ರಾಮಪತ್ರೆ ಕ್ಯಾನ್ಸರ್ಗೆ ರಾಮಬಾಣ!
Team Udayavani, Apr 5, 2017, 10:25 AM IST
ಮುಂಬಯಿ: ‘ಹಿತ್ತಲ ಗಿಡ ಮದ್ದಲ್ಲ,’ ಎಂಬ ಮಾತಿದೆ. ಆದರೆ, ಅರ್ಬುದ ರೋಗದ ವಿರುದ್ಧದ ಹೋರಾಟದಲ್ಲಿ ಹೊಸ ಮೈಲುಗಲ್ಲು ಎಂಬಂತೆ ರಾಮಪತ್ರೆಯ ತಿರುಳು ಕ್ಯಾನ್ಸರ್ಗೆ ರಾಮಬಾಣ ಎಂಬುದು ಸಾಬೀತಾಗಿದೆ. ರಾಮಪತ್ರೆಯು ಕ್ಯಾನ್ಸರ್ ಗೆಡ್ಡೆಗಳನ್ನು (ಟ್ಯೂಮರ್) ನಾಶ ಮಾಡುವುದಲ್ಲದೆ, ವಿಕಿರಣ ಚಿಕಿತ್ಸೆ ವೇಳೆ ಹಾನಿಗೊಳಗಾದ ಕೋಶಗಳಿಗೆ ಮರುಜೀವ ನೀಡುವಲ್ಲೂ ಸಹಾಯಕ ಎಂದು ಮುಂಬಯಿಯ ಅಣುಶಕ್ತಿ ನಗರದ ಭಾಭಾ ಪರಮಾಣು ಸಂಶೋಧನಾ ಕೇಂದ್ರ (ಬಿಎಆರ್ಸಿ)ದ ವಿಜ್ಞಾನಿಗಳು ಕಂಡುಕೊಂಡಿದ್ದಾರೆ. ಹಾಲಿ ವರ್ಷದ ಜೂನ್ನಿಂದ ಮುಂಬಯಿಯ ಟಾಟಾ ಮೆಮೋರಿಯಲ್ ಸೆಂಟರ್ನಲ್ಲಿ ಹೊಸ ಮಾದರಿಯ ಔಷಧದ ಕ್ಲಿನಿಕಲ್ ಟ್ರಯಲ್ ಆರಂಭವಾಗಲಿದೆ.
ಇಲಿಗಳ ಮೇಲೆ ಪ್ರಯೋಗ ಯಶಸ್ವಿ: ರಾಮಪತ್ರೆ ಗಿಡದಿಂದ ತಯಾರಿಸಿದ ಔಷಧವನ್ನು ವಿಜ್ಞಾನಿಗಳು ಇಲಿಯ ಮೇಲೆ ಪ್ರಯೋಗಿಸಿದ್ದು, ಶ್ವಾಸಕೋಶದ ಕ್ಯಾನ್ಸರ್ ಮತ್ತು ಮಕ್ಕಳಲ್ಲಿ ಕಂಡುಬರುವ ಅಪರೂಪದ ನ್ಯೂರೋಬ್ಲಾಸ್ಟೋಮಾ ಕ್ಯಾನ್ಸರ್ ಅನ್ನು ಗುಣಪಡಿಸುವಲ್ಲಿ ಇದು ಮುಖ್ಯ ಪಾತ್ರ ವಹಿಸುತ್ತದೆ ಎಂಬುದನ್ನು ಕಂಡುಕೊಂಡಿದ್ದಾರೆ. ನ್ಯೂರೋಬ್ಲಾಸ್ಟೋಮಾ ಎಂದರೆ ಅಡ್ರೀನಲ್ ಗ್ರಂಥಿ, ಕುತ್ತಿಗೆ, ಎದೆ ಮತ್ತು ಬೆನ್ನುಹುರಿಯ ನರಗಳ ಕೋಶಗಳಲ್ಲಿ ಕ್ಯಾನ್ಸರ್ ಕೋಶಗಳು ಬೆಳೆಯುವುದು.
ಏನಿದು ರಾಮಪತ್ರೆ?
ಆಹಾರದಲ್ಲಿ ಸಾಂಬಾರ ಪದಾರ್ಥವಾಗಿ ಬಳಸಲ್ಪಡುವ ಈ ರಾಮಪತ್ರೆ ಗಿಡವು ಮಿರಿಸ್ಟಿಕೇಷಿಯಾ ಕುಟುಂಬಕ್ಕೆ ಸೇರಿರುವಂಥ ಸಸ್ಯ. ಇದು ದೇಶದ ಪಶ್ಚಿಮ ಕರಾವಳಿ ಪ್ರದೇಶಗಳಲ್ಲಿ ಹೆಚ್ಚಾಗಿ ಕಾಣಸಿಗುತ್ತದೆ. ಬಾರ್ಕ್ನ ವಿಕಿರಣ ಜೀವಶಾಸ್ತ್ರ ಮತ್ತು ಆರೋಗ್ಯ ವಿಜ್ಞಾನ ವಿಭಾಗದ ವಿಜ್ಞಾನಿ ಡಾ| ಬಿ. ಶಂಕರ್ ಪತ್ರಾವೋ ಅವರೇ ಈ ಔಷಧವನ್ನು ಅಭಿವೃದ್ಧಿಪಡಿಸಿದ್ದಾರೆ. ‘ರಾಮಪತ್ರೆ ಹಣ್ಣಿನಲ್ಲಿರುವ ಕಣಗಳು ಕ್ಯಾನ್ಸರ್ ಕೋಶಗಳನ್ನು ನಾಶಮಾಡುತ್ತವೆ. ಈ ಕಣಗಳಿಂದ ತಯಾರಿಸಲಾದ ಔಷಧವು ವಿಕಿರಣ ಚಿಕಿತ್ಸೆಯಿಂದ ಹಾನಿಗೊಳಗಾದ ಕೋಶಗಳನ್ನೂ ಪುನಶ್ಚೇತನಗೊಳಿಸುತ್ತದೆ’ ಎಂದಿದ್ದಾರೆ ಪತ್ರಾವೋ. ಇದೇ ವೇಳೆ, ವಿಕಿರಣ ಚಿಕಿತ್ಸೆ ವೇಳೆ ಆರೋಗ್ಯವಂತ ಕೋಶಗಳನ್ನು ರಕ್ಷಿಸುವಲ್ಲಿ ಪ್ರಮುಖ ಪಾತ್ರ ವಹಿಸುವ ರೇಡಿಯೋ ಮಾಡಿಫೈರ್ ಮತ್ತು ಬಾರ್ಕ್ ರೇಡಿಯೋ ಪ್ರೊಟೆಕ್ಟರ್ ಅನ್ನೂ ಅಭಿವೃದ್ಧಿಪಡಿಸಿದ್ದು, ಪೇಟೆಂಟ್ಗೆ ಅರ್ಜಿ ಸಲ್ಲಿಸಿದ್ದೇವೆ ಎಂದೂ ವಿಜ್ಞಾನಿಗಳು ಹೇಳಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Maharashtra: ಕಾಂಗ್ರೆಸ್ ಗೆ ಕೇವಲ 16 ಸ್ಥಾನ; ಕೈ ಅಧ್ಯಕ್ಷ ಸ್ಥಾನಕ್ಕೆ ಪಟೋಲೆ ರಾಜೀನಾಮೆ
Politics: ಫಡ್ನವೀಸ್ ಗೆ ಬೆಂಬಲ ನೀಡಿದ ಅಜಿತ್; ಮಹಾರಾಷ್ಟ್ರದಲ್ಲಿ ಮುಗಿಯದ ಸಿಎಂ ತಿಕ್ಕಾಟ
Video: ನೋಟಿನ ಮಾಲೆಯ ನೋಟು ಎಗರಿಸಿದ ಕಳ್ಳ… ಮದುವೆ ಬಿಟ್ಟು ಕಳ್ಳನ ಹಿಂದೆ ಓಡಿದ ವರ
Sambhal Case Follow Up:ಹೊರಗಿನವರಿಗೆ ಸಂಭಾಲ್ ಪ್ರವೇಶಕ್ಕೆ ನಿರ್ಬಂಧ,ಜಲ್ಲಿ ಮಾರಾಟ ನಿಷೇಧ
Sambhal Violence: ಮೃತರ ಸಂಖ್ಯೆ ನಾಲ್ಕಕ್ಕೆ, ಇಂಟರ್ನೆಟ್ ಸ್ಥಗಿತ, ನಿಷೇಧಾಜ್ಞೆ ಜಾರಿ
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Vijayapura: ಅಪಹರಿಸಿದ ಮಗು ಮರಳಿಸಿದ ಅಪರಿಚಿತ!: ಕಂದಮ್ಮನ ಕಿಡ್ನ್ಯಾಪ್ ಕೇಸ್ ಸುಖಾಂತ್ಯ
BBK11: ಧರ್ಮ ಬಿಗ್ ಬಾಸ್ ಆಟಕ್ಕೆ ತೊಡಕಾದ ಅಂಶಗಳೇನು? ʼಚಾಕ್ಲೇಟ್ ಹೀರೋʼ ಎಡವಿದ್ದೆಲ್ಲಿ?
Maharashtra: ಕಾಂಗ್ರೆಸ್ ಗೆ ಕೇವಲ 16 ಸ್ಥಾನ; ಕೈ ಅಧ್ಯಕ್ಷ ಸ್ಥಾನಕ್ಕೆ ಪಟೋಲೆ ರಾಜೀನಾಮೆ
Politics: ಫಡ್ನವೀಸ್ ಗೆ ಬೆಂಬಲ ನೀಡಿದ ಅಜಿತ್; ಮಹಾರಾಷ್ಟ್ರದಲ್ಲಿ ಮುಗಿಯದ ಸಿಎಂ ತಿಕ್ಕಾಟ
Video: ನೋಟಿನ ಮಾಲೆಯ ನೋಟು ಎಗರಿಸಿದ ಕಳ್ಳ… ಮದುವೆ ಬಿಟ್ಟು ಕಳ್ಳನ ಹಿಂದೆ ಓಡಿದ ವರ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.