ಬಿಜೆಪಿಗೆ ಈಗ ಚಾನೆಲ್ ಬಲ
Team Udayavani, Dec 14, 2017, 12:35 PM IST
ಹೊಸದಿಲ್ಲಿ: ರಾಮ ಸೇತು ನೈಸರ್ಗಿಕ ಅಲ್ಲ ಮಾನವ ನಿರ್ಮಿತ ಎಂದು ಅಮೆರಿಕದ ಡಿಸ್ಕವರಿ ಕಮ್ಯುನಿಕೇಶನ್‌ನ ಸೈನ್ಸ್ ಚಾನೆಲ್ ಮಾಡಿದ ಸಾಕ್ಷ್ಯ ಈಗ ದೇಶದಲ್ಲಿ ರಾಜಕೀಯ ವಾಕ್ಸಮರಕ್ಕೆ ಕಾರಣವಾಗಿದೆ. ಈ ಬಗ್ಗೆ ಬುಧವಾರ ಪ್ರತಿಕ್ರಿಯೆ ನೀಡಿರುವ ಕೇಂದ್ರ ಕಾನೂನು ಸಚಿವ, ಬಿಜೆಪಿ ನಾಯಕ ರವಿಶಂಕರ ಪ್ರಸಾದ್ ಅಮೆರಿಕದ ಚಾನೆಲ್ ಬಿಜೆಪಿ ಹೊಂದಿದ್ದ ನಿಲುವನ್ನೇ ಪುಷ್ಟೀಕರಿಸಿದೆ ಎಂದು ಹೇಳಿದ್ದಾರೆ.
ಇದರ ಜತೆಗೆ ಶ್ರೀರಾಮ ಇದ್ದ ಎನ್ನುವುದಕ್ಕೆ ಐತಿಹಾಸಿಕ ದಾಖಲೆಗಳು ಸಿಕ್ಕಿದಂತಾಗಿವೆ ಎಂದಿದ್ದಾರೆ. ಇದೇ ವೇಳೆ ಬಿಜೆಪಿ ಪ್ರಧಾನ ಕಚೇರಿಯಲ್ಲಿ ಮಾತನಾಡಿದ ಕೇಂದ್ರ ರೈಲ್ವೇ ಸಚಿವ ಪಿಯೂಷ್ ಗೋಯಲ್ ಕಾಂಗ್ರೆಸ್ ಈ ಬಗ್ಗೆ ಆಕ್ಷೇಪ ಎತ್ತುತ್ತಲೇ ಸಾಗಿದೆ. ಸತ್ಯ ಏನು ಎನ್ನುವುದನ್ನು ಕಾಂಗ್ರೆಸ್ ನಾಯಕರು ಅರಿತುಕೊಳ್ಳಲಿ ಎಂದು ಅವರು ಹೇಳಿದ್ದಾರೆ.
ಗುಜರಾತ್ ಚುನಾವಣೆಯ ಎರಡನೇ ಹಂತದ ಮತದಾನ ಗುರುವಾರ ನಡೆಯುವಂತೆಯೇ ರಾಮ ಸೇತು ವಿವಾದದ ಬಗ್ಗೆ ಕಾಂಗ್ರೆಸ್ ತನ್ನ ನಿಲುವಿನಲ್ಲಿ ಬದಲು ಮಾಡಿಕೊಂಡಿದೆ. ಪಕ್ಷ ಯಾವತ್ತೂ ಸೇತುವೆ ಇತ್ತೇ ಎಂಬ ಬಗ್ಗೆ ಪ್ರಶ್ನೆಯನ್ನೇ ಮಾಡಿಲ್ಲ ಎಂದು ಪಕ್ಷದ ನಾಯಕ ರಾಜೀವ್ ಶುಕ್ಲಾ ಹೇಳಿದ್ದಾರೆ.
“ಶ್ರೀರಾಮ ಮತ್ತು ರಾಮ ಸೇತು ಇರಲೇ ಇಲ್ಲ ಎಂಬ ವಾದ ಮಂಡಿಸಿ ರಲಿಲ್ಲ’ ಎಂದಿದ್ದಾರೆ. 2007ರಲ್ಲಿ ರಾಮ ಸೇತು ನಿರ್ಮಾಣವಾದ ಬಗ್ಗೆ ಯಾವುದೇ ಸಾಕ್ಷ್ಯಾಧಾರಗಳಿಲ್ಲವೆಂದು ಭಾರತೀಯ ಪುರಾತತ್ವ ಸರ್ವೇಕ್ಷಣ ಇಲಾಖೆಯ ಮೂಲಕ ಅಂದಿನ ಸರ್ಕಾರ ಹೇಳಿಕೆ ಕೊಡಿಸಿತ್ತು. 2005ರಲ್ಲಿ ಹಡಗುಗಳ ಸುಗಮ ಸಂಚಾರಕ್ಕೆ ಕಾಲುವೆ ನಿರ್ಮಾಣಕ್ಕಾಗಿ ಸೇತು ಒಡೆಯುವ ಯೋಜನೆಯೂ ರೂಪುಗೊಂಡಿತ್ತು. ಅದಕ್ಕೆ ತೀವ್ರ ವಿರೋಧ ವ್ಯಕ್ತವಾಗಿತ್ತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Chikkamagaluru: ಮದುವೆ ಹಾಲ್ ನಲ್ಲೇ ವಧುವಿನ ಚಿನ್ನ ಎಗರಿಸಿದ ಖದೀಮರು…
T20: ತಿಲಕ್ ವರ್ಮ ಸ್ಫೋಟಕ ಶತಕ… ಭಾರತ ಆರು ವಿಕೆಟಿಗೆ 219
Ranaji Trophy: ಉತ್ತರ ಪ್ರದೇಶ ವಿರುದ್ಧ ಕರ್ನಾಟಕಕ್ಕೆ ಮುನ್ನಡೆ
Alert: ವಾಟ್ಸ್‌ಆ್ಯಪ್‌ನಲ್ಲಿ ಬರುವ ಮದುವೆ ಆಮಂತ್ರಣ ಆ್ಯಪ್ ತೆರೆದೀರಿ ಜೋಕೆ!
Vitla:ಮಾಣಿ -ಮೈಸೂರು ರಾಜ್ಯ ಹೆದ್ದಾರಿಯಲ್ಲಿ ಲಾರಿ ಮೇಲೆ ಮರ ಬಿದ್ದು ರಸ್ತೆ ಸಂಪೂರ್ಣ ಬ್ಲಾಕ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.