ವಿದ್ಯುತ್‌ ಮೀಟರ್‌ಗೂ ರೀಚಾರ್ಜ್‌ ಸೌಲಭ್ಯ!

Team Udayavani, Dec 25, 2018, 6:00 AM IST

recharge-facility.jpg

ನವದೆಹಲಿ: ಪ್ರತಿ ತಿಂಗಳು ವಿದ್ಯುತ್‌ ಬಿಲ್ಲನ್ನು ನಿಗದಿತ ದಿನಾಂಕದೊಳಗೇ ಪಾವತಿ ಮಾಡಬೇಕು ಎಂಬ ಸಮಸ್ಯೆಗೆ ಇನ್ನು ಮುಕ್ತಿ ಸಿಗಲಿದೆ. 2019ರ ಏಪ್ರಿಲ್‌ 1ರಿಂದ ದೇಶಾದ್ಯಂತ ಸ್ಮಾರ್ಟ್‌ ಪ್ರೀಪೇಯ್ಡ ಮೀಟರುಗಳು ಚಾಲ್ತಿಗೆ ಬರಲಿದ್ದು, ಮೊಬೈಲ್‌ ಪ್ರೀಪೇಯ್ಡ ಸಿಮ್‌ಗೆ ರೀಚಾರ್ಜ್‌ ಮಾಡಿದಂತೆಯೇ ಮೊದಲೇ ಹಣ ತುಂಬುವ ಸೌಲಭ್ಯ ಜಾರಿಗೆ ಬರಲಿದೆ. 

ಇದರಿಂದಾಗಿ ವಿದ್ಯುತ್‌ ಕಳ್ಳತನ ಕಡಿಮೆಯಾಗಲಿದ್ದು, ಬಡವರಿಗೆ ಒಂದೇ ಬಾರಿಗೆ ಬಿಲ್‌ ಪಾವತಿ ಹೊರೆಯೂ ಕಡಿಮೆಯಾಗಲಿದೆ ಎಂದು ವಿದ್ಯುತ್‌ ಖಾತೆ ಸಹಾಯಕ ಸಚಿವ ಆರ್‌.ಕೆ.ಸಿಂಗ್‌ ಹೇಳಿದ್ದಾರೆ.

ಈ ಸ್ಮಾರ್ಟ್‌ ಮೀಟರುಗಳು ದಿನದ ನಿಗದಿತ ಸಮಯದಲ್ಲಿ ಮೀಟರ್‌ ರೀಡ್‌ ಮಾಡಿ ಅದರ ವಿವರವನ್ನು ವಿದ್ಯುತ್‌ ಪೂರೈಕೆದಾರ ಸಂಸ್ಥೆಗೆ ಕಳುಹಿಸುತ್ತವೆ. ಅಷ್ಟೇ ಅಲ್ಲ, ಎಷ್ಟು ಯೂನಿಟ್‌ ವಿದ್ಯುತ್‌ ಬಳಸಲಾಗಿದೆ ಎಂಬ ಮಾಹಿತಿ ರವಾನೆಯಾಗುತ್ತದೆ. ಇದರಿಂದ ನಾವು ಎಷ್ಟು ವಿದ್ಯುತ್‌ ಬಳಸಿದ್ದೇವೆ ಎಂಬ ಮಾಹಿತಿ ಗ್ರಾಹಕರಿಗೆ ಸಿಗಲಿದೆ. ಹೀಗಾಗಿ ಜನರು ಎಚ್ಚರಿಕೆಯಿಂದ ವಿದ್ಯುತ್‌ ವೆಚ್ಚ ಮಾಡಲೂ ನೆರವಾಗಲಿದೆ. ಆದರೆ ಸದ್ಯ ಸ್ಮಾರ್ಟ್‌ ಮೀಟರುಗಳ ಲಭ್ಯತೆ ಕಡಿಮೆ ಇದ್ದು, ಇವುಗಳ ಉತ್ಪಾದನೆ ಹೆಚ್ಚಿಸುವ ಅಗತ್ಯವಿದೆ ಎಂದು ಸಚಿವ ಸಿಂಗ್‌ ಹೇಳಿದ್ದಾರೆ.

