ಏಕನಾಥ್ ಶಿಂಧೆ ಬಣ್ಣ ನಿಜವಾದ ಶಿವಸೇನೆ: ಸಚಿವ ರಾಮದಾಸ್ ಅಠವಳೆ
Team Udayavani, Sep 5, 2022, 7:30 PM IST
ಮುಂಬಯಿ: ಏಕನಾಥ್ ಶಿಂಧೆ ಬಣ್ಣವು ನಿಜವಾದ ಶಿವಸೇನೆ ಆಗಿದ್ದು , ಅವರಿಗೆ ದಾದರ್‌ನಲ್ಲಿ ದಸರಾ ಕೂಟ ಆಯೋಜನೆಗೆ ಅನುಮತಿ ದೊರೆಯಬೇಕು. ಉದ್ಧವ್ ಠಾಕ್ರೆ ಅವರು ಬಿಕೆಸಿ ಅಥವಾ ಬೇರೆಲ್ಲಿಯೂ ದಸರಾ ಕೂಟ ನಡೆಸಬಹುದು ಎಂದು ಕೇಂದ್ರ ಸಾಮಾಜಿಕ ನ್ಯಾಯ ಸಚಿವ ರಾಮದಾಸ್ ಅಠವಳೆ ಸಲಹೆ ನೀಡಿದರು.
ಇಂದು ಖಾಸಗಿ ಕೆಲಸದ ನಿಮಿತ್ತ ಕಲ್ಯಾಣ್ ಪಶ್ಚಿಮ ಪ್ರದೇಶಕ್ಕೆ ಭೇಟಿ ನೀಡಿದ ಕೇಂದ್ರ ರಾಜ್ಯ ಸಚಿವ ರಾಮದಾಸ್ ಅಠವಳೆ ಅವರು, ಈ ಸಂದರ್ಭದಲ್ಲಿ ದಸರಾ ಮೇಳದ ಕುರಿತು ಮಾತನಾಡುತ್ತಾ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು. ಈ ವೇಳೆ ಅವರು ಉದ್ಧವ್ ಠಾಕ್ರೆಗೂ ಸವಾಲು ಹಾಕಿದರು. ರಿಕ್ಷಾ ಚಾಲಕರಿಂದ ಶಿವಸೇನೆ ಹೆಚ್ಚಿದೆ. ಶಿಂಧೆ ಗುಂಪಿನವರನ್ನು ಅವಮಾನಿಸುವುದು ಸರಿಯಲ್ಲ ಎಂದು ಅಠವಳೆ ಅವರ ಪರ ನಿಂತರು. ಶಿವಸೇನೆಯ ಮೂರನೇ ಎರಡರಷ್ಟು ಶಾಸಕರು ಏಕನಾಥ್ ಶಿಂಧೆ ಅವರೊಂದಿಗೆ ಇದ್ದಾರೆ.
ಹೀಗಾಗಿ ದಾದರ್‌ನಲ್ಲಿ ದಸರಾ ಕೂಟದ ನಡೆಸಲು ಮನಪಾ ಶಿಂಧೆ ಬಣ್ಣಕ್ಕೆ ಅವಕಾಶ ನೀಡಬೇಕು. ಆದರೆ ಉದ್ಧವ್ ಠಾಕ್ರೆ ಅವರು ರಿಕ್ಷಾ ಚಾಲಕರನ್ನು ಅವಮಾನ ಮಾಡುವುದು ಸರಿಯಲ್ಲ ಎಂದು ರಾಮದಾಸ್ ಅಠವಳೆ ಹೇಳಿದರು.
ಮುಂಬಯಿ ಮುನ್ಸಿಪಲ್ ಕಾರ್ಪೊರೇಷನ್ ಚುನಾವಣೆಯಲ್ಲಿ ಎಂಎನ್‌ಎಸ್ ಅನ್ನು ತೆಗೆದುಕೊಳ್ಳುವ ಅಗತ್ಯವಿಲ್ಲ. ರಾಜ್ ಠಾಕ್ರೆ ಅವರನ್ನು ಕರೆದುಕೊಂಡು ಹೋದರೆ ಬಿಜೆಪಿ ಸೋಲಬಹುದು, ಅವರಿಗೆ ಗುಜರಾತಿನವರ, ಉತ್ತರ ಭಾರತೀಯರ, ದಕ್ಷಿಣ ಭಾರತೀಯರ ಮತಗಳು ಸಿಗುವುದಿಲ್ಲ. ಮನಪಾ ಚುನಾವಣೆಯಲ್ಲಿ ರಿಪಬ್ಲಿಕನ್ ಪಕ್ಷ ಮತ್ತು ಏಕನಾಥ್ ಶಿಂಧೆ ಅವರ ಶಿವಸೇನೆ ಬಿಜೆಪಿಯೊಂದಿಗೆ ಇವೆ ಎಂದು ರಾಮದಾಸ್ ಅಠವಳೆ ಹೇಳಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Poll code violations ; ಖರ್ಗೆ, ನಡ್ಡಾ ಪ್ರತಿಕ್ರಿಯೆ ಕೇಳಿದ ಚುನಾವಣ ಆಯೋಗ
Rahul Gandhi ಭರವಸೆಗಳನ್ನು ನೀಡುತ್ತಾರೆ ಮತ್ತು ವಿದೇಶಕ್ಕೆ ಹಾರುತ್ತಾರೆ: ಶಾ ವಾಗ್ದಾಳಿ
PM Modi ಅವರು ಜೋ ಬೈಡೆನ್ ಅವರಂತೆ ನೆನಪಿನ ಶಕ್ತಿ ಕಳೆದುಕೊಳ್ಳುತ್ತಿದ್ದಾರೆ: ರಾಹುಲ್ ಗಾಂಧಿ
Resign: ಶಿರೋಮಣಿ ಅಕಾಲಿದಳದ ಅಧ್ಯಕ್ಷ ಸ್ಥಾನಕ್ಕೆ ಸುಖಬೀರ್ ಸಿಂಗ್ ಬಾದಲ್ ರಾಜೀನಾಮೆ
Maharashtra; ನಮ್ಮ ಮೈತ್ರಿ ಕೂಟ ಗೆದ್ದು ಮಹಾರಾಷ್ಟ್ರ ಉಳಿಸಲಿದೆ: ಡಿ.ಕೆ. ಶಿವಕುಮಾರ್
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.