ರಾಮಮಂದಿರ ಅಧ್ಯಾದೇಶಕ್ಕೆ ಆಕ್ಷೇಪ ಇಲ್ಲ: ಕಕ್ಷಿಗಾರ ಇಕ್ಬಾಲ್ ಅನ್ಸಾರಿ
Team Udayavani, Nov 20, 2018, 3:53 PM IST
ಅಯೋಧ್ಯೆ : ವಿವಾದಿತ ಅಯೋಧ್ಯಾ ರಾಮ ಜನ್ಮಭೂಮಿ ಕೇಸಿನ ಕಕ್ಷಿಗಾರರಾಗಿರುವ ಇಕ್ಬಾಲ್ ಅನ್ಸಾರಿ ಅವರು ವಿವಾದಿತ ಸ್ಥಳದಲ್ಲಿ ರಾಮ ಮಂದಿರ ನಿರ್ಮಾಣಕ್ಕೆ ಕೇಂದ್ರ ಸರಕಾರ ಒಂದೊಮ್ಮೆ ಸುಗ್ರೀವಾಜ್ಞೆಯನ್ನು ಹೊರಡಿಸಿದರೆ ಅದಕ್ಕೆ ತನ್ನದೇನೂ ಆಕ್ಷೇಪ ಇರುವುದಿಲ್ಲ ಎಂದು ಹೇಳಿದ್ದಾರೆ.
ಎಎನ್‌ಐ ಸುದ್ದಿ ಸಂಸ್ಥೆ ಜತೆಗೆ ಮಾತನಾಡುತ್ತಿದ್ದ ಅನ್ಸಾರಿ, ಸರಕಾರ ಜಾರಿಗೆ ತರುವ ಎಲ್ಲ ಕಾನೂನುಗಳನ್ನು ನಾವು ಪರಿಪಾಲಿಸುತ್ತೇವೆ ಎಂದು ಹೇಳಿದರು.
ಅಯೋಧ್ಯೆ ಭೂ ವಿವಾದದ ಕೇಸನ್ನು ಸುಪ್ರೀಂ ಕೋರ್ಟ್ 2019ರ ಜನವರಿಗೆ ಮುಂದೂಡಿದ ತರುವಾಯ, ಸರಕಾರ ವಿವಾದಿತ ಸ್ಥಳದಲ್ಲಿ ರಾಮ ಮಂದಿರ ನಿರ್ಮಾಣಕ್ಕೆ ಸುಗ್ರೀವಾಜ್ಞೆ ತರಬೇಕು ಎಂಬ ಕೂಗು ವ್ಯಾಪಕವಾಗಿ ಕೇಳಿ ಬರಲಾರಂಭಿಸಿದೆ.
ಈ ಕೂಗಿಗೆ ಆರ್‌ಎಸ್‌ಎಸ್ ಮತ್ತು ವಿಹಿಂಪ ಸೇರಿದಂತೆ ಹಲವಾರು ಬಲಪಂಥೀಯ ಸಂಘಟನೆಗಳು ದನಿಗೂಡಿಸಿವೆ. ಅಂತೆಯೇ ಆರ್‌ಎಸ್‌ಎಸ್, ವಿಎಚ್‌ಪಿ ಮತ್ತು ಶಿವಸೇನೆ ಮಾತ್ರವಲ್ಲದೆ ಇನ್ನೂ ಹಲವು ಸಂಘಟನೆಗಳು ತಾವು ಇದೇ ನ.25ರಂದು ಅಯೋಧ್ಯೆಗೆ ಭೇಟಿ ನೀಡುವುದಾಗಿ ಹೇಳಿವೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.