ಮತ್ತೆ ಬಡ್ಡಿದರ ಹೆಚ್ಚಳ ಸಾಧ್ಯತೆ
Team Udayavani, Dec 5, 2022, 6:36 AM IST
ಹೊಸದಿಲ್ಲಿ: ಸತತ 3 ಬಾರಿ ಸಾಲದ ಮೇಲಿನ ಬಡ್ಡಿ ದರವನ್ನು ತಲಾ ಶೇ.0.50ರಷ್ಟು ಹೆಚ್ಚಳ ಮಾಡಿರುವ ಭಾರತೀಯ ರಿಸರ್ವ್ ಬ್ಯಾಂಕ್(ಆರ್‌ಬಿಐ), ಬುಧವಾರ ನಡೆಯಲಿರುವ ಹಣಕಾಸು ನೀತಿ ಪರಾಮರ್ಶೆಯಲ್ಲಿ ಮತ್ತೆ ಬಡ್ಡಿ ದರ ಏರಿಕೆ ಮಾಡುವ ಸಾಧ್ಯತೆಯಿದೆ.
ಚಿಲ್ಲರೆ ಹಣದುಬ್ಬರವು ಸ್ವಲ್ಪಮಟ್ಟಿಗೆ ಇಳಿಕೆ ಕಂಡಿರುವ ಹಿನ್ನೆಲೆಯಲ್ಲಿ ಹಾಗೂ ಆರ್ಥಿಕ ಪ್ರಗತಿಗೆ ಉತ್ತೇಜನ ನೀಡಬೇಕಾದ ಕಾರಣ ಈ ಬಾರಿ ಬಡ್ಡಿ ದರವನ್ನು ಶೇ.0.25ರಿಂದ 0.35ರಷ್ಟು ಮಾತ್ರ ಹೆಚ್ಚಳ ಮಾಡಬಹುದು ಎಂದು ಆರ್ಥಿಕ ತಜ್ಞರು ಅಂದಾಜಿಸಿದ್ದಾರೆ.
ಸೋಮವಾರದಿಂದಲೇ ಆರ್‌ಬಿಐ ಹಣಕಾಸು ನೀತಿ ಪರಾಮರ್ಶೆ ಸಭೆ ಆರಂಭವಾಗಲಿದ್ದು, ಬುಧವಾರ ರೆಪೋ, ರಿವರ್ಸ್ ರೆಪೋ ದರದ ಕುರಿತ ಪ್ರಕಟಣೆ ಹೊರಬೀಳಲಿದೆ. ದೇಶೀಯ ಬೆಳವಣಿಗೆಗಳು ಮಾತ್ರವಲ್ಲದೇ, ಅಮೆರಿಕದ ಫೆಡರಲ್ ರಿಸರ್ವ್ ಕೈಗೊಳ್ಳುವ ನಿರ್ಧಾರವನ್ನೂ ಆರ್‌ಬಿಐ ಗಣನೆಗೆ ತೆಗೆದುಕೊಳ್ಳಲಿದೆ.
ಕಳೆದ ಮೇ ತಿಂಗಳಿಂದ ಈವರೆಗೆ ಆರ್‌ಬಿಐ ಸಾಲದ ಮೇಲಿನ ಬಡ್ಡಿ ದರವನ್ನು ಶೇ.0.190ರಷ್ಟು ಹೆಚ್ಚಳ ಮಾಡಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Politics; ಮತಕ್ಕಾಗಿ ಮುಸ್ಲಿಮರನ್ನು ಒಡೆವ ಕೆಲಸ ಕಾಂಗ್ರೆಸ್ ಮಾಡುತ್ತಿದೆ: ಬಿಜೆಪಿ
Maha Election; ಚು.ಆಯೋಗದಿಂದ ಉದ್ಧವ್ ಠಾಕ್ರೆ ಬ್ಯಾಗ್ ಪರಿಶೀಲನೆ, ವಿವಾದ
Manipura: ಇಬ್ಬರು ಶವ ಪತ್ತೆ, ಮಕ್ಕಳು ಸೇರಿ 6 ಮಂದೆ ಕಾಣೆ
ದಾವೂದ್, ನಟ ಸಲ್ಮಾನ್ ಸಂಪರ್ಕ ಇದ್ದಿದ್ದಕ್ಕೆ ಸಿದ್ಧಿಕಿ ಹತ್ಯೆ: ಶೂಟರ್
Ranchi: ವಕ್ಫ್ ಮಂಡಳಿಯು ಕರ್ನಾಟಕದಲ್ಲಿ ದೇಗುಲ, ರೈತರ ಭೂಮಿಯ ಕಸಿದಿದೆ: ಅಮಿತ್ ಶಾ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.