ಮಳೆ ಕೊರತೆಯಲ್ಲಿ ದಾಖಲೆ
65 ವರ್ಷಗಳಲ್ಲೇ 2ನೇ ಬಾರಿಗೆ ಇಷ್ಟೊಂದು ಪ್ರಮಾಣದ ಕೊರತೆ
Team Udayavani, Jun 3, 2019, 5:50 AM IST
ನವದೆಹಲಿ: ಪ್ರಸಕ್ತ ವರ್ಷ ಮುಂಗಾರು ವಿಳಂಬವಾಗಿದ್ದು, ಇಡೀ ದೇಶವೇ ಮುಂಗಾರಿನ ಸಿಂಚನಕ್ಕಾಗಿ ಕಾದು ಕುಳಿತಿದೆ. ಇದೇ ವೇಳೆ, ಮುಂಗಾರು ಪೂರ್ವ ಮಳೆ ಕೊರತೆ ಕುರಿತ ಆಘಾತಕಾರಿ ವರದಿಯೊಂದು ಹೊರಬಿದ್ದಿದೆ. ಅದೇನೆಂದರೆ, ಕಳೆದ 65 ವರ್ಷಗಳಲ್ಲಿ 2ನೇ ಬಾರಿಗೆ ಭಾರತವು ಈ ವರ್ಷ ಮುಂಗಾರು ಪೂರ್ವ ಮಳೆಯ ಕೊರತೆ ಎದುರಿಸಿದೆ.
ಹೌದು, ಈ ವರ್ಷ ಬಿದ್ದ ಮುಂಗಾರು ಪೂರ್ವ ಮಳೆಯ ಪ್ರಮಾಣ ಕೇವಲ 99 ಮಿ.ಮೀ. ಮಾತ್ರ. ಅಂದರೆ, 65 ವರ್ಷಗಳ ಅವಧಿಯಲ್ಲಿ 2ನೇ ಬಾರಿಗೆ ದೇಶದಲ್ಲಿ ಮುಂಗಾರಿಗೆ ಮೊದಲು ಬೀಳುವ ಮಳೆಯಲ್ಲಿ ಗಣನೀಯ ಕುಸಿತ ಕಂಡುಬಂದಿದೆ. 1954ರಲ್ಲಿ 93.9 ಮಿ.ಮೀ. ಮಳೆಯಾಗುವ ಮೂಲಕ ಅತಿ ಹೆಚ್ಚಿನ ಮಳೆ ಕೊರತೆ ಉಂಟಾಗಿತ್ತು. ಇದಾದ ಬಳಿಕ ಇದೇ ಮೊದಲ ಬಾರಿಗೆ ಮಳೆ ಪ್ರಮಾಣ ಇಷ್ಟೊಂದು ಕುಸಿತಗೊಂಡಿದೆ ಎಂದು ಭಾರತೀಯ ಹವಾಮಾನ ಇಲಾಖೆಯ ಅಂಕಿ ಅಂಶಗಳು ತಿಳಿಸಿವೆ.
ಹೆಚ್ಚು ಕೊರತೆ ಎಲ್ಲಿ?: ಕೃಷಿಗೆ, ಅಂತರ್ಜಲ ಮಟ್ಟ ಹೆಚ್ಚಳಕ್ಕೆ ಹಾಗೂ ಮಣ್ಣಿನ ಆದ್ರರ್ತೆ ಕಾಪಾಡಲು ಮುಂಗಾರು ಪೂರ್ವ ಮಳೆ ಅತ್ಯಗತ್ಯ. ಆದರೆ, ಈ ವರ್ಷ ಮಹಾರಾಷ್ಟ್ರದ ಮಧ್ಯ ಭಾಗ, ಮರಾಠವಾಡ ಮತ್ತು ವಿದರ್ಭ ಪ್ರಾಂತ್ಯ, ಕೊಂಕಣ-ಗೋವಾ, ಗುಜರಾತ್‌ನ ಸೌರಾಷ್ಟ್ರ ಮತ್ತು ಕಛ್, ಕರಾವಳಿ ಕರ್ನಾಟಕ, ತಮಿಳುನಾಡು ಮತ್ತು ಪುದುಚೇರಿಯಲ್ಲಿ ಈ ವರ್ಷ ಮಳೆಯ ಕೊರತೆ ತೀವ್ರವಾಗಿತ್ತು. ಜಮ್ಮು ಮತ್ತು ಕಾಶ್ಮೀರದ ಕೆಲವು ಭಾಗಗಳು, ಹಿಮಾಚಲಪ್ರದೇಶ, ಉತ್ತರಾಖಂಡ, ಪಶ್ಚಿಮ ಉತ್ತರಪ್ರದೇಶ, ಕರ್ನಾಟಕದ ಉತ್ತರ ಒಳನಾಡು, ತೆಲಂಗಾಣ, ರಾಯಲಸೀಮಾ(ಆಂಧ್ರ)ಗಳಲ್ಲೂ ಮುಂಗಾರು ಪೂರ್ವ ಮಳೆ ಕೊರತೆಯಾಗಿದೆ.
ಬಿಸಿಲಿನ ಝಳಕ್ಕೆ ರೈತ ಬಲಿ
ನವದೆಹಲಿ: ಉತ್ತರ ಭಾರತದಾದ್ಯಂತ ಬಿಸಿಲಿನ ಝಳ ಮುಂದುವರಿದಿದ್ದು, ಇನ್ನೂ 2 ದಿನಗಳ ಕಾಲ ಪರಿಸ್ಥಿತಿ ಹೀಗೇ ಇರಲಿದ್ದು, ನಂತರ ಕ್ರಮೇಣ ತಾಪಮಾನ ಕಡಿಮೆಯಾಗುತ್ತಾ ಬರಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ರಾಜಸ್ಥಾನದಲ್ಲಿ ಭಾನುವಾರ 48.9 ಡಿ.ಸೆ. ತಾಪಮಾನ ದಾಖಲಾಗಿದ್ದು, ಸೂರ್ಯನ ಶಾಖ ತಾಳಲಾರದೇ ರೈತರೊಬ್ಬರು ಅಸುನೀಗಿದ್ದಾರೆ. ರಾಜಸ್ಥಾನದ ಚುರುವಿನಲ್ಲಿ ಗರಿಷ್ಠ ಅಂದರೆ 48.9 ಡಿ.ಸೆ. ತಾಪಮಾನ ದಾಖಲಾಗಿದ್ದರೆ, ಗಂಗಾನಗರ, ಬಿಕಾನೇರ್, ಜೈಸಲ್ಮೇರ್, ಕೋಟಾ ಮತ್ತು ಬಾರ್ಮರ್‌ಗಳಲ್ಲೂ ತಾಪಮಾನ ಹೆಚ್ಚಳವಾಗಿ ಜನರು ಮನೆಗಳಿಂದ ಹೊರಬರಲು ಹೆದರುವಂತ ಸ್ಥಿತಿ ನಿರ್ಮಾಣವಾಗಿದೆ. ಇದೇ ವೇಳೆ, ಒಡಿಶಾದಲ್ಲಿ ಸುಮಾರು 10 ಪ್ರದೇಶಗಳಲ್ಲಿ ಉಷ್ಣತೆ 40 ಡಿ.ಸೆ. ಗಿಂತಲೂ ಹೆಚ್ಚಿದೆ ಎಂದು ಇಲಾಖೆ ತಿಳಿಸಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Sheesh Mahal Row: ಶೀಶ್‌ಮಹಲ್ ವರ್ಸಸ್ ರಾಜ್ ಮಹಲ್: ದಿಲ್ಲೀಲಿ ಬಿಜೆಪಿ, ಆಪ್ ಹೈಡ್ರಾಮ
Foundation: ಆಂಧ್ರ ಅಭಿವೃದ್ಧಿಗೆ ಹೆಗಲಿಗೆ ಹೆಗಲು ಕೊಟ್ಟು ಕೆಲಸ ಮಾಡುವೆವು: ಮೋದಿ
Delhi: ಜ.15ಕ್ಕೆ ಹೊಸ ಕಟ್ಟಡಕ್ಕೆ ಕಾಂಗ್ರೆಸ್ ಪ್ರಧಾನ ಕಚೇರಿ ಸ್ಥಳಾಂತರ
Maharashtra: ಒಂದೇ ವಾರದಲ್ಲಿ ತಲೆ ಬೋಳು.. 3 ಗ್ರಾಮಗಳ ಜನರಿಗೆ ತಲೆ ಕೂದಲು ಉದುರುವ ಸಮಸ್ಯೆ!
Visa Extended: ಬಾಂಗ್ಲಾ ಮಾಜಿ ಪ್ರಧಾನಿ ಶೇಖ್ ಹಸೀನಾ ಅವರ ವೀಸಾ ಅವಧಿ ವಿಸ್ತರಿಸಿದ ಭಾರತ
MUST WATCH
ಹೊಸ ಸೇರ್ಪಡೆ
Kasaragod: ಯುವತಿ ನಾಪತ್ತೆ; ದೂರು ದಾಖಲು
Sheesh Mahal Row: ಶೀಶ್‌ಮಹಲ್ ವರ್ಸಸ್ ರಾಜ್ ಮಹಲ್: ದಿಲ್ಲೀಲಿ ಬಿಜೆಪಿ, ಆಪ್ ಹೈಡ್ರಾಮ
Foundation: ಆಂಧ್ರ ಅಭಿವೃದ್ಧಿಗೆ ಹೆಗಲಿಗೆ ಹೆಗಲು ಕೊಟ್ಟು ಕೆಲಸ ಮಾಡುವೆವು: ಮೋದಿ
Delhi: ಜ.15ಕ್ಕೆ ಹೊಸ ಕಟ್ಟಡಕ್ಕೆ ಕಾಂಗ್ರೆಸ್ ಪ್ರಧಾನ ಕಚೇರಿ ಸ್ಥಳಾಂತರ
Mangaluru: ಜ.11, 12ರಂದು ಮಂಗಳೂರು ಲಿಟ್ ಫೆಸ್ಟ್… ಕಲೆ, ಸಾಹಿತ್ಯ, ಜಾನಪದಗಳ ಸಂಗಮ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.