![mohan bhagwat](https://www.udayavani.com/wp-content/uploads/2025/02/mohan-bhagwat-415x249.jpg)
![mohan bhagwat](https://www.udayavani.com/wp-content/uploads/2025/02/mohan-bhagwat-415x249.jpg)
Team Udayavani, Dec 19, 2022, 1:37 PM IST
ಹೈದರಾಬಾದ್: ಭಾರತದ ಪ್ರಸ್ತುತ ಪರಿಸ್ಥಿತಿಯನ್ನು ಸುಧಾರಿಸುವ ನಿಟ್ಟಿನಲ್ಲಿ ವಿದ್ಯಾರ್ಥಿಗಳು ಜವಾಬ್ದಾರಿಯನ್ನು ಹೊರಬೇಕು ಎಂದು ಇನ್ಫೋಸಿಸ್ ಸ್ಥಾಪಕ ನಾರಾಯಣ ಮೂರ್ತಿ ಸಲಹೆ ನೀಡಿದ್ದು, ದೇಶದ ಹೊಸ ವಾಸ್ತವವನ್ನು ಸೃಷ್ಟಿಸುವುದು ನಿಮ್ಮ ಹೊಣೆಗಾರಿಕೆಯಾಗಿದೆ ಎಂದು ತಿಳಿಸಿದ್ದಾರೆ.
ಇದನ್ನೂ ಓದಿ:ಪಂದ್ಯ ಸೋತರೂ ವಿಶ್ವದ ಹೃದಯ ಗೆದ್ದ ಕಿಲಿಯನ್ ಎಂಬಪ್ಪೆ ಎಂಬ ಮೋಡಿಗಾರ
ಭಾರತದ ವಾಸ್ತವದ ಸಂಗತಿ ಏನೆಂದರೆ ಭ್ರಷ್ಟಾಚಾರ, ಕೊಳಕು ರಸ್ತೆಗಳು ಮತ್ತು ಮಾಲಿನ್ಯ ಸೇರಿದಂತೆ ಇನ್ನಿತರ ವಿಚಾರಗಳು ಎಂಬುದಾಗಿದೆ. ಸಿಂಗಾಪುರ್ ಎಂದರೆ ಸ್ವಚ್ಛ ರಸ್ತೆಗಳು ಮತ್ತು ಮಾಲಿನ್ಯ ರಹಿತವಾಗಿರುವ ಪರಿಸರ ಎಂಬುದಾಗಿದೆ ಎಂದು ನಾರಾಯಣ ಮೂರ್ತಿ ಹೇಳಿದರು.
ಭಾರತದ ನೂತನ ವಾಸ್ತವವನ್ನು ಸೃಷ್ಟಿಸುವ ಹೊಣೆಗಾರಿಕೆ ವಿದ್ಯಾರ್ಥಿಗಳ ಮೇಲಿದೆ ಎಂದರು. ಅವರು ವಿಜಯನಗರಂ ಜಿಲ್ಲೆಯ ರಾಜಮ್ ನಲ್ಲಿರುವ ಜಿಎಂಆರ್ ಇನ್ ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ(ಜಿಎಂಆರ್ ಐಟಿ)ಯ ರಜತ ಮಹೋತ್ಸವ ವರ್ಷಾಚರಣೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ್ದರು.
ನಾಯಕತ್ವ ರೂಪಿಸುವ ಗುಣಗಳ ಕುರಿತು ವಿವರಿಸಿದ ನಾರಾಯಣ ಮೂರ್ತಿ ಅವರು, ನಿಜವಾದ ನಾಯಕನಾಗಲು ಬಯಸುವವನು ಜವಾಬ್ದಾರಿ ಪಡೆಯಲು ಮತ್ತೊಬ್ಬರಿಗಾಗಿ ಕಾಯುವುದಿಲ್ಲ ಎಂದು ಕಿವಿಮಾತು ಹೇಳಿದರು.
ದೇಶದ ಈ ನ್ಯೂನತೆಗಳನ್ನು ಹೋಗಲಾಡಿಸುವ ನಿಟ್ಟಿನಲ್ಲಿ ವಿದ್ಯಾರ್ಥಿಗಳು ಈ ಅವಕಾಶವನ್ನು ಬಳಸಿಕೊಂಡು, ಬದಲಾವಣೆ ಪರ್ವದತ್ತ ಹೆಜ್ಜೆ ಹಾಕಬೇಕಾಗಿದೆ. ನೀವೇ ನಾಯಕ ಎಂದು ಕಲ್ಪಿಸಿಕೊಳ್ಳಿ, ಜವಾಬ್ದಾರಿ ಹೊರಲು ಇನ್ನೊಬ್ಬರಿಗಾಗಿ ಕಾಯಬೇಡಿ. ನೀವು ಏನು ಮಾಡುತ್ತೀರಿ ಎಂಬುದೇ ವಾಸ್ತವವಾಗಿದೆ ಎಂದು ನಾರಾಯಣ ಮೂರ್ತಿ (76ವರ್ಷ) ಸಲಹೆ ನೀಡಿರುವುದಾಗಿ ವರದಿ ತಿಳಿಸಿದೆ.
ಸಮಾಜದಲ್ಲಿ ಬದಲಾವಣೆ ತರಬೇಕು ಎಂಬ ಮನೋಭಾವ ಯುವಪೀಳಿಗೆಯಲ್ಲಿ ಮೂಡಬೇಕಾಗಿದೆ. ನಮ್ಮ ವೈಯಕ್ತಿಕ ಹಿತಾಸಕ್ತಿಗಿಂತ ದೇಶ ಮತ್ತು ಸಮಾಜ ಮೊದಲು ಎಂಬ ಭಾವನೆ ಬೆಳೆಸಿಕೊಳ್ಳಬೇಕು ಎಂದು ನಾರಾಯಣಮೂರ್ತಿ ಸಲಹೆ ನೀಡಿದ್ದಾರೆ.
RSS; ಹಿಂದೂ ಸಮಾಜ ದೇಶದ ಜವಾಬ್ದಾರಿಯುತ ಸಮುದಾಯ: ಮೋಹನ್ ಭಾಗವತ್
IPL 2025: ಐಪಿಎಲ್ ವೇಳಾಪಟ್ಟಿ ಪ್ರಕಟ; KKR vs RCB ಮೊದಲ ಮುಖಾಮುಖಿ- ಇಲ್ಲಿದೆ ಪಟ್ಟಿ
Controversy; ಮಹಾಕುಂಭ ‘ಅರ್ಥಹೀನ’ ಎಂದ ಲಾಲು ಪ್ರಸಾದ್ ಯಾದವ್
Mahakumbh; ಸಿದ್ದರಾಮಯ್ಯನವರೇ 5 ವರ್ಷ ಸಿಎಂ ಆಗಿರಲಿ: ಅಭಿಮಾನಿಯ ಪ್ರಾರ್ಥನೆ
Pariksha Pe Charcha: ಸ್ಮಾರ್ಟ್ ಫೋನ್‌ಗಿಂತಲೂ ನೀವು ಸ್ಮಾರ್ಟ್ ಆಗಬೇಕು:ಸದ್ಗುರು
You seem to have an Ad Blocker on.
To continue reading, please turn it off or whitelist Udayavani.