ನಾಳೆಯಿಂದ ದಿನಪೂರ್ತಿ ನೆಫ್ಟ್ ವಹಿವಾಟು ಸಾಧ್ಯ
Team Udayavani, Dec 15, 2019, 12:20 AM IST
ಮುಂಬಯಿ: ಸೋಮವಾರದಿಂದಲೇ ನೆಫ್ಟ್ (ನ್ಯಾಶನಲ್ ಎಲೆಕ್ಟ್ರಾನಿಕ್ ಫಂಡ್ ಟ್ರಾನ್ಸ್ ಫರ್) ವಹಿವಾಟು ದಿನದ 24 ಗಂಟೆಯೂ ಲಭ್ಯವಿರಲಿದೆ ಎಂಬ ಸಿಹಿಸುದ್ದಿಯನ್ನು ಆರ್‌ಬಿಐ ಗ್ರಾಹಕರಿಗೆ ನೀಡಿದೆ. ಇನ್ನು ಮುಂದೆ ಗ್ರಾಹಕರು ವಾರಾಂತ್ಯ ಮತ್ತು ರಜಾದಿನಗಳ ಸಹಿತ ಯಾವಾಗ ಬೇಕಿದ್ದರೂ ನೆಫ್ಟ್ ಮೂಲಕ ಹಣ ವರ್ಗಾಯಿಸಬಹುದು. ಬ್ಯಾಂಕ್‌ಗಳ ಸ್ಟ್ರೈಟ್ ಥ್ರೂ ಪ್ರೊಸೆಸಿಂಗ್ (ಎಸ್‌ಟಿಪಿ) ಮಾದರಿಯ ಮೂಲಕ ಬ್ಯಾಂಕಿಂಗ್ ಅವಧಿ ಮುಗಿದ ಅನಂತರವೂ ನೆಫ್ಟ್ ವಹಿವಾಟು ಸಾಧ್ಯವಾಗಲಿದೆ. ಈವರೆಗೆ ಕೆಲಸದ ದಿನಗಳಲ್ಲಿ ಬೆಳಗ್ಗೆ 8ರಿಂದ ರಾತ್ರಿ 7ರ ವರೆಗೆ ಮಾತ್ರ ಅವಕಾಶವಿತ್ತು. ಎರಡನೇ ಮತ್ತು ನಾಲ್ಕನೇ ಶನಿವಾರ ಈ ಸೇವೆ ಲಭ್ಯವಿರಲಿಲ್ಲ.
ಹೊಸ ಪದ್ಧತಿಯ ಪಾಲಿಸಲು ಅಗತ್ಯ ವಿರುವ ಎಲ್ಲ ಮೂಲ ಸೌಕರ್ಯಗಳನ್ನು ಅಳವಡಿಸಿಕೊಳ್ಳುವಂತೆ ಸದಸ್ಯ ಬ್ಯಾಂಕ್‌ಗಳಿಗೆ ಆರ್‌ಬಿಐ ಸೂಚನೆ ನೀಡಿದೆ. ಜತೆಗೆ ಬದಲಾದ ಸಮಯದ ಕುರಿತು ಗ್ರಾಹಕರಿಗೂ ಮಾಹಿತಿ ಒದಗಿಸುವಂತೆ ನಿರ್ದೇಶಿಸಿದೆ. ಡಿಸೆಂಬರ್ ತಿಂಗಳಿಂದ ನೆಫ್ಟ್ ಸೇವೆ 24ಗಿ7 ಲಭ್ಯವಿರಲಿದೆ ಎಂದು ಆಗಸ್ಟ್‌ನಲ್ಲೇ ಆರ್‌ಬಿಐ ಘೋಷಿಸಿತ್ತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Boxing Day Test: ನೀಗಲಿ ಭಾರತದ ಬ್ಯಾಟಿಂಗ್ ಬರ; ಇಂದಿನಿಂದ ವರ್ಷಾಂತ್ಯದ ಭಾರತಸ್ಟ್
Covid: ಎನ್-95 ಮಾಸ್ಕ್ ಅವ್ಯವಹಾರ: ಆತುರದ ಕ್ರಮ ಕೈಗೊಳ್ಳದಂತೆ ಸೂಚನೆ
Udupi: ಗೀತಾರ್ಥ ಚಿಂತನೆ 136: ರಕ್ತ ಸುರಿದರೆ ದುಃಖ ಏತಕ್ಕಾಗಿ? ರಕ್ತ ಸುರಿದದ್ದಕ್ಕಲ್ಲ
Koteshwar: ಬೀಜಾಡಿಯ ಯೋಧ ಅನೂಪ್ ಪೂಜಾರಿ ಮೃತ್ಯು
Name Road: ರಸ್ತೆಗೆ ಸಿದ್ದರಾಮಯ್ಯ ಹೆಸರಿಟ್ಟರೇ ತಪ್ಪೇನು?: ಪ್ರತಾಪ್ ಸಿಂಹ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.