ಸಾಮಾಜಿಕ ಮಾಧ್ಯಮಗಳ ಮೂಲಕ ಉಗ್ರವಾದ ವಿಸ್ತರಣೆ
ಲೋಕಸಭೆಗೆ ಕೇಂದ್ರ ಸರಕಾರ ಮಾಹಿತಿ ; ದೇಶದಲ್ಲಿ ಹೆಚ್ಚಿದೆ ಕ್ಯಾನ್ಸರ್ ಪ್ರಕರಣಗಳು
Team Udayavani, Dec 14, 2022, 6:20 AM IST
ಹೊಸದಿಲ್ಲಿ: ಸಾಮಾಜಿಕ ಮಾಧ್ಯಮಗಳ ಬಳಕೆಯ ಮುಖಾಂತರ ಭಯೋತ್ಪಾದನೆ ಹಬ್ಬುವ ಸಾಧ್ಯತೆ ಈಗ ಹಿಂದೆಂದಿಗಿಂತಲೂ ಹೆಚ್ಚಿದೆ. ಲೋಕಸಭೆಯಲ್ಲಿ ಕೇಂದ್ರ ಸಚಿವ ನಿತ್ಯಾನಂದ ರಾಯ್ ಈ ಆಘಾತಕಾರಿ ಮಾಹಿತಿ ನೀಡಿದ್ದಾರೆ.
ಗಡಿರಹಿತ ಸೈಬರ್‌ಸ್ಪೇಸ್‌ನೊಂದಿಗೆ ತ್ವರಿತ ಸಂವಹನವೂ ಜತೆಗೂಡಿರುವ ಕಾರಣ ಹಿಂದೆಂದಿಗಿಂತಲೂ ಹೆಚ್ಚು ವೇಗದಲ್ಲಿ ಉಗ್ರವಾದವು ವ್ಯಾಪಿಸಲಾರಂಭಿಸಿದೆ. ಇದು ದೇಶದ ಸಾರ್ವಭೌಮತೆ ಮತ್ತು ಸಮಗ್ರತೆಗೆ ಅಪಾಯವೊಡ್ಡಿದೆ ಎಂದಿದ್ದಾರೆ. ಕಳೆದ 3 ವರ್ಷಗಳಲ್ಲಿ ಪ್ರತೀದಿನ ಸುಮಾರು 1,500 ರಷ್ಟು ಸೈಬರ್ ಅಪರಾಧ ಪ್ರಕರಣಗಳು ದಾಖಲಾಗಿವೆ. ಈ ಪೈಕಿ ಶೇ.2ರಷ್ಟು ಪ್ರಕರಣಗಳಲ್ಲಿ ಮಾತ್ರ ಎಫ್ಐಆರ್ ದಾಖಲಾಗಿದೆ ಎಂದೂ ಸರಕಾರ ತಿಳಿಸಿದೆ.
ಕ್ಯಾನ್ಸರ್ ಕೇಸ್, ಸಾವು ಹೆಚ್ಚಳ: 2020- 2022ರ ನಡುವೆ ದೇಶದಲ್ಲಿ ಕ್ಯಾನ್ಸರ್ ಪ್ರಕರಣಗಳು ಮತ್ತು ಅದರಿಂದಾದ ಸಾವು ಪ್ರಕರಣಗಳು ಗಣನೀಯವಾಗಿ ಹೆಚ್ಚಳವಾಗಿವೆ. 2020ರಲ್ಲಿ 13,92,179 ರಷ್ಟಿದ್ದ ಪ್ರಕರಣಗಳು, 2022ರ ವೇಳೆಗೆ 15,61,427 ಕ್ಕೇರಿಕೆಯಾಗಿವೆ. ಸಾವು 7,70,230 ಇದ್ದಿದ್ದು, ಎರಡೇ ವರ್ಷದಲ್ಲಿ 8,08,558ಕ್ಕೇರಿಕೆಯಾಗಿದೆ.
ಈ ನಡುವೆ, 2021-22ರಲ್ಲಿ ಲಭ್ಯವಿದ್ದ 60,202 ವೈದ್ಯ ಪಿಜಿ ಸೀಟುಗಳ ಪೈಕಿ 3,733 ಸೀಟುಗಳು ಕೌನ್ಸೆಲಿಂಗ್ ಬಳಿಕವೂ ಭರ್ತಿಯಾಗಿಲ್ಲ ಎಂದು ಆರೋಗ್ಯ ಸಚಿವ ಮಾಂಡವೀಯಾ ತಿಳಿಸಿದ್ದಾರೆ.
ಸಮುದ್ರದ ಮೂಲಕ: ಭಾರತಕ್ಕೆ ಕಳ್ಳಸಾಗಣೆ ಮೂಲಕ ತರಲಾಗುತ್ತಿರುವ ಹೆರಾಯಿನ್, ಕೊಕೇನ್, ಹಶೀಶ್‌ನಂತಹ ಮಾದಕದ್ರವ್ಯಗಳ ಪೈಕಿ ಅತೀ ಹೆಚ್ಚು ಡ್ರಗ್ಸ್ ಸಮುದ್ರದ ಮೂಲಕ ಸಾಗಣೆಯಾಗುತ್ತಿದೆ ಎಂದು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ರಾಜ್ಯಸಭೆಗೆ ಲಿಖೀತ ಮಾಹಿತಿ ನೀಡಿದ್ದಾರೆ. ಪ್ರಸಕ್ತ ವರ್ಷದ ನ.30ರ ವರೆಗೆ 3,017 ಕೆ.ಜಿ. ಹೆರಾಯಿನ್, 122 ಕೆಜಿ ಕೊಕೇನ್ ವಶಪಡಿಸಿಕೊಳ್ಳಲಾಗಿದ್ದು, ಈ ಪೈಕಿ ಕ್ರಮವಾಗಿ ಶೇ.55 ಮತ್ತು ಶೇ.84ರಷ್ಟು ಡ್ರಗ್ಸ್ ಸಮುದ್ರದ ಮೂಲಕ ಕಳ್ಳಸಾಗಣೆಯಾಗಿದ್ದು ಎಂದಿದ್ದಾರೆ ನಿರ್ಮಲಾ.
