Foreign EV ಕಂಪೆನಿಗಳಿಗೆ ಕೆಂಪುಹಾಸು; ತೆರಿಗೆ ಸೇರಿ ಹಲವು ವಿನಾಯಿತಿ: ಹೊಸ ನೀತಿಯಲ್ಲೇನಿದೆ?
Team Udayavani, Mar 16, 2024, 6:45 AM IST
ಹೊಸದಿಲ್ಲಿ: ನೂತನ ಎಲೆಕ್ಟ್ರಿಕ್ ವಾಹನಗಳ(ಇವಿ) ನೀತಿಗೆ ಕೇಂದ್ರ ಸರಕಾರ ಶುಕ್ರವಾರ ಅನುಮೋದನೆ ನೀಡಿದೆ. ಇದು ಟೆಸ್ಲಾದಂತಹ ದೈತ್ಯ ಕಂಪೆನಿಗಳು ಭಾರತದಲ್ಲಿ ಉತ್ಪಾದನೆ ಆರಂಭಿಸಲು ಸಹಕಾರಿಯಾಗಲಿದೆ.
ಈ ನೂತನ ನೀತಿಯಿಂದಾಗಿ ದೇಶದಲ್ಲೇ ಉತ್ಪಾದನ ಘಟಕ ಸ್ಥಾಪಿಸುವುದರ ಜತೆಗೆ ಕನಿಷ್ಠ 4,150 ಕೋ. ರೂ. ಹೂಡಿಕೆ ಮಾಡುವ ವಿದೇಶಿ ಕಂಪೆನಿಗಳಿಗೆ ಇವಿ ವಾಹನಗಳ ಆಮದು ತೆರಿಗೆಯಲ್ಲಿ ವಿನಾಯಿತಿ ಸಿಗಲಿದೆ. ಈ ವಿದೇಶಿ ಕಂಪೆನಿಗಳು 3 ವರ್ಷಗಳೊಳಗೆ ಭಾರತದಲ್ಲಿ ಉತ್ಪಾದನ ಘಟಕ ಸ್ಥಾಪಿಸಬೇಕು. ಜತೆಗೆ ಶೇ.25ರಷ್ಟು ಬಿಡಿಭಾಗಗಳನ್ನು ದೇಶೀಯವಾಗಿ ಖರೀದಿಸಬೇಕು.
ಇನ್ನೊಂದೆಡೆ, ಈ ಕಂಪೆನಿಗಳು ವಾರ್ಷಿಕವಾಗಿ 8,000 ಎಲೆಕ್ಟ್ರಿಕ್ ವಾಹನಗಳನ್ನು ಆಮದು ಮಾಡಿಕೊಳ್ಳಲು ಮಾತ್ರ ಅವಕಾಶ ಇರಲಿದೆ. ಜತೆಗೆ 29 ಲಕ್ಷ ರೂ. ಮತ್ತು ಅದಕ್ಕಿಂತ ಹೆಚ್ಚಿನ ಮೌಲ್ಯದ ಇವಿ ವಾಹನಗಳ ಆಮದಿನ ಮೇಲೆ ಕೇವಲ ಶೇ.15ರಷ್ಟು ಆಮದು ಸುಂಕ ವಿಧಿಸಲಾಗುತ್ತದೆ. ಪಸ್ತುತ ಇತರ ಕಾರುಗಳಿಗೆ, ಅದರ ಬೆಲೆಗಳಿಗೆ ಅನುಸಾರವಾಗಿ ಶೇ.70ರಿಂದ ಶೇ.100ರಷ್ಟು ಆಮದು ಸುಂಕ ವಿಧಿಸಲಾಗುತ್ತಿದೆ.
“ಈ ಕ್ರಮವು ಭಾರತೀಯ ಗ್ರಾಹಕರಿಗೆ ಅತ್ಯಾಧುನಿಕ ತಂತ್ರಜ್ಞಾನ ಪರಿಚಯಿಸುವುದರ ಜತೆಗೆ ಮೇಕ್ ಇನ್ ಇಂಡಿಯಾ ಉಪಕ್ರಮವನ್ನು ಉತ್ತೇಜಿಸುತ್ತದೆ. ಇವಿ ಉತ್ಪಾದಕರ ನಡುವೆ ಆರೋಗ್ಯಕರ ಸ್ಪರ್ಧೆಯನ್ನು ಉತ್ತೇಜಿಸುತ್ತದೆ. ಹೆಚ್ಚಿನ ಪ್ರಮಾಣದ ಇವಿಗಳ ಉತ್ಪಾದನೆಗೆ ಕಾರಣವಾಗುತ್ತದೆ. ಉತ್ಪಾ ದನ ವೆಚ್ಚ, ಕಚ್ಚಾ ತೈಲ ಆಮದು ಕಡಿಮೆ ಮಾಡ ಲಿದೆ. ವಾಯುಮಾಲಿನ್ಯ ತಗ್ಗಿಸಲಿದೆ. ನಗರಗಳಲ್ಲಿ ಆರೋಗ್ಯ ಮತ್ತು ಪರಿಸರದ ಮೇಲೆ ಧನಾತ್ಮಕ ಪರಿಣಾಮ ಬೀರಲಿದೆ’ ಎಂದು ಕೇಂದ್ರ ವಾಣಿಜ್ಯ ಮತ್ತು ಕೈಗಾರಿಕ ಸಚಿವಾಲಯ ಹೇಳಿದೆ.
ಹೊಸ ನೀತಿಯಲ್ಲೇನಿದೆ?
ಕನಿಷ್ಠ 4,150 ಕೋಟಿ ರೂ. ಹೂಡಿಕೆ ಮಾಡಿದರೆ ವಿದೇಶಿ ಕಂಪೆನಿಗಳಿಗೆ ಆಮದು ತೆರಿಗೆಯಲ್ಲಿ ವಿನಾಯಿತಿ ಆ ಕಂಪನಿಗಳು 3 ವರ್ಷಗಳೊಳಗೆ ಭಾರತದಲ್ಲಿ ಉತ್ಪಾದನ ಘಟಕ ಸ್ಥಾಪಿಸಬೇಕು.
ಘಟಕ ಸ್ಥಾಪಿಸುವ ಕಂಪೆನಿಗಳು ಶೇ.25ರಷ್ಟು ಬಿಡಿಭಾಗಗಳನ್ನು ದೇಶೀಯವಾಗಿ ಖರೀದಿಸಬೇಕು.
29 ಲಕ್ಷ ರೂ. ಮತ್ತು ಅದಕ್ಕಿಂತ ಹೆಚ್ಚಿನ ಮೌಲ್ಯದ ಇವಿ ವಾಹನಗಳ ಆಮದಿನ ಮೇಲೆ ಕೇವಲ ಶೇ.15ರಷ್ಟು ಆಮದು ಸುಂಕ.
ವಾರ್ಷಿಕವಾಗಿ 8,000 ಎಲೆಕ್ಟ್ರಿಕ್ ವಾಹನಗಳನ್ನು ಆಮದು ಮಾಡಿಕೊಳ್ಳಲು ಮಾತ್ರ ಅವಕಾಶ.
ವಾಯುಮಾಲಿನ್ಯ ತಗ್ಗಿಸುವ ಜತೆಗೆ ಕಚ್ಚಾ ತೈಲ ಆಮದು ಕಡಿಮೆ ಮಾಡುವ ಉದ್ದೇಶ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.