ಮೋದಿ 2.0 ಮೊದಲ ಆರ್ಬಿಐ ಹಣಕಾಸು ನೀತಿ: ರಿಪೋ ದರ ಶೇ.0.25 ಕಡಿತ
Team Udayavani, Jun 6, 2019, 12:19 PM IST
ಹೊಸದಿಲ್ಲಿ : ಪ್ರಧಾನಿ ನರೇಂದ್ರ ಮೋದಿ 2.0 ಸರಕಾರ ಅಧಿಕಾರ ಸ್ವೀಕರಿಸಿದ ಬಳಿಕದಲ್ಲಿ ತನ್ನ ಮೊದಲ ಹಣಕಾಸು ನೀತಿಯನ್ನು ಇಂದು ಗುರುವಾರ ಪ್ರಕಟಿಸಿರುವ ಭಾರತೀಯ ರಿಸರ್ವ್ ಬ್ಯಾಂಕ್, ರಿಪೋ ದರವನ್ನು ನಿರಂತರ ಮೂರನೇ ಬಾರಿಗೆ ಶೆ.0.25 ಪ್ರಮಾಣದಲ್ಲಿ ಕಡಿತ ಮಾಡಿದೆ.
ನಿಧಾನಗತಿಯಲ್ಲಿರುವ ದೇಶದ ಆರ್ಥಿಕ ಪ್ರಗತಿಗೆ ಉತ್ತೇಜನ ಕೊಡುವ ಸಲುವಾಗಿ ಆರ್ಬಿಐ ಮಾಡಿರುವ ಈ ರೇಟ್ ಕಟ್ ನಿಂದಾಗಿ ಈಗಿನ್ನು ಬ್ಯಾಂಕುಗಳ ಸಾಲ ಬಡ್ಡಿ ದರ ಇಳಿಯಲಿದೆ; ಪರಿಣಾಮವಾಗಿ ಹೌಸಿಂಗ್ ಲೋನ್ ಇಎಂಐ ಕಡಿಮೆಯಾಗಲಿದೆ; ಕಾರು ಖರೀದಿ ಸಾಲ ಬಡ್ಡಿ ಇಳಿಯಲಿದೆ ಮತ್ತು ಕಾರ್ಪೊರೇಟ್ ರಂಗಕ್ಕೆ ಕಡಿಮೆ ಬಡ್ಡಿಯಲ್ಲಿ ಧಾರಾಳ ಸಾಲ ಸಿಗಲಿದೆ.
ಆರ್ಬಿಐ ಗವರ್ನರ್ ಶಕ್ತಿಕಾಂತ ದಾಸ್ ನೇತೃತ್ವದ ಆರು ಸದಸ್ಯರ ಹಣಕಾಸು ನೀತಿ ಸಮಿತಿಯು ಇಂದು ಗುರುವಾರ ಹಣಕಾಸು ನೀತಿಯನ್ನು ಪ್ರಕಟಿಸಿತು.
ನಿರಂತರ ಮೂರನೇ ಬಾರಿಗೆ ಇದೀಗ ಮಾಡಲಾಗಿರುವ ಶೇ.0.25ರ ಕಡಿತದಿಂದಾಗಿ ರಿಪೋ ದರ ಈಗ ಶೇ.5.75ಕ್ಕೆ ಇಳಿದಿದೆ. 2019-20ರ ಸಾಲಿನ ಎರಡನೇ ದ್ವೆ„ಮಾಸಿಕ ಹಣಕಾಸು ನೀತಿ ಇಂದಿನದ್ದಾಗಿದೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.