ರಾಮಲಲ್ಲಾ ವಿರಾಜಮಾನ್ ಅರ್ಜಿಗೆ ವಿರೋಧವಿಲ್ಲ: ನಿರ್ಮೋಹಿ ಅಖಾಡ
Team Udayavani, Aug 28, 2019, 5:39 AM IST
ನವದೆಹಲಿ: ‘ಅಯೋಧ್ಯೆಯಲ್ಲಿನ ಭೂಮಾಲೀಕತ್ವಕ್ಕೆ ಸಂಬಂಧಿಸಿದಂತೆ ರಾಮಲಲ್ಲಾ ವಿರಾಜಮಾನ್ ಸಲ್ಲಿಸಿರುವ ಅರ್ಜಿಗೆ ನಮ್ಮ ವಿರೋಧವಿಲ್ಲ.’
ಹೀಗೆಂದು ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೋಯ್ ನೇತೃತ್ವದ ಸಾಂವಿಧಾನಿಕ ಪೀಠದ ಮುಂದೆ ನಿರ್ಮೋಹಿ ಅಖಾಡ ಮಂಗಳವಾರ ಅರಿಕೆ ಮಾಡಿಕೊಂಡಿದೆ. ಹದಿಮೂರನೇ ದಿನದ ವಾದ ಮಂಡಿಸಿದ ನ್ಯಾಯವಾದಿ ಸುಶೀಲ್ ಜೈನ್, ‘ದೇಗುಲದ ಪರವಾಗಿ ದೇವಕಿ ನಂದನ್ ಅಗರ್ವಾಲ್ ಸಲ್ಲಿಸಿದ ಅರ್ಜಿ ಕ್ರಮಬದ್ಧವಾಗಿದೆಯೇ ಎಂಬುದನ್ನು ಪರಿಶೀಲಿಸಬೇಕು ಎಂದು ಮನವಿ ಮಾಡುವುದಿಲ್ಲ. ಮುಸ್ಲಿಂ ಸಮುದಾಯದವರು ವಿವಾದಿತ ಸ್ಥಳಕ್ಕೆ 1934ರ ವೇಳೆಗೆ ಪ್ರವೇಶ ಮಾಡಿದರು. ಆ ಸಂದರ್ಭದಿಂದಲೇ ದೇಗುಲ ಅಖಾಡದ ಒಡೆತನದಲ್ಲಿ ಇತ್ತು. ಕೋಮು ಗಲಭೆ ನಡೆದ ಹಿನ್ನೆಲೆಯಲ್ಲಿ ಅದೇ ವರ್ಷ ಮುಸ್ಲಿಂ ಗುತ್ತಿಗೆದಾರನ ಮೂಲಕ ದೇಗುಲ ದುರಸ್ತಿಗೆ ಮನವಿ ಮಾಡಿಕೊಳ್ಳಲಾಗಿತ್ತು ಎಂಬ ಮುಸ್ಲಿಂ ಸಂಘಟನೆಗಳ ವಾದ ನಂಬಲು ಅರ್ಹವಾಗಿಲ್ಲ’ ಎಂದಿದ್ದಾರೆ.
ಅಖೀಲ ಭಾರತೀಯ ಶ್ರೀ ರಾಮ ಜನ್ಮಭೂಮಿ ಪುನರುದ್ಧಾರ ಸಮಿತಿಯ ಪರವಾಗಿ ವಾದಿಸಿದ ಹಿರಿಯ ನ್ಯಾಯವಾದಿ ಪಿ.ಎನ್.ಮಿಶ್ರಾ ಸ್ಕಂದ ಪುರಾಣ, ಅಯೋಧ್ಯೆ ಮಹಾತ್ಮೆ, ಬಾಬರ್‌ನಮಾ ಎಂಬ ಐತಿಹಾಸಿಕ ಮತ್ತು ಪೌರಾಣಿಕ ಗ್ರಂಥಗಳನ್ನು ಉಲ್ಲೇಖೀಸಿ ವಾದಿಸಿ, ಬಾಬರ್ ಅಯೋಧ್ಯೆಗೆ ಭೇಟಿ ನೀಡಲೇ ಇಲ್ಲ ಮತ್ತು ಮಸೀದಿ ನಿರ್ಮಾಣಕ್ಕೆ ಸೂಚನೆ ನೀಡಲೇ ಇಲ್ಲ ಎಂದು ವಾದಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Supreme Court; ಆದಾಯ ಮೀರಿದ ಆಸ್ತಿ ಪ್ರಕರಣ: ರಾಜ್ಯ ಸರಕಾರ, ಡಿ.ಕೆ.ಶಿವಕುಮಾರ್ ಗೆ ನೋಟಿಸ್
Hotel Room: ಹೋಟೆಲ್ ಕೊಠಡಿಯಲ್ಲೇ ವೈದ್ಯನ ನಿಗೂಢ ಸಾ*ವು… ಸ್ಥಳದಲ್ಲಿ ಡೆತ್ ನೋಟ್ ಪತ್ತೆ
Aligarh ಮುಸ್ಲಿಮ್ ವಿವಿ ಅಲ್ಪಸಂಖ್ಯಾತ ಸ್ಥಾನಮಾನ ವಿಚಾರ ಹೊಸ ಪೀಠ ನಿರ್ಧರಿಸಲಿದೆ:ಸುಪ್ರೀಂ
Jammu – Kashmir: ಮತ್ತೆ ಅಟ್ಟಹಾಸ ಮೆರೆದ ಉಗ್ರರು… ಇಬ್ಬರನ್ನು ಅಪಹರಿಸಿ ಹ*ತ್ಯೆ
Maharashtra: ಮತ ನೀಡಿದರೆ ಮದುವೆ ಮಾಡಿಸುವೆ: ಶರದ್ ಬಣದ ನಾಯಕ
MUST WATCH
ಹೊಸ ಸೇರ್ಪಡೆ
ಬೆಳಗಾವಿಯ ಶ್ರೀನಿವಾಸ ಠಾಣೇದಾರ ಅಮೆರಿಕ ಸಂಸತ್‌ಗೆ ಆಯ್ಕೆ
Supreme Court; ಆದಾಯ ಮೀರಿದ ಆಸ್ತಿ ಪ್ರಕರಣ: ರಾಜ್ಯ ಸರಕಾರ, ಡಿ.ಕೆ.ಶಿವಕುಮಾರ್ ಗೆ ನೋಟಿಸ್
Sirsi: ಗವಿನಗುಡ್ಡ ಸುತ್ತ ಕಬ್ಬು, ಭತ್ತದ ಗದ್ದೆಗಳಿಗೆ ಕಾಡಾನೆ ದಾಳಿ… ಬೆಳೆ ನಾಶ
Waqf Property: ಸಚಿವ ಜಮೀರ್ ಅಶ್ವಮೇಧ ಕುದುರೆ ತಡೆದಿದ್ದೇನೆ: ಶಾಸಕ ಯತ್ನಾಳ್
ಐತಿಹಾಸಿಕ ಮುಡಗೇರಿ ಗ್ರಾಮ ನಿರ್ಲಕ್ಷ್ಯ; ಸೋದೆ ಅರಸರ ಕೋಟೆ ಪಳೆಯುಳಿಕೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.