ಮೀಟರ್‌ ರೀಡರ್‌ಗೆ ಕೆಲಸವಿರಲ್ಲ!: ದೇಶದಲ್ಲಿ ಕೋಟ್ಯಂತರ ವಿದ್ಯುತ್‌ ಸಂಪರ್ಕಗಳಿವೆ. ಇವುಗಳನ್ನು ರೀಡ್‌ ಮಾಡುವುದೇ ಒಂದು ದೊಡ್ಡ ಸಮಸ್ಯೆಯಾಗಿದೆ. ಇದಕ್ಕೆ ಸಾಕಷ್ಟು ವೆಚ್ಚವೂ ಆಗುತ್ತಿದೆ. ಸ್ಮಾರ್ಟ್‌ ಮೀಟರುಗಳಿಂದ ಈ ಸಮಸ್ಯೆ ನಿವಾರಣೆಯಾಗುತ್ತದೆ. ಇಡೀ ಬಿಲ್ಲಿಂಗ್‌ ಅನ್ನು ಇದು ಸ್ವಯಂಚಾಲಿತ ವ್ಯವಸ್ಥೆಯನ್ನಾಗಿ ಪರಿವರ್ತಿಸುತ್ತಿದೆ. ಹೀಗಾಗಿ, ಮೀಟರ್‌ ರೀಡರ್‌ಗೆ ಕೆಲಸವಿರುವುದಿಲ್ಲ. ಇನ್ನು, ಇದರಿಂದ ವಿದ್ಯುತ್‌ ವಿತರಣೆ ಕಂಪನಿಗಳಿಗೂ ಅನುಕೂಲವಾಗಲಿದ್ದು, ಮೊದಲೇ ಪಾವತಿ ಲಭ್ಯವಾಗುತ್ತದೆ. ಇದರಿಂದ ಕಂಪನಿಗಳು ಹೆಚ್ಚು ಬಂಡವಾಳವನ್ನು ಪಡೆಯುತ್ತವೆ ಎಂದು ಸಿಂಗ್‌ ಹೇಳಿದ್ದಾರೆ.

ಟಾಪ್ ನ್ಯೂಸ್

JDS

MUDA Case: ಸಿಎಂ ಸಿದ್ದರಾಮಯ್ಯ ರಾಜೀನಾಮೆಗೆ ಜೆಡಿಎಸ್‌ ಪಟ್ಟು, ಪ್ರತಿಭಟನೆ

Udupi: ಗೀತಾರ್ಥ ಚಿಂತನೆ-46: ಖರ್ಚಿಲ್ಲದ ಪ್ರೀತಿ, ಸ್ನೇಹದಿಂದಲೇ ಭಗವಂತನೊಲುಮೆ

Udupi: ಗೀತಾರ್ಥ ಚಿಂತನೆ-46: ಖರ್ಚಿಲ್ಲದ ಪ್ರೀತಿ, ಸ್ನೇಹದಿಂದಲೇ ಭಗವಂತನೊಲುಮೆ

DK-Shivakumar

MUDA Case: ಸಿಎಂ ತಪ್ಪು ಮಾಡಿಲ್ಲ, ಅಧಿಕಾರಿಗಳು ಮಾಡಿರಬಹುದು: ಡಿ.ಕೆ.ಶಿವಕುಮಾರ್‌

Parameshwar

MUDA Case: ಅಭಿಯೋಜನೆಗೆ ಅನುಮತಿ ಎಲ್ಲರಿಗೂ ಅನ್ವಯ ಆಗಲಿ: ಗೃಹ ಸಚಿವ ಡಾ.ಜಿ. ಪರಮೇಶ್ವರ್‌

Mangalore University: ಮಾನವತಾವಾದದ ಮೌಲ್ಯ ಬೆಳೆಸಿಕೊಳ್ಳಿ:ನ್ಯಾಯಮೂರ್ತಿ ಸಂತೋಷ್‌ ಹೆಗ್ಡೆ

Mangalore University: ಮಾನವತಾವಾದದ ಮೌಲ್ಯ ಬೆಳೆಸಿಕೊಳ್ಳಿ:ನ್ಯಾಯಮೂರ್ತಿ ಸಂತೋಷ್‌ ಹೆಗ್ಡೆ

ಬ್ಯಾಂಕ್‌ಗಳಲ್ಲಿ ಕನ್ನಡ ಕಡ್ಡಾಯ ಮಾಡಿ: ಜಿಪಂ ಸಿಇಒ ಪ್ರತೀಕ್‌ ಬಾಯಲ್‌

Manipal: ಬ್ಯಾಂಕ್‌ಗಳಲ್ಲಿ ಕನ್ನಡ ಕಡ್ಡಾಯ ಮಾಡಿ: ಜಿಪಂ ಸಿಇಒ ಪ್ರತೀಕ್‌ ಬಾಯಲ್‌

Arrest

Ajjampura: ಪತ್ನಿಯ ಶೀಲ ಶಂಕಿಸಿ 5 ವರ್ಷದ ಮಗಳನ್ನೇ ಕೊಂದ ತಂದೆ ಬಂಧನ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಕೃಷಿ ಕಾಯ್ದೆ ಹೇಳಿಕೆ ವಾಪಸ್‌ ಪಡೆದ ಕಂಗನಾ: ಮೋದಿ ಸ್ಪಷ್ಟನೆ ಕೇಳಿದ ರಾಹುಲ್‌

