RBI ಇಂಗ್ಲೆಂಡ್‌ನಿಂದ 100 ಟನ್ ಚಿನ್ನ ವಾಪಸ್
ಸುರಕ್ಷೆಯ ಕಾರಣಕ್ಕಾಗಿ ಇಂಗ್ಲೆಂಡ್ ಬ್ಯಾಂಕ್‌ನಲ್ಲಿ ಬಂಗಾರ ಇರಿಸಿದ್ದ ಆರ್‌ಬಿಐ
Team Udayavani, Jun 1, 2024, 7:15 AM IST
ಹೊಸದಿಲ್ಲಿ: ಭಾರತೀಯ ರಿಸರ್ವ್ ಬ್ಯಾಂಕ್ ಸದ್ದಿಲ್ಲದೆ 100 ಟನ್ ಚಿನ್ನವನ್ನು ಬ್ಯಾಂಕ್ ಆಫ್ ಇಂಗ್ಲೆಂಡ್‌ನಿಂದ ಸ್ವದೇಶಕ್ಕೆ ಸ್ಥಳಾಂತರಿಸಿದೆ! ಸುರಕ್ಷೆಯ ಕಾರಣಕ್ಕೆ ಇಂಗ್ಲೆಂಡ್ ಬ್ಯಾಂಕ್‌ನಲ್ಲಿ ಇರಿಸಿದ್ದ ಚಿನ್ನದಲ್ಲಿ ಸ್ವಲ್ಪ ಪ್ರಮಾಣವನ್ನು ವಾಪಸ್ ತಂದಿದೆ. ಮುಂದಿನ ದಿನ ಗಳಲ್ಲಿ ಇನ್ನೂ ಇಷ್ಟು ಪ್ರಮಾಣದ ಚಿನ್ನವನ್ನು ಮರಳಿ ತರುವ ನಿರೀಕ್ಷೆಯಿದೆ ಎಂದು ಮೂಲಗಳು ವರದಿ ಮಾಡಿವೆ. ವಿಶೇಷವೆಂದರೆ 1991ರ ಅನಂತರ ಇಷ್ಟು ದೊಡ್ಡ ಪ್ರಮಾಣದಲ್ಲಿ ಭಾರತವು ತನ್ನ ಚಿನ್ನವನ್ನು ಮರಳಿ ತಂದಿರುವುದು ಇದೇ ಮೊದಲು.
ವಿದೇಶದಲ್ಲಿಟ್ಟಿದ್ದ ಚಿನ್ನವನ್ನು ಮರಳಿ ದೇಶಕ್ಕೆ ತಂದಿರುವುದು ಬಹಳ ಮಹತ್ವ ಪಡೆದಿದೆ. ಪ್ರಸ್ತುತ ಭಾರತೀಯ ರಿಸರ್ವ್ ಬ್ಯಾಂಕ್ ಬಳಿ ಒಟ್ಟು 822.10 ಟನ್ ಚಿನ್ನ ಸಂಗ್ರಹವಿದೆ. ಇದರಲ್ಲಿ 408.31 ಟನ್ ಚಿನ್ನವನ್ನು ದೇಶದಲ್ಲಿಯೇ ಇರಿಸಿಕೊಂಡಿದ್ದರೆ ಅರ್ಧಕ್ಕೂ ಹೆಚ್ಚು ಚಿನ್ನದ ದಾಸ್ತಾನು ಇಂಗ್ಲೆಂಡ್ ಮತ್ತು ಸ್ವಿಜರ್ಲೆಂಡ್‌ನ ಬ್ಯಾಂಕ್‌ಗಳಲ್ಲಿ ಸುರಕ್ಷಿತವಾಗಿ ಇರಿಸಲಾಗಿದೆ.
ಮತ್ತಷ್ಟು
ಚಿನ್ನ ವಾಪಸ್?
ಮುಂದಿನ ತಿಂಗಳುಗಳಲ್ಲಿ ಆರ್‌ಬಿಐ ಇನ್ನಷ್ಟು ಚಿನ್ನವನ್ನು ದೇಶಕ್ಕೆ ಸ್ಥಳಾಂತರಿಸಲಿದೆ ಎನ್ನಲಾಗಿದೆ. ಚಿನ್ನವನ್ನು ವಿದೇಶದಲ್ಲಿ ಇರಿಸಲು ನೀಡಬೇಕಾದ ಬೃಹತ್ ಮೊತ್ತದ ಹಣವನ್ನು ಇದರಿಂದ ಉಳಿಸಬಹುದು ಎಂಬ ಕಾರಣದಿಂದ ಆರ್‌ಬಿಐ ಈ ಹೆಜ್ಜೆಯಿರಿಸಿದೆ ಎಂದು ವಿಶ್ಲೇಷಿಸಲಾಗಿದೆ. ವಿದೇಶಾಂಗ ವಿನಿಮಯದ ಭಾಗವಾಗಿ ದೊಡ್ಡ ಪ್ರಮಾಣದಲ್ಲಿ ಚಿನ್ನದ ಸಂಗ್ರಹವನ್ನು ಆರ್‌ಬಿಐ ಹೊಂದಿದೆ.
ಎಲ್ಲಿತ್ತು? ಎಷ್ಟಿತ್ತು?
-ಆರ್‌ಬಿಐ ಬಳಿ 822.10ಟನ್ ಚಿನ್ನ ಸಂಗ್ರಹವಿದೆ.
-408.31 ಟನ್ ಚಿನ್ನವನ್ನು ದೇಶದಲ್ಲೇ ಇರಿಸಿಕೊಳ್ಳಲಾಗಿದೆ.
-ಒಟ್ಟು ಸಂಗ್ರಹದ ಅರ್ಧಕ್ಕೂ ಹೆಚ್ಚು ಚಿನ್ನ ಇಂಗ್ಲೆಂಡ್ ಮತ್ತು ಸ್ವಿಸ್ ಬ್ಯಾಂಕ್‌ಗಳಲ್ಲಿವೆ.
-ಪ್ರಸ್ತುತ ಇಂಗ್ಲೆಂಡ್‌ನಿಂದ 100 ಟನ್ ಚಿನ್ನ ವಾಪಸ್ ಬಂದಿದೆ.
-ಮುಂದಿನ ತಿಂಗಳುಗಳಲ್ಲಿ ಇನ್ನಷ್ಟು ಟನ್ ಚಿನ್ನ ದೇಶಕ್ಕೆ ಮರಳುವ ನಿರೀಕ್ಷೆ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.