ಪ್ರಚಾರಕ್ಕೆ 168 ಕೋಟಿ: ಪ್ರಸಕ್ತ ವಿತ್ತೀಯ ವರ್ಷದಲ್ಲಿ ಇದುವರೆಗೆ ಕೇಂದ್ರ ಸರಕಾರ ಪ್ರಚಾರ ಮತ್ತು ಜಾಹೀರಾತಿಗಾಗಿ 168.8 ಕೋಟಿ ವೆಚ್ಚ ಮಾಡಿದೆ ಎಂದು ತಿಳಿಸಿದೆ. ವಿದ್ಯುನ್ಮಾನ ಮಾಧ್ಯಮ ಗಳಲ್ಲಿ ಜಾಹೀರಾತಿಗಾಗಿ 76.84 ಕೋಟಿ ರೂ. ವಿನಿಯೋಗಿಸಲಾಗಿದೆ.
2,302 ಕೊರೊನಾ ವೀರರ ಕುಟುಂಬಕ್ಕೆ ಪರಿಹಾರ
ಕೊರೊನಾ ವಿರುದ್ಧದ ಹೋರಾಟದ ವೇಳೆ ಮಡಿದ ಆರೋಗ್ಯ ಸಿಬಂದಿಯ ಕುಟುಂಬಕ್ಕೆ ತಲಾ 10 ಲಕ್ಷ ರೂ. ವಿಮೆ ನೀಡುವ ಯೋಜನೆಯ ಅನ್ವಯ ಈವರೆಗೆ 2,302 ಮಂದಿಗೆ ತಲಾ 50 ಲಕ್ಷ ರೂ.ಗಳನ್ನು ವಿತರಿಸಲಾಗಿದೆ. ಹೀಗೆಂದು ರಾಜ್ಯಸಭೆಗೆ ಕೇಂದ್ರ ಆರೋಗ್ಯ ಖಾತೆ ಸಹಾಯಕ ಸಚಿವೆ ಭಾರತಿ ಪ್ರವೀಣ್ ಪವಾರ್ ಲಿಖೀತ ಮಾಹಿತಿ ನೀಡಿದ್ದಾರೆ.
ಕರ್ನಾಟಕದ 38 ಮಂದಿಯ ಸಹಿತ ಒಟ್ಟು 2,302 ಮಂದಿ ಕೊರೊನಾ ವೀರರ ಕುಟುಂಬಕ್ಕೆ ತಲಾ 50 ಲಕ್ಷ ರೂ. ವಿಮೆ ಮೊತ್ತ ಪಾವತಿಸಲಾಗಿದೆ. ಈ ಪೈಕಿ 465 ಕ್ಲೇಮುಗಳು ವೈದ್ಯರ ಕುಟುಂಬಗಳಿಗೆ ಸಂಬಂಧಿಸಿದ್ದು ಎಂದೂ ಸಚಿವೆ ಭಾರತಿ ತಿಳಿಸಿದ್ದಾರೆ. ಬಿಹಾರದ 53, ಉತ್ತರಪ್ರದೇಶದ 64, ಮಹಾರಾಷ್ಟ್ರದ 43, ತಮಿಳುನಾಡು ಮತ್ತು ಆಂಧ್ರಪ್ರದೇಶದ ತಲಾ 37 ವೈದ್ಯರ ಕುಟುಂಬಗಳಿಗೆ ವಿಮೆಯ ಮೊತ್ತ ಪಾವತಿಸಲಾಗಿದೆ ಎಂದೂ ಅವರು ಮಾಹಿತಿ ನೀಡಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Mohan Bhagwat; ತಿಳುವಳಿಕೆಯ ಕೊರತೆಯಿಂದ ಧರ್ಮದ ಹೆಸರಿನಲ್ಲಿ ಶೋಷಣೆ
Allu Arjun: ನಟ ಅಲ್ಲು ಅರ್ಜುನ್ ಮನೆ ಮೇಲೆ ಕಲ್ಲು ತೂರಾಟ; ದಾಳಿಗೆ ಯತ್ನ
Nagpur: ʼಪುಷ್ಪ-2ʼ ನೋಡುತ್ತಿದ್ದಾಗಲೇ ಥಿಯೇಟರ್‌ಗೆ ಪೊಲೀಸರ ಎಂಟ್ರಿ; ಸ್ಮಗ್ಲರ್ ಬಂಧನ
Mumbai: ಕಾರು ಢಿಕ್ಕಿ; ರಸ್ತೆ ಬದಿ ಆಡುತ್ತಿದ್ದ 4ರ ಬಾಲಕ ಸ್ಥಳದಲ್ಲೇ ಮೃ*ತ್ಯು
Viral: ಲಿಂಗ ಪರಿವರ್ತನೆ ಸರ್ಜರಿಗೆ ಒಳಗಾಗಿ ಪ್ರೀತಿಸಿದ ಯುವತಿ ಜತೆ ವಿವಾಹವಾದ ಮಹಿಳೆ.!
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.