ಕೃಷಿ ಕಾಯ್ದೆ ಹೇಳಿಕೆ ವಾಪಸ್‌ ಪಡೆದ ಕಂಗನಾ: ಮೋದಿ ಸ್ಪಷ್ಟನೆ ಕೇಳಿದ ರಾಹುಲ್‌

ಉ.ಪ್ರ. ಬಳಿಕ ಹಿಮಾಚಲದಲ್ಲೂ ಹೋಟೆಲ್‌ಗಳಲ್ಲಿ ಮಾಲೀಕರ ಹೆಸರು ಪ್ರದರ್ಶನ ಕಡ್ಡಾಯ

ಉ.ಪ್ರ. ಬಳಿಕ ಹಿಮಾಚಲದಲ್ಲೂ ಹೋಟೆಲ್‌ಗಳಲ್ಲಿ ಮಾಲೀಕರ ಹೆಸರು ಪ್ರದರ್ಶನ ಕಡ್ಡಾಯ

13

Panaji: ಇಲೆಕ್ಟ್ರಿಕ್ ಮೀಟರ್ ಕಳ್ಳತನ ಪ್ರಕರಣ; ಆರೋಪಿ ಬಂಧನ

1-deee

Siddaramaiah ವಿರುದ್ಧ ಹರಿಯಾಣದಲ್ಲಿ ಪ್ರಧಾನಿ ಮೋದಿ ತೀವ್ರ ವಾಗ್ದಾಳಿ

“ದೇಶದ ಯಾವುದೇ ಭಾಗವನ್ನು ಪಾಕ್‌ ಎಂದು ಕರೆಯಬೇಡಿ: ಸುಪ್ರೀಂಕೋರ್ಟ್‌ ಆದೇಶದಲ್ಲೇನಿದೆ?

“ದೇಶದ ಯಾವುದೇ ಭಾಗವನ್ನು ಪಾಕ್‌ ಎಂದು ಕರೆಯಬೇಡಿ: ಸುಪ್ರೀಂಕೋರ್ಟ್‌ ಆದೇಶದಲ್ಲೇನಿದೆ?

MUST WATCH

udayavani youtube

ಉಡುಪಿಯ ಈ ಜಾಗದಲ್ಲಿ ರಸಂ ಪುರಿ ತುಂಬಾನೇ ಫೇಮಸ್

udayavani youtube

ತಿರುಪತಿ ಲಡ್ಡು ವಿವಾದ ಪೇಜಾವರ ಶ್ರೀಗಳು ಹೇಳಿದ್ದೇನು ?

udayavani youtube

Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ

udayavani youtube

ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ

udayavani youtube

ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ

ಹೊಸ ಸೇರ್ಪಡೆ

JDS

MUDA Case: ಸಿಎಂ ಸಿದ್ದರಾಮಯ್ಯ ರಾಜೀನಾಮೆಗೆ ಜೆಡಿಎಸ್‌ ಪಟ್ಟು, ಪ್ರತಿಭಟನೆ

Udupi: ಗೀತಾರ್ಥ ಚಿಂತನೆ-46: ಖರ್ಚಿಲ್ಲದ ಪ್ರೀತಿ, ಸ್ನೇಹದಿಂದಲೇ ಭಗವಂತನೊಲುಮೆ

Udupi: ಗೀತಾರ್ಥ ಚಿಂತನೆ-46: ಖರ್ಚಿಲ್ಲದ ಪ್ರೀತಿ, ಸ್ನೇಹದಿಂದಲೇ ಭಗವಂತನೊಲುಮೆ

DK-Shivakumar

MUDA Case: ಸಿಎಂ ತಪ್ಪು ಮಾಡಿಲ್ಲ, ಅಧಿಕಾರಿಗಳು ಮಾಡಿರಬಹುದು: ಡಿ.ಕೆ.ಶಿವಕುಮಾರ್‌

Parameshwar

MUDA Case: ಅಭಿಯೋಜನೆಗೆ ಅನುಮತಿ ಎಲ್ಲರಿಗೂ ಅನ್ವಯ ಆಗಲಿ: ಗೃಹ ಸಚಿವ ಡಾ.ಜಿ. ಪರಮೇಶ್ವರ್‌

Mangalore University: ಮಾನವತಾವಾದದ ಮೌಲ್ಯ ಬೆಳೆಸಿಕೊಳ್ಳಿ:ನ್ಯಾಯಮೂರ್ತಿ ಸಂತೋಷ್‌ ಹೆಗ್ಡೆ

Mangalore University: ಮಾನವತಾವಾದದ ಮೌಲ್ಯ ಬೆಳೆಸಿಕೊಳ್ಳಿ:ನ್ಯಾಯಮೂರ್ತಿ ಸಂತೋಷ್‌ ಹೆಗ್ಡೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.