RBI: 25 ಮೂಲಾಂಶ ಏರಿಕೆಯೊಂದಿಗೆ ರಿಪೋ ದರ ಶೇ.6.50, ತಟಸ್ಥ ನಿಲುವು
Team Udayavani, Aug 1, 2018, 3:28 PM IST
ಹೊಸದಿಲ್ಲಿ : ಭಾರತೀಯ ರಿಸರ್ವ್ ಬ್ಯಾಂಕ್ ಇಂದು ಬುಧವಾರ ತನ್ನ ರಿಪೋ ದರವನ್ನು ಈಗಿನ ಶೇ.6.25ರಿಂದ ಶೇ.6.50 ಗೆ (25 ಮೂಲಾಂಶ) ಏರಿಸಿದೆ. ಇದೇ ರೀತಿ ರಿವರ್ಸ್ ರಿಪೋ ದರವನ್ನು ಈಗಿನ ಶೇ.6ರಿಂದ ಶೇ.6.25ಕ್ಕೆ (25 ಮೂಲಾಂಶ) ಏರಿಸಿದೆ.
ಏರುತ್ತಿರುವ ಹಣದುಬ್ಬರ ಮತ್ತು ಆರ್ಥಿಕ ಪ್ರಗತಿಯ ನಡುವೆ ಸಂತುಲನೆಯನ್ನು ಸಾಧಿಸಿವುದೇ ಈ ಕ್ರಮದ ಉದ್ದೇಶವಾಗಿದೆ ಎಂದು ಆರ್‌ಬಿಐ ಹೇಳಿಕೊಂಡಿದೆ.
ಇಂದು ಪ್ರಕಟಿಸಿದ ತನ್ನ ದ್ವೆ„ಮಾಸಿಕ ಹಣಕಾಸು ನೀತಿ ಪರಾಮಶೆಯಲ್ಲಿ ಆರ್‌ಬಿಐ ತಟಸ್ಥ ನೀತಿಯನ್ನು ಉಳಿಸಿಕೊಂಡಿದೆ.
ಹಣಕಾಸು ನೀತಿ ಪರಾಮರ್ಶೆ ಸಮಿತಿಯ (ಎಂಪಿಸಿ) ಆರು ಸದಸ್ಯರ ಪೈಕಿ ಐವರು ರಿಪೋ ಮತ್ತು ರಿವರ್ಸ್ ರಿಪೋ ದರ ಏರಿಕೆ ಪ್ರಸ್ತಾವದ ಪರವಾಗಿ ಮತ ಹಾಕಿದರು.
ಆರ್‌ಬಿಐ ಈ ವರ್ಷದ ಎಪ್ರಿಲ್ – ಸೆಪ್ಟಂಬರ್ ಅವಧಿಯಲ್ಲಿ ಜಿಡಿಪಿ ಬೆಳವಣಿಗೆಯನ್ನು ಶೇ.7.5 – ಶೇ.7.6ರಲ್ಲಿ ಅಂದಾಜಿಸಿದೆ. 2019ರ ಹಣಕಾಸು ವರ್ಷದಲ್ಲಿನ ಜಿಡಿಪಿ ಪ್ರಗತಿಯ ಅಂದಾಜನ್ನು ಶೇ.7.4ರಲ್ಲೇ ಉಳಿಸಿಕೊಂಡಿದೆ.
ಈ ವರ್ಷ ಜೂನ್‌ನಲ್ಲಿ ಆರ್‌ಬಿಐ ಕಳೆದ ನಾಲ್ಕು ವರ್ಷಗಳಲ್ಲೇ ಮೊದಲ ಬಾರಿಗೆ ರಿಪೋ ದರ (ಸಾಲದ ಮೇಲಿನ ಬಡ್ಡಿ ದರ) ವನ್ನು 25 ಮೂಲಾಂಶ ಏರಿಸಿತ್ತು. ಅಂತೆಯೇ 2013ರ ಅಕ್ಟೋಬರ್ ಬಳಿಕದಲ್ಲಿ ಆರ್‌ಬಿಐ ಈ ದರವನ್ನು ತನ್ನ ನಿರಂತರ ಎರಡು ದ್ವೆ„ಮಾಸಿಕ ಪರಾಮರ್ಶೆಯಲ್ಲಿ ಏರಿಸಿರುವುದು ಗಮನಾರ್ಹವಾಗಿದೆ.
ಭಾರತದ ವಾರ್ಷಿಕ ಗ್ರಾಹಕ ಹಣದುಬ್ಬರ ಈ ವರ್ಷ ಜೂನ್‌ನಲ್ಲಿ ಶೇ.5ಕ್ಕೆ ತಲುಪಿತ್ತು. ಆರ್‌ಬಿಐ ಮಧ್ಯಮಾವಧಿಗೆ ಮಾಡಿದ್ದ ಶೇ.4ರ ಅಂದಾಜನ್ನು ಮೀರಿ ನಿರಂತರ ಎಂಟನೇ ತಿಂಗಳಲ್ಲೂ ಹಣದುಬ್ಬರ ಏರಿದೆ.
ಈ ವರ್ಷ ಅಂತಾರಾಷ್ಟ್ರೀಯ ಕಚ್ಚಾ ತೈಲ ಬೆಲೆ ಶೇ.20ರಷ್ಟು ಏರಿದ್ದು ಕಳೆದ ಮೇ ತಿಂಗಳಲ್ಲಿ ಇದು ಬ್ಯಾರೆಲ್‌ಗೆ 80 ಡಾಲರ್ ಗಡಿ ದಾಟಿತ್ತು ಮತ್ತು ಆ ಮೂಲಕ ಅದು 2014ರ ಬಳಿಕದ ಗರಿಷ್ಠ ಮಟ್ಟವನ್ನು ತಲುಪಿತ್ತು. ಇದರಿಂದಾಗಿ ದೇಶದಲ್ಲಿನ ಪೆಟ್ರೋಲ್, ಡೀಸೆಲ್ ಬೆಲೆ ಒಂದೇ ಸಮನೆ ಏರಿತ್ತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
UP: ಪತಿ, ಆರು ಮಕ್ಕಳನ್ನು ಬಿಟ್ಟು ಭಿಕ್ಷುಕನ ಜತೆ ಓಡಿಹೋದ ಮಹಿಳೆ
Junior Doctor: ಮಾತನಾಡಲು ಕರೆಸಿ ಕಿರಿಯ ವೈದ್ಯೆ ಮೇಲೆ ಸಹೋದ್ಯೋಗಿಯಿಂದಲೇ ಅತ್ಯಾಚಾರ…
Bird Flu: ಹಕ್ಕಿ ಜ್ವರಕ್ಕೆ 3 ಹುಲಿ, 1 ಚಿರತೆ ಸಾ*ವು… ಪ್ರಾಣಿಗಳಿಗೆ ಕ್ವಾರಂಟೈನ್
540 ಅಡಿ ಆಳದ ಬೋರ್ವೆಲ್ಗೆ ಬಿದ್ದ ಯುವತಿ: ಯುವಕನ ಜತೆ ಮನಸ್ತಾಪದಿಂದ ಆತ್ಮಹತ್ಯೆಗೆ ಯತ್ನ?
Delhi Assembly Election: ದೆಹಲಿ ವಿಧಾನಸಭೆ ಚುನಾವಣೆಗೆ ಇಂದು ದಿನಾಂಕ ನಿಗದಿ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.