ಸೂರ್ಯನ ಅಪರೂಪದ ಮಾಹಿತಿ ಲಭ್ಯ
Team Udayavani, Jun 24, 2021, 6:45 AM IST
ಹೊಸದಿಲ್ಲಿ: “ಚಂದ್ರಯಾನ-2′ ಯೋಜನೆಯಡಿ ಕಳುಹಿಸಲಾಗಿದ್ದ ಪರಿಕರವೊಂದು ಸೂರ್ಯನ ಕರೊನಾ ಹಾಗೂ ಹೀಲಿಯೋ ಫಿಕ್ಸ್ ಬಗ್ಗೆ ಅಪರೂಪದ ಮಾಹಿತಿಗಳನ್ನು ಕಳುಹಿಸಿರುವುದಾಗಿ ಇಸ್ರೋ ತಿಳಿಸಿದೆ.
ಬರಿಗಣ್ಣಿಗೆ ಕಾಣುವ ಸೂರ್ಯನ ವಲಯದಿಂದ ಆಚೆಗೆ ನೂರಾರು ಕಿ.ಮೀ.ವರೆಗೆ ಸೂರ್ಯನ ಶಾಖ, ಬೆಳಕು ಇರುವ ಪ್ರಭಾವಳಿ ಇದ್ದು, ಸೂರ್ಯನ ಮೇಲ್ಮೆ„ಯಲ್ಲಿ ಇರುವ ಶಾಖಕ್ಕಿಂತ ಹೆಚ್ಚಿನ ಶಾಖ ಅಲ್ಲಿರುತ್ತದೆ. ಅದರ ಅಧ್ಯಯನದಲ್ಲಿ ಹಲವಾರು ವರ್ಷಗಳಿಂದ ವಿಜ್ಞಾನಿಗಳು ತೊಡಗಿದ್ದಾರೆ.
ಇದಲ್ಲದೆ ಸೌರಮಂಡಲದ ವಿವಿಧ ಗ್ರಹಗಳ ಮೇಲೆ ಸೂರ್ಯನ ಪರಿಣಾಮಗಳನ್ನು ಅಧ್ಯ ಯನ ಮಾಡುವ ಶಾಸ್ತ್ರವನ್ನು ಹೀಲಿಯೋ ಫಿಸಿಕ್ಸ್ ಎಂದು ಕರೆಯಲಾಗುತ್ತದೆ. ಜೀವಿಗಳ ಮೇಲೆ ಸಕಾರಾತ್ಮಕ ಪರಿಣಾಮಗಳನ್ನು ಬೀರುವ ಸೂರ್ಯನ ಬೆಳಕಿನಲ್ಲಿ ಯಾವ ಶಕ್ತಿಯಿದೆ? ಯಾವ ಶಕ್ತಿಯಿಂದ ನಿಸರ್ಗದ ಮೇಲೆ ಸೂರ್ಯನ ಬೆಳಕು ಪರಿಣಾಮ ಬೀರುತ್ತದೆ ಎಂಬಿತ್ಯಾದಿ ವಿಚಾರಗಳನ್ನು ಅಧ್ಯಯನ ಮಾಡಲಾಗುತ್ತದೆ. ಇವೆರಡೂ ವಿಚಾರಗಳಿಗೆ ಸಂಬಂಧಿಸಿ ಮಹತ್ವದ ವಿಷಯಗಳನ್ನು ಚಂದ್ರ ಯಾನ-2ರ ಪರಿಕರವೊಂದು ಕಳುಹಿಸಿದೆ.
ಸನ್ ಸ್ಪಾಟ್‌ಗಳ ಅಧ್ಯಯನ: ಸದಾ ಧಗಧಗಿಸುವ ಸೂರ್ಯನ ಗೋಳದಲ್ಲೂ ಕತ್ತಲೆಯಿಂದ ಕೂಡಿದ ಕಪ್ಪಾಗಿ ಕಾಣುವ ಕೆಲವು ಜಾಗಗಳಿವೆ. ಅವನ್ನು ಸನ್ ಸ್ಪಾಟ್‌ಗಳೆಂದು ಕರೆಯುತ್ತಾರೆ. ಅಲ್ಲಿ ಅಯಸ್ಕಾಂತೀಯ ಶಕ್ತಿ ಹೆಚ್ಚಾಗಿರುತ್ತದೆ. ಇವುಗಳಿಂದಲೇ ಸೂರ್ಯನ ಕರೊನಾ ವಲಯ ದಲ್ಲಿ ಹೆಚ್ಚು ಉಷ್ಣಾಂಶ ಸೃಷ್ಟಿಯಾಗುತ್ತದೆ ಎಂಬ ತರ್ಕಕ್ಕೆ ಬರಲಾಗಿದೆ ಎಂದು ಇಸ್ರೋ ತಿಳಿಸಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kolkata: ತಮ್ಮದೇ ಪ್ರತಿಮೆ ಅನಾವರಣ ಮಾಡಿದ ಪಶ್ವಿಮ ಬಂಗಾಲ ಗವರ್ನರ್
Uttar Pradesh: ತಪ್ಪು ದಾರಿ ತೋರಿದ ಜಿಪಿಎಸ್: ನದಿಗೆ ಬಿದ್ದು ಮೂವರ ಸಾವು
Jharkhand: ಬಿಜೆಪಿ ಗೆದ್ದೇ ಗೆಲ್ಲುತ್ತದೆ ಎಂದಿಲ್ಲ: ಅಸ್ಸಾಂ ಸಿಎಂ ಬಿಸ್ವಾ ವಾದ
NCP Vs NCP: ಶರದ್ ಬಣದ ವಿರುದ್ಧ 29 ಕ್ಷೇತ್ರ ಗೆದ್ದ ಅಜಿತ್ ಬಣ
Maharashtra: ಉದ್ದವ್ ಬಣದ 36 ಅಭ್ಯರ್ಥಿ ಸೋಲಿಸಿದ ಶಿಂಧೆ ಶಿವ ಸೇನೆ
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.