮ ಕುಟುಂಬ ಡೇರಾವನ್ನು ಬಿಟ್ಟು ಬೇರೆಡೆ ಹೋಗಿ ನೆಲೆಸಿತು ಎಂದಿದ್ದಾರೆ ಸಂತ್ರಸ್ತ ಮಹಿಳೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.