ದಾಖಲೆ ಕದ್ದವರು ಹಿಂದಿರುಗಿಸಿರಬಹುದು!
Team Udayavani, Mar 10, 2019, 12:30 AM IST
ಹೊಸದಿಲ್ಲಿ: “ರಕ್ಷಣಾ ಇಲಾಖೆಯ ಕಚೇರಿಯಿಂದ ಕಳವಾಗಿದ್ದ ರಫೇಲ್ ಒಪ್ಪಂದಕ್ಕೆ ಸಂಬಂಧಿಸಿದ ಮಹತ್ವದ ಕಡತಗಳನ್ನು ಕದ್ದಿದ್ದ ಕಳ್ಳರು, ಬಹುಶಃ ಅವುಗಳನ್ನು ಒಂದು ದಿನದಲ್ಲೇ ಇಲಾಖೆಗೆ ಹಿಂದಿರುಗಿಸಿರಬೇಕು’ ಎಂದು ಕೇಂದ್ರದ ಮಾಜಿ ವಿತ್ತ ಸಚಿವ ಪಿ. ಚಿದಂಬರಂ ಲೇವಡಿ ಮಾಡಿದ್ದಾರೆ.
ಶನಿವಾರ, ಸುದ್ದಿಗಾರರೊಂದಿಗೆ ಮಾತನಾಡಿದ ಅವರು, “”ದಾಖಲೆ ಕದ್ದವರ ವಿರುದ್ಧ ಅಧಿಕೃತ ರಹಸ್ಯ ಕಾಯ್ದೆ ವಿರುದ್ಧ ಕ್ರಮ ಕೈಗೊಳ್ಳುವುದಾಗಿ ಗುಡುಗಿದ್ದ ಅಟಾರ್ನಿ ಜನರಲ್, ಶುಕ್ರವಾರದಂದು, ಮಗುಮ್ಮಾಗಿದ್ದರು. ಬಹುಶಃ ಅವರು ಆಲಿವ್ ಮರದ ಕೊಂಬೆ ಗಳ ಕಾಯ್ದೆ ಯನ್ನು ಪ್ರಯೋಗಿಸುವ ಬಗ್ಗೆ ಯೋಚಿಸಿರಬಹುದು” ಎಂದು ಚುಚ್ಚಿದ್ದಾರೆ. ಬುಧವಾರ, ಸುಪ್ರೀಂ ಕೋರ್ಟ್ನಲ್ಲಿ ಅಟಾರ್ನಿ ಜನರಲ್ ಕೆ.ಕೆ. ವೇಣುಗೋಪಾಲ್ ಅವರು ಕಡತ ಕಳ ವಾಗಿವೆ ಎಂದಿ ದ್ದರು. ಆದರೆ, ಶುಕ್ರವಾರದಂದು, ಕಡತಗಳು ಕಳವಾಗಿಲ್ಲ. ರಫೇಲ್ ಕುರಿತ ಮೇಲ್ಮನವಿಯ ಅರ್ಜಿದಾರರು ನ್ಯಾಯಾಲಯಕ್ಕೆ ಸಲ್ಲಿಸಿರುವುದು ಆ ದಾಖಲೆಗಳ ನಕಲು ಪ್ರತಿಗಳು ಮಾತ್ರ ಎಂದಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Uttar Pradesh: ಆಸ್ಪತ್ರೆಯಲ್ಲಿ ಬೆಂಕಿ 10 ನವಜಾತ ಶಿಶುಗಳ ಸಾವು; 40 ಮಕ್ಕಳ ರಕ್ಷಣೆ
Delhi: ಹೆಚ್ಚಿದ ಮಾಲಿನ್ಯ: ಮಾಸ್ಕ್ ಧರಿಸಿ ಬಂದ ವಿದ್ಯಾರ್ಥಿಗಳು
Gujarat: 700 ಕೆ.ಜಿ. ಡ್ರಗ್ಸ್ ವಶ: 8 ಮಂದಿ ಬಂಧನ; ಕಳೆದ 1 ತಿಂಗಳಲ್ಲಿ ಭರ್ಜರಿ 3ನೇ ಬೇಟೆ
Bombay high court: ವಯಸ್ಕಳಲ್ಲದ ಪತ್ನಿ ಜತೆ ಒಪ್ಪಿತ ಲೈಂಗಿಕ ಸಂಬಂಧ ರೇ*ಪ್
Jharkhand; ವಿಮಾನದಲ್ಲಿ ತಾಂತ್ರಿಕ ದೋಷ: 2 ಗಂಟೆ ಕಾದ ಪ್ರಧಾನಿ ಮೋದಿ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.