Ratan Tata; ಶ*ವಪೆಟ್ಟಿಗೆ ಬಿಟ್ಟು ಕದಲದ ‘ಗೋವಾ’: ಒಡೆಯನ ಸಾವಿಗೆ ಶ್ವಾನದ ಕಂಬನಿ!
ರತನ್ ಟಾಟಾಗೆ ಗುಡ್ ಬೈ ಹೇಳಿದ ಅಚ್ಚುಮೆಚ್ಚಿನ ಸಾಕು ನಾಯಿ
Team Udayavani, Oct 11, 2024, 6:01 AM IST
ರತನ್ ಟಾಟಾರನ್ನು ಕಡೆಯದಾಗಿ ಕಣ್ತುಂಬಿಕೊಳ್ಳಲು ದೇಶದ ಮೂಲೆ ಮೂಲೆಗಳಿಂದ ಗಣ್ಯರು, ಜನಸಾಮಾನ್ಯರು ಬಂದು ಕಂಬನಿ ಮಿಡಿಯುತ್ತಿರುವುದು ಒಂದೆಡೆಯಾದರೆ, ಯಾರನ್ನು ತಮ್ಮ ಕುಟುಂಬಸ್ಥರಂತೆ ರತನ್ ಕಂಡರೋ ಆ ಮೂಕ ಪ್ರಾಣಿಗಳು ಒಡೆಯನ ಸಾವಿನ ನೋವಿನಿಂದ ಮರುಗುತ್ತಿರುವುದು ಮತ್ತೂಂದೆಡೆ. ಹೌದು, ರತನ್ ಪ್ರೀತಿಯಿಂದ ಸಾಕಿ ಸಲುಹಿದ್ದ ಗೋವಾ ಎಂಬ ಶ್ವಾನ ತುತ್ತು ಅನ್ನವನ್ನೂ ತಿನ್ನದೇ, ರತನ್ ಅವರ ಶವಪೆಟ್ಟಿಗೆಯಿಂದ ಹಿಂದೆಯೂ ಸರಿಯದೇ ಒಡೆಯ ಎಚ್ಚರಗೊಳ್ಳಲೆಂದು ಕಾದು ಕುಳಿತಿತ್ತು. ಈ ದೃಶ್ಯ ಎಲ್ಲರ ಮನಕಲುಕಿದೆ.
ಗೋವಾ ರತನ್ ಅವರ ಅಚ್ಚುಮೆಚ್ಚಿನ ಶ್ವಾನ. ಒಮ್ಮೆ ರತನ್ ಟಾಟಾ ಗೋವಾ ಪ್ರವಾಸಕ್ಕೆಂದು ತೆರಳಿದ್ದಾಗ ಅವರ ಹಿಂದೆ ಬಾಲ ಅಲ್ಲಾಡಿಸುತ್ತಾ ಬೀದಿ ಶ್ವಾನವೊಂದು ಹಿಂಬಾಲಿಸಿತ್ತಂತೆ. ಅದರ ಪ್ರೀತಿಗೆ ಸೋತ ರತನ್ ಆ ಶ್ವಾನದ ಮೈದಡವಿ ಅದನ್ನು ಮುಂಬೈಗೆ ಕರೆತಂದು ಪೋಷಿಸಿ ತಮ್ಮ ಜತೆಯಲ್ಲೇ ಇರಿಸಿಕೊಂಡಿದ್ದರು. ಅದು ಗೋವಾದಲ್ಲಿ ಸಿಕ್ಕ ಕಾರಣ ಅದಕ್ಕೆ “ಗೋವಾ’ ಎಂದೇ ನಾಮಕರಣವನ್ನೂ ಮಾಡಿದ್ದರು. ಈಗ ಅದೇ ಗೋವಾ ತನ್ನ ಒಡೆಯ ಎದ್ದೇಳಲಿ, ತನ್ನ ಮೈದಡವಲಿ ಎಂದು ಶವಪೆಟ್ಟಿಗೆ ಬಳಿ ಬಾಲಾ ಅಲ್ಲಾಡಿಸುತ್ತಾ ನಿಂತಿದ್ದು ಮಾತ್ರ ಎಲ್ಲರ ಕಣ್ಣಲ್ಲಿ ಕಂಬನಿ ತುಂಬಿಸಿದೆ. ಬೀದಿ ಶ್ವಾನಗಳ ರಕ್ಷಣೆಗಾಗಿ ದುಡಿತ ಚೇತನಕ್ಕೆ ಗೋವಾ ನೀಡಿದ ಗೌರವ ನಿಜಕ್ಕೂ ದೊಡ್ಡದು.
ಭಾವುಕ ವಿದಾಯ ನೀಡಿದ ಅತೀ ಕಿರಿಯ ಗೆಳೆಯ ಶಂತನು ನಾಯ್ಡು
ರತನ್ ಟಾಟಾ ಕಚೇರಿಯ ಜನರಲ್ ಮ್ಯಾನೇಜರ್ ಎನ್ನುವುದ ಕ್ಕಿಂತಲೂ ಅವರ ವಿಶ್ವಾಸಾರ್ಹ ಗೆಳೆಯರಾಗಿದ್ದ ಶಂತನು ನಾಯ್ಡು ತಮ್ಮ ಒಡೆಯನನ್ನು ಬೆಳಕು ನೀಡುವ ಲೈಟ್ ಹೌಸ್‌ಗೆ ಹೋಲಿಸಿ ಲಿಂಕ್ಡ್ಇನ್‌ನಲ್ಲಿ ಭಾವನಾತ್ಮಕ ಪೋಸ್ಟ್ ಹಂಚಿ ಕೊಂಡಿದ್ದಾರೆ. “ಈ ಸ್ನೇಹ ಕಳೆದುಕೊಂಡ ಬಳಿಕ ನನ್ನೊ ಳಗೆ ದೊಡ್ಡ ಕಂದಕ ಸೃಷ್ಟಿಯಾ ಗಿದೆ. ಈ ಕಂದಕ ಮುಚ್ಚಲು ಪ್ರಯತ್ನಿ ಸುತ್ತಾ ನನ್ನ ಉಳಿದ ಜೀವನ ಕಳೆಯುತ್ತೇನೆ. ಪ್ರೀತಿಗೆ ಪಾವ ತಿ ಸ ಬೇಕಾದ ಬೆಲೆ ದುಃಖವಾಗಿದೆ. ಗುಡ್ ಬೈ, ನನ್ನ ಪ್ರೀತಿಯ ಲೈಟ್ ಹೌಸ್’ ಎಂದು ಅವರು ನುಡಿ ನಮನ ಸಲ್ಲಿಸಿದ್ದಾರೆ. ಬಳಿಕ ಟಾಟಾ ಅವರ ಅಂತಿಮ ಯಾತ್ರೆಯೊಂದಿಗೆ ಶಂತನು ತಮ್ಮ ಯೆಜ್ಡಿ ಬೈಕ್‌ನೊಂದಿಗೆ ಸಾಗಿ ಗೌರವ ಸಲ್ಲಿಸಿದರು. 2021ರಲ್ಲಿ ಟಾಟಾ ಅವರು ತಮ್ಮ ಕಿರಿಯ ಸ್ನೇಹಿತ ಶಂತನು ಅವರೊಂದಿಗೆ ಸರಳ ಹುಟ್ಟುಹಬ್ಬ ಆಚರಿಸಿದ ವೀಡಿಯೋ ವೈರಲ್ ಆಗಿತ್ತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kota: ಕೋಟಾದಲ್ಲಿ ಮತ್ತೂಬ್ಬ ವಿದ್ಯಾರ್ಥಿ ಆತ್ಮಹತ್ಯೆ: ವರ್ಷದ 17ನೇ ಪ್ರಕರಣ
Allu Arjun; ತಪ್ಪು ಮಾಹಿತಿ, ಚಾರಿತ್ರ್ಯ ಹರಣಕ್ಕೆ ಯತ್ನ: ರೇವಂತ್ ರೆಡ್ಡಿಗೆ ತಿರುಗೇಟು
Mohali; ಬಹುಮಹಡಿ ಕಟ್ಟಡ ಕುಸಿತ: ಹಲವರು ಸಿಲುಕಿರುವ ಶಂಕೆ
Ashram;89 ವರ್ಷದ ಆಶ್ರಮ ಗುರುವಿನ ಮೇಲೆ ಆತ್ಯಾಚಾ*ರ ಪ್ರಕರಣ ದಾಖಲು
Delhi excise policy; ಕೇಜ್ರಿವಾಲ್ ವಿಚಾರಣೆಗೆ ಲೆಫ್ಟಿನೆಂಟ್ ಗವರ್ನರ್ ಅನುಮತಿ ಪಡೆದ ಇಡಿ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
C.T.Ravi issue: ಕೋರ್ಟ್‌ನಲ್ಲಿರುವ ವಿಚಾರದ ಬಗ್ಗೆ ಚರ್ಚಿಸುವುದು ಸರಿಯಲ್ಲ: ಜಿ.ಪರಮೇಶ್ವರ್
Padubidri: ದ್ವಿಚಕ್ರ ವಾಹನಕ್ಕೆ ಲಾರಿ ಢಿಕ್ಕಿ; ಸಹ ಸವಾರ ಸಾವು
Kundapura: ತ್ರಾಸಿ ಕಡಲ ಕಿನಾರೆಯಲ್ಲಿ ಮಗುಚಿದ ಜೆಟ್ ಸ್ಕೀ ಬೋಟ್; ರೈಡರ್ ನಾಪತ್ತೆ!
Kasaragod crime News: ಶಾಲಾ ತರಗತಿಯಲ್ಲಿ ವಿದ್ಯಾರ್ಥಿನಿಗೆ ಹಾವು ಕಡಿತ
Weightlifting: ಏಷ್ಯನ್ ವೇಟ್ ಲಿಫ್ಟಿಂಗ್; ಭಾರತಕ್ಕೆ ಎರಡು ಬೆಳ್ಳಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.