Indian Railways; ಸುರಕ್ಷಾ ಕ್ರಮದಿಂದಾಗಿ ರೈಲು ಅಪಘಾತದಲ್ಲಿ ಇಳಿಕೆ!
ಕಳೆದ 10 ವರ್ಷದಲ್ಲಿ ಅಪಘಾತ ಪ್ರಮಾಣ ವಾರ್ಷಿಕ ಶೇ.68ಕ್ಕೆ ಇಳಿಕೆ: ರೈಲ್ವೇ ಇಲಾಖೆ ಮಾಹಿತಿ
Team Udayavani, Jun 19, 2024, 5:30 AM IST
ಹೊಸದಿಲ್ಲಿ: 2004ರಿಂದ 2014ರವರೆ ಗಿನ ಅವಧಿಗೆ ಹೋಲಿಸಿದರೆ ಸುರಕ್ಷಾ ಕ್ರಮಗಳಿಂದಾಗಿ ರೈಲು ಅಪಘಾತಗಳ ಪ್ರಮಾಣ ವರ್ಷಕ್ಕೆ ಶೇ.68ಕ್ಕೆ ಇಳಿಕೆಯಾ ಗಿದೆ. 2014ರಿಂದ 2024ರ ಅವಧಿಯಲ್ಲಿ ವಾರ್ಷಿಕ 171 ಸತತ ಅಪಘಾತಗಳು ಘಟಿಸುತ್ತಿದ್ದವು. ಅನಂತರದ ಹತ್ತು ವರ್ಷದಲ್ಲಿ ಈ ಅಪಘಾತಗಳ ಸಂಖ್ಯೆ ಯು ಇಳಿಕೆಯಾಗುತ್ತ ಬಂದಿದೆ ಎಂದು ರೈಲ್ವೆ ಇಲಾಖೆ ಮಾಹಿತಿ ನೀಡಿದೆ.
2000-01ರಲ್ಲಿ 473 ರೈಲು ಅಪ ಘಾತಗಳ ಸಂಖ್ಯೆಯು ಈಗ 2023- 24ರ ಹೊತ್ತಿಗೆ 40ಕ್ಕೆ ಇಳಿಕೆಯಾಗಿದೆ. ಕಳೆದ ಹತ್ತು ವರ್ಷದಲ್ಲಿ ಕೈಗೊಂಡ ಸುರಕ್ಷಾ ಪ್ರಯತ್ನಗಳಿಂದಾಗಿ ಇದು ಸಾಧ್ಯವಾಗಿದೆ ಎಂಬುದು ರೈಲ್ವೇ ದತ್ತಾಂಶಗಳಿಂದ ತಿಳಿದು ಬಂದಿದೆ. ಸಂಭಾವ್ಯ ರೈಲು ಅಪಘಾತಗಳನ್ನು ತಡೆಯುವ ಕವಚ್‌ನಂಥ ಕ್ರಮಗಳಿಂದ ಸುರಕ್ಷತೆ ಇನ್ನಷ್ಟು ಹೆಚ್ಚಾಗಲಿದೆ.
ಸಾವಿನ ಸಂಖ್ಯೆ 10ಕ್ಕೆ ಏರಿಕೆ: ಸೋಮ ವಾರ ಪಶ್ಚಿಮ ಬಂಗಾಲದಲ್ಲಿ ಸಂಭವಿ ಸಿದ ಕಾಂಚನಗಂಗಾ ಅಪಘಾತದಲ್ಲಿ ಮೃತಪಟ್ಟವರ ಸಂಖ್ಯೆ 10ಕ್ಕೆ ಏರಿಕೆಯಾ ಗಿದೆ. ಈ ಮೊದಲು 9 ಜನರು ಮೃತ ಪಟ್ಟಿದ್ದರು. ಮಂಗಳವಾರ ಗಾಯಾಳು ಒಬ್ಬರು ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ.
ಎಂದಿನಂತೆ ರೈಲು ಸಂಚಾರ ಆರಂಭ
ರೈಲು ಅಪಘಾತ ಸಂಭವಿಸಿದ ಪಶ್ಚಿಮ ಬಂಗಾಲದ ಮಾರ್ಗದಲ್ಲಿ ರೈಲ್ವೇ ಸೇವೆ ಎಂದಿನಂತೆ ಶುರುವಾಗಿದೆ. ಅಪಘಾತದ ಸ್ಥಳದಲ್ಲಿ ವಿದ್ಯುತ್ ಪೂರೈಕೆ ಯನ್ನು ಮರು ಸ್ಥಾಪಿಸಲಾಗಿದ್ದು, ವಿದ್ಯುತ್ ಚಾಲಿತ ರೈಲು ಪೂರ್ಣ ಪ್ರಮಾಣದಲ್ಲಿ ಆರಂಭವಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಬಾಗಿಲಲ್ಲಿ ನಿಂತು ಪಾರಾದ ವ್ಯಕ್ತಿ!
ರೈಲು ಪ್ರಯಾಣದ ವೇಳೆ ಬೋಗಿ ಯ ಬಾಗಿಲಲ್ಲಿ ನಿಂತುಕೊಳ್ಳುವುದು ಅಪಾಯಕಾರಿ ಮಾತ್ರವಲ್ಲದೇ ಜೀವಕ್ಕೆ ಕುತ್ತು ಬರುತ್ತದೆ. ಈ ವ್ಯಕ್ತಿ ಬೋಗಿ ಬಾಗಿಲಲ್ಲೇ ನಿಂತಿದ್ದಕ್ಕೆ ಅಪಘಾತದಲ್ಲಿ ಪ್ರಾಣಾಪಾಯದಿಂದ ಪಾರಾಗಿದ್ದಾನೆ. ಬೋಗಿಯಲ್ಲಿ ಕುಳಿತು ಕೊಳ್ಳಲು ಜಾಗ ಸಿಗದೆ ಬಾಗಿಲಲ್ಲಿ ನಿಂತಿದ್ದ 35 ವರ್ಷ ಆಶಿಶ್ ದಾಸ್, ಕಾಂಚನ್‌ಗಂಗಾ ರೈಲಿಗೆ ಗೂಡ್ಸ್ ರೈಲು ಹಿಂದಿನಿಂದ ಡಿಕ್ಕಿ ಹೊಡೆ ಯುತ್ತಿದ್ದಂತೆ ಹೊರಗೆ ನೆಗೆದು ಪ್ರಾಣ ಉಳಿಸಿಕೊಂಡಿದ್ದಾರೆ. ಇಲ್ಲದಿದ್ದರೆ ಅಪಘಾತದಲ್ಲಿ ಅವರು ಸಾವಿಗೀಡಾಗುತ್ತಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Ambedkar Remarks: ಕನಸಲ್ಲೂ ಅಂಬೇಡ್ಕರ್‌ರನ್ನು ಅವಮಾನಿಸಿಲ್ಲ: ಅಮಿತ್ ಶಾ
Hydarabad: ಪುಷ್ಪ-2 ಚಿತ್ರದ ಪ್ರದರ್ಶನ ವೇಳೆ ಗಾಯಗೊಂಡಿದ್ದ ಬಾಲಕನ ಸ್ಥಿತಿ ಗಂಭೀರ
ನಾವು ಅಧಿಕಾರಕ್ಕೆ ಬಂದರೆ 60 ವರ್ಷ ಮೇಲ್ಪಟ್ಟ ಎಲ್ಲರಿಗೂ ಉಚಿತ ಚಿಕಿತ್ಸೆ: ಕೇಜ್ರಿವಾಲ್
Noida: ಟಾಯ್ಲೆಟಲ್ಲಿ ರಹಸ್ಯ ಕ್ಯಾಮರಾ ಇಟ್ಟಿದ್ದ ಶಾಲಾ ನಿರ್ದೇಶಕ… ಪತ್ತೆ ಹಚ್ಚಿದ ಶಿಕ್ಷಕಿ
Mumbai: ಗೇಟ್‌ವೇ ಆಫ್ ