Rameshwaram; ಹಡಗಿಗಾಗಿ ಪೂರ್ಣ ಮೇಲೇಳುವ ರೈಲ್ಸೇತುವೆ ಶೀಘ್ರ ಲೋಕಾರ್ಪಣೆ!
Team Udayavani, Nov 10, 2024, 6:35 AM IST
ಚೆನ್ನೈ: ರಾಮೇಶ್ವರಂ ಕ್ಷೇತ್ರವಿರುವ ಪಂಬನ್ ದ್ವೀಪ ಮತ್ತು ಮಂಡಪಂ ನಡುವೆ ಸಂಪರ್ಕ ಕಲ್ಪಿಸುವ ಹೊಸ ರೈಲು ಸೇತುವೆಯನ್ನು ಭಾರತೀಯ ರೈಲ್ವೇ ನಿರ್ಮಾಣ ಮಾಡಿದೆ. ಹಡಗು ಸಾಗುವಾಗ ಸೇತುವೆ ಒಂದಿಡೀ ಭಾಗವನ್ನು ಸಂಪೂಣವಾಗಿ ಮೇಲೆತ್ತುವ ತಂತ್ರಜ್ಞಾನ ಅಳವಡಿಸಲಾಗಿದೆ. ಈ ಮಾದರಿಯಲ್ಲಿ ನಿರ್ಮಾಣವಾದ ಭಾರತದ ಮೊದಲ ಸೇತುವೆ ಇದಾಗಿದೆ.
ಒಟ್ಟು 2.2 ಕಿ.ಮೀ. ಉದ್ದದ ಈ ಸೇತುವೆಯ ಮಧ್ಯಭಾಗದಲ್ಲಿ 63 ಮೀ.ನಷ್ಟು ಅಗಲದ
ಸೇತುವೆ ಸಂಪೂರ್ಣವಾಗಿ 22 ಮೀ.ನಷ್ಟು ಎತ್ತರಕ್ಕೆ ಏಳಲಿದೆ. ಈ ಸಮಯದಲ್ಲಿ ಪಾಕ್ ಜಲಸಂಧಿ
ಯಲ್ಲಿ ಸಾಗುವ ಹಡಗುಗಳು ಇದರಡಿ ಸಾಗಲಿವೆ. ರೈಲು ಬರುವ ಸಮಯದಲ್ಲಿ ಇದನ್ನು ಕೆಳಗಿಳಿಸಲಾಗುತ್ತದೆ.
ಪಂಬನ್ ದ್ವೀಪ ಮತ್ತು ಮಂಡಪಂ ನಡುವೆ 104 ವರ್ಷಗಳ ಹಿಂದೆ ನಿರ್ಮಿಸಲಾದ ಸೇತುವೆ ಈಗಾಗಲೇ ಇದ್ದು, ಇದು ಅಡ್ಡವಾಗಿ ತೆರೆದುಕೊಳ್ಳುವ ಮೂಲಕ ಹಡಗುಗಳಿಗೆ ದಾರಿ ಮಾಡಿಕೊಡುತ್ತಿತ್ತು.
ರೈಲು ಚಾಲನೆ ಯಶಸ್ವಿ: ಸೇತುವೆಯ ಕ್ಷಮತೆ ಪರೀಕ್ಷಿಸಲು ಶುಕ್ರವಾರ ಇದರ ಮೇಲೆ ರೈಲು ಓಡಿಸಲಾಗಿದ್ದು, ಸೇತುವೆಯ ಮೇಲೆ ರೈಲು ಗಂಟೆಗೆ 80 ಕಿ.ಮೀ. ವೇಗದಲ್ಲಿ ಚಲಿಸಿದೆ. ಈ ಮೂಲಕ ಹಿಂದಿನ ಸೇತುವೆಯಲ್ಲಿ ಚಲಿಸುವಾಗ ರೈಲುಗಳು ನಿಧಾನವಾಗಬೇಕಿದ್ದನ್ನು ತಪ್ಪಿಸಲಾಗಿದೆ. ನ.13 ಮತ್ತು 14ರಂದು ಮತ್ತೆರಡು ಪರೀಕ್ಷೆ ನಡೆಯಲಿದ್ದು, ಬಳಿಕ ಸೇತುವೆ ಲೋಕಾರ್ಪಣೆಯಾಗಲಿದೆ.
ರಾಮೇಶ್ವರಂ – ಮಂಡಪಂ ನಡುವಿನ ಸಂಪರ್ಕ ಸೇತು
ಸೇತುವೆಯ ಉದ್ದ ಒಟ್ಟಾರೆ 2.2 ಕಿ.ಮೀ.
ಸೇತುವೆಯ 63 ಮೀ.ನಷ್ಟು ಭಾಗ ಪೂರ್ಣವಾಗಿ ಮೇಲೇಳುತ್ತದೆ
22 ಮೀ. ಎತ್ತರಕ್ಕೆ ಏರಿ ಹಡಗು ಸಾಗಲು ಅನುವು ಮಾಡಿಕೊಡುತ್ತದೆ
ಪರೀಕ್ಷೆಯ ಸಮಯದಲ್ಲಿ 80 ಕಿ.ಮೀ. ವೇಗದಲ್ಲಿ ಚಲಿಸಿದ ರೈಲು
ಮತ್ತೆರಡು ರೈಲು ಪರೀಕ್ಷೆ ನಡೆಸಿದ ಬಳಿಕ ಸೇತುವೆ ಲೋಕಾರ್ಪಣೆ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Waqf issue; ಎರ್ನಾಕುಳಂನಲ್ಲಿ 400 ಎಕ್ರೆ ಜಮೀನು ಮೇಲೆ ವಕ್ಫ್ ಮಂಡಳಿ ಕಣ್ಣು: ಆರೋಪ
U.P: ಪತ್ನಿ, ಮಕ್ಕಳ ಕೊಂದು ಸ್ಟೇಟಸ್ ಹಾಕಿದ!
Pension ನೀಡಿಕೆ ಸಮಸ್ಯೆ ಪರಿಹಾರಕ್ಕೆ ಶೀಘ್ರದಲ್ಲೇ ಕೇಂದ್ರೀಕೃತ ವ್ಯವಸ್ಥೆ: ಸಚಿವ ಮಾಂಡವೀಯ
Lahore; ಭಗತ್ ಸಿಂಗ್ ಉಗ್ರವಾದಿ: ಕೋರ್ಟ್‌ಗೆ ಪಾಕ್ ವರದಿ
Politics; ಮತಕ್ಕಾಗಿ ಮುಸ್ಲಿಮರನ್ನು ಒಡೆವ ಕೆಲಸ ಕಾಂಗ್ರೆಸ್ ಮಾಡುತ್ತಿದೆ: ಬಿಜೆಪಿ
MUST WATCH
ಹೊಸ ಸೇರ್ಪಡೆ
ಪದವಿ ವಿದ್ಯಾರ್ಥಿಗಳಿಗೆ ಉದ್ಯೋಗ ಅವಕಾಶಕ್ಕೆ ನೆರವಾಗುವ ಕೋರ್ಸ್
Bantwala: ಮೆಲ್ಕಾರ್-ಕಲ್ಲಡ್ಕ ಮಧ್ಯೆಯ ರಾಷ್ಟ್ರೀಯ ಹೆದ್ದಾರಿಯಲ್ಲಿ ಟ್ರಾಫಿಕ್ ಜಾಮ್
BGT 2024: ಆಸೀಸ್ ಪತ್ರಿಕೆಯ ಮುಖಪುಟದಲ್ಲಿ ಕೊಹ್ಲಿ
Waqf issue; ಎರ್ನಾಕುಳಂನಲ್ಲಿ 400 ಎಕ್ರೆ ಜಮೀನು ಮೇಲೆ ವಕ್ಫ್ ಮಂಡಳಿ ಕಣ್ಣು: ಆರೋಪ
By Election: ಸುಬ್ರಹ್ಮಣ್ಯ ಗ್ರಾಮ ಪಂಚಾಯಿತಿ: ಸಲ್ಲಿಕೆಯಾಗದ ನಾಮಪತ್ರ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.