ನನ್ನ ಜೊತೆ 50 ಶಾಸಕರಿದ್ದಾರೆ: ಮಹಾ ಸರ್ಕಾರಕ್ಕೆ ಗುಟುರು ಹಾಕಿದ ರೆಬೆಲ್ ಏಕನಾಥ್ ಶಿಂಧೆ
Team Udayavani, Jun 24, 2022, 10:12 AM IST
ಗುವಾಹಟಿ: ಮಹಾರಾಷ್ಟ್ರದ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ವಿರುದ್ಧದ ದಂಗೆಯಲ್ಲಿ 50 ಕ್ಕೂ ಹೆಚ್ಚು ಶಾಸಕರು ನನ್ನನ್ನು ಬೆಂಬಲಿಸುತ್ತಿದ್ದಾರೆ ಎಂದು ಬಂಡಾಯ ಶಿವಸೇನೆ ನಾಯಕ ಏಕನಾಥ್ ಶಿಂಧೆ ಹೇಳಿದ್ದಾರೆ ತಿಳಿಸಿದ್ದಾರೆ. ಬಿಜೆಪಿ ಆಡಳಿತವಿರುವ ಅಸ್ಸಾಂನಲ್ಲಿ ಬೀಡುಬಿಟ್ಟಿರುವ ಶಿಂಧೆ ಅವರು 50 ಶಾಸಕರಲ್ಲಿ ಸುಮಾರು 40 ಮಂದಿ ಶಿವಸೇನೆಯವರು ಎಂದು ಹೇಳಿದ್ದಾರೆಂದು ಎನ್ ಡಿಟಿವಿ ವರದಿ ತಿಳಿಸಿದೆ.
“ನಮ್ಮಲ್ಲಿ ನಂಬಿಕೆ ಇರುವವರು ನಮ್ಮೊಂದಿಗೆ ಸೇರಿಕೊಳ್ಳುತ್ತಾರೆ. ನಾವು ಬಾಳಾಸಾಹೇಬ್ ಠಾಕ್ರೆ ಅವರ ಸಿದ್ಧಾಂತವನ್ನು ಮುಂದುವರಿಸಲು ಬಯಸುತ್ತೇವೆ, ಅದನ್ನು ಇಷ್ಟಪಡುವವರು ಬರುತ್ತಾರೆ. ಬಂಡಾಯ ಶಾಸಕರು ಬಾಳಾಸಾಹೇಬ್ ಠಾಕ್ರೆ ಅವರ ಶಿವಸೇನೆಯನ್ನು ತೊರೆದಿಲ್ಲ” ಎಂದು ಏಕನಾಥ್ ಶಿಂಧೆ ಹೇಳಿದರು.
ಬಂಡಾಯ ಶಾಸಕರ ವಿರುದ್ಧ ಅನರ್ಹತೆ ನೋಟಿಸ್ ನೀಡಿದ ಠಾಕ್ರೆ ತಂಡದ ಕ್ರಮವು “ಕಾನೂನುಬಾಹಿರ” ಎಂದು ಶಿಂಧೆ ಹೇಳಿದ್ದಾರೆ. “ನಿನ್ನೆ ಮಾಡಿದ್ದು ಸರಿಯಲ್ಲ, ಅವರಿಗೆ ಆ ಹಕ್ಕಿಲ್ಲ. ನಮಗೆ ಬಹುಮತವಿದೆ. ಪ್ರಜಾಪ್ರಭುತ್ವದಲ್ಲಿ ಸಂಖ್ಯೆಗಳೇ ಮುಖ್ಯ. ಅವರ ನೋಟಿಸ್ ಕಾನೂನುಬಾಹಿರ, ಅಮಾನತು ಮಾಡಲು ಅವರಿಗೆ ಸಾಧ್ಯವಿಲ್ಲ. ಇದರಿಂದ ನಾವು ಹೆದರುವುದಿಲ್ಲ,’’ ಎಂದು ಬಂಡಾಯ ಗುಂಪಿನ ನಾಯಕ ಏಕನಾಥ್ ಶಿಂಧೆ ಗುಡುಗಿದ್ದಾರೆ.
ಶಿವಸೇನೆ ಮುಖ್ಯಸ್ಥರೂ ಆಗಿರುವ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಮತ್ತು ಬಂಡಾಯ ಶಾಸಕರ ನಡುವೆ ಯಾವುದೇ ಚರ್ಚೆ ನಡೆದಿಲ್ಲ ಎಂದು ಶಿಂಧೆ ಹೇಳಿದ್ದಾರೆ.
ಇದನ್ನೂ ಓದಿ:ಕಾಮನ್ ಮ್ಯಾನ್ ಸಿಎಂಗೆ ಮುಜುಗರ ತಂದಿಟ್ಟ ಕಳಪೆ ರಸ್ತೆ; ಸ್ಪಷ್ಟನೆ ಕೇಳಿದ ಪ್ರಧಾನಿ ಕಚೇರಿ
ಮೂವತ್ತೇಳು ಶಾಸಕರು ರಾಜ್ಯಪಾಲರು ಮತ್ತು ಉಪಸಭಾಪತಿಗೆ ಪತ್ರ ಬರೆದಿದ್ದು, ಏಕನಾಥ್ ಶಿಂಧೆ ಅವರನ್ನು ತಮ್ಮ ನಾಯಕ ಎಂದು ಹೆಸರಿಸಿದ್ದಾರೆ. ಶಿಂಧೆ ಸೇರಿದಂತೆ 12 ಬಂಡಾಯ ಶಾಸಕರನ್ನು ಅನರ್ಹಗೊಳಿಸುವಂತೆ ಉದ್ಧವ್ ಠಾಕ್ರೆ ಕೋರಿದ ಬೆನ್ನಲ್ಲೇ ಈ ಕ್ರಮ ಕೈಗೊಳ್ಳಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.