ಆರ್ಬಿಐ ಗವರ್ನರ್ಗೆ ಮಾಸಿಕ ವೇತನ 2.87 ಲಕ್ಷ ರೂ !
Team Udayavani, Jan 4, 2020, 11:13 PM IST
ಹೊಸದಿಲ್ಲಿ: ಭಾರತೀಯ ರಿಸರ್ವ್ ಬ್ಯಾಂಕ್ ಗವರ್ನರ್ ಶಕ್ತಿಕಾಂತ್ ದಾಸ್ ಅವರ ಮಾಸಿಕ ವೇತನ ಎಷ್ಟು ಗೊತ್ತಾ? ತುಟ್ಟಿ ಭತ್ಯೆ, ಇತರೆ ಪಾವತಿಗಳು ಸೇರಿ 2.87 ಲಕ್ಷ ರೂ.ಗಳು.
ಅಂದ ಹಾಗೆ, ಗವರ್ನರ್ ಮತ್ತು ಉಪ ಗವರ್ನರ್ ನಡುವಿನ ವೇತನದಲ್ಲಿ ದೊಡ್ಡ ಮೊತ್ತದ ಅಂತರವೇನೂ ಇಲ್ಲ. ಗವರ್ನರ್ ತಿಂಗಳಿಗೆ 2.87 ಲಕ್ಷ ರೂ. ಪಡೆದರೆ, ಉಪ ಗವರ್ನರ್ 2.55 ಲಕ್ಷ ರೂ. ಪಡೆಯುತ್ತಾರೆ. ಅಂದರೆ, ಇವರ ವೇತನದ ನಡುವಿನ ಅಂತರ ಕೇವಲ 31,500 ರೂ. ಮಾತ್ರ ಎಂದು ಆರ್ಬಿಐ ಬಿಡುಗಡೆ ಮಾಡಿದ ವರದಿಯಿಂದ ತಿಳಿದುಬಂದಿದೆ. ಅಚ್ಚರಿಯೆಂದರೆ, ಆರ್ಬಿಐ ಗವರ್ನರ್ ವೇತನದ ಪರಿಷ್ಕರಣೆ ನಡೆದಿದ್ದು 3 ವರ್ಷಗಳ ಹಿಂದೆ.
ಇದೇ ವೇಳೆ, ಅತಿದೊಡ್ಡ ಖಾಸಗಿ ಬ್ಯಾಂಕ್ ಆಗಿರುವ ಎಚ್ಡಿಎಫ್ಸಿ ವ್ಯವಸ್ಥಾಪಕ ನಿರ್ದೇಶಕ ಮತ್ತು ಸಿಇಒ ಪಡೆಯುವ ವೇತನ ತಿಂಗಳಿಗೆ 90 ಲಕ್ಷ ರೂ.ಗಳು ಎಂದು ಬ್ಯುಸಿನೆಸ್ ಟುಡೇ ವರದಿ ಮಾಡಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.