ಕ್ಷುಲ್ಲಕ ಕಾರಣ: ಉರಿ ವಲಯದ ಜವಾನನಿಂದ ಸೇನಾ ಮೇಜರ್ ಗುಂಡಿಕ್ಕಿ ಕೊಲೆ
Team Udayavani, Jul 18, 2017, 12:04 PM IST
ಹೊಸದಿಲ್ಲಿ : ಅತ್ಯಂತ ಆಘಾತಕಾರಿ ಘಟನೆಯೊಂದರಲ್ಲಿ ಉರಿ ವಲಯದಲ್ಲಿನ ಜವಾನನೊಬ್ಬ ಕ್ಷುಲ್ಲಕ ಕಾರಣಕ್ಕೆ ರಾಷ್ಟ್ರೀಯ ರೈಫಲ್ಸ್ ಪಡೆಯ ಸೇನಾ ಮೇಜರ್ ಒಬ್ಬರನ್ನು ಗುಂಡಿಕ್ಕಿ ಕೊಂದಿರುವುದು ವರದಿಯಾಗಿದೆ.
ಈ ದುರ್ಘಟನೆಗೆ ಕಾರಣವಾಗಿರುವುದು ಸೆಲ್ ಫೋನ್ ಬಳಕೆ ಜಗಳ. ಜಮ್ಮು ಕಾಶ್ಮೀರದ ಗಡಿ ನಿಯಂತ್ರಣ ರೇಖೆ ಸಮೀಪ ಕರ್ತವ್ಯದಲ್ಲಿದ್ದ ಉರಿ ವಲಯದ ಜವಾನನಿಗೆ ರಾಷ್ಟ್ರೀಯ ರೈಫಲ್ಸ್ ಪಡೆಯ ಮೇಜರ್ ಶಿಖರ್ ಥಾಪಾ ಮೊಬೈಲ್ ಫೋನ್ ಬಳಸದಿರಲು ಸೂಚಿಸಿದ್ದಾರೆ. ಅತ್ಯಂತ ಸೂಕ್ಷ್ಮ ಗಡಿ ಪ್ರದೇಶವಾಗಿರುವ ಈ ಭಾಗದಲ್ಲಿ ಮೊಬೈಲ್ ಬಳಸಬೇಡ ಎಂದು ಖಡಕ್ ಎಚ್ಚರಿಕೆ ಕೊಟ್ಟಿದ್ದಾರೆ.
ಆದರೆ ಈ ಎಚ್ಚರಿಕೆಯೊಂದಿಗೆ ತನ್ನ ಮೊಬೈಲ್ ಫೋನನ್ನು ಹಾಳು ಗೆಡಹಲಾಗಿದ್ದ ಕಾರಣಕ್ಕೆ ತೀವ್ರ ಆಕ್ರೋಶಿತನಾದ ಜವಾನನು ಮೇಜರ್ ಥಾಪಾ ಅವರ ಮೇಲೆ ಐದು ಬುಲೆಟ್‌ಗಳನ್ನು ಹಾರಿಸಿ ಅವರನ್ನು ಕೊಂದೇ ಬಿಟ್ಟಿದ್ದಾನೆ ಎಂದು ವರದಿ ತಿಳಿಸಿದೆ. ಮೇಜರ್ ಥಾಪಾ ಅವರು 71ನೇ ಸಶಸ್ತ್ರ ರೆಜಿಮೆಂಟ್‌ಗೆ ಸೇರಿದವರಾಗಿದ್ದಾರೆ.
ಈ ಘಟನೆಯ ಪೂರ್ಣ ವಿವರಗಳೊಂದಿಗೆ ಸೇನೆಯು ದಿನಾಂತ್ಯದ ವೇಳೆಗೆ ಅಧಿಕೃತ ಪ್ರಕಟನೆಯನ್ನು ನೀಡಲಿದೆ ಎಂದು ತಿಳಿದು ಬಂದಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Jammu – Kashmir: ಮತ್ತೆ ಅಟ್ಟಹಾಸ ಮೆರೆದ ಉಗ್ರರು… ಇಬ್ಬರನ್ನು ಅಪಹರಿಸಿ ಹ*ತ್ಯೆ
Maharashtra: ಮತ ನೀಡಿದರೆ ಮದುವೆ ಮಾಡಿಸುವೆ: ಶರದ್ ಬಣದ ನಾಯಕ
India-Afghanistan: ಆಫ್ಘನ್ ಜೊತೆಗೆ ಬಾಂಧವ್ಯ ಪುನಃಸ್ಥಾಪನೆಗೆ ಭಾರತ ಸಜ್ಜು?
Doctor: ಸೀರೆ ಉಟ್ಟ ಸ್ತ್ರೀಯರೇ,ಪೆಟಿಕೋಟ್ ಕ್ಯಾನ್ಸರ್ ಬಗ್ಗೆ ಎಚ್ಚರವಿರಲಿ
Panaji: ವಿದೇಶಿ ಪ್ರವಾಸಿಗರ ಕಳೆದುಕೊಂಡ ಗೋವಾ: ಆರ್ಥಿಕ ಅಪಾಯದ ಭೀತಿ!
MUST WATCH
ಹೊಸ ಸೇರ್ಪಡೆ
Niveus Mangalore Marathon 2024: ನ.10: ನೀವಿಯಸ್ ಮಂಗಳೂರು ಮ್ಯಾರಥಾನ್
Ghaati: ಸ್ವೀಟಿ ಅಲ್ಲ ಘಾಟಿ; ಫಸ್ಟ್‌ಲುಕ್‌ನಲ್ಲಿ ಅನುಷ್ಕಾ ಸಿನಿಮಾ
Brahmavara ಬಂಟರ ಯಾನೆ ನಾಡವರ ಸಂಘ: ನಾಳೆ ನೂತನ ಪದಾಧಿಕಾರಿಗಳ ಪದಪ್ರದಾನ
Afghanistan Cricketer: ಏಕದಿನ ಕ್ರಿಕೆಟ್ ಗೆ ವಿದಾಯ ಘೋಷಿಸಿದ ಅಫ್ಘಾನ್ ಆಲ್‌ರೌಂಡರ್
Mangaluru: ಡಿ. 7: ಮುಂಬಯಿಯಲ್ಲಿ ವಿಶ್ವ ಬಂಟರ ಸಮಾಗಮ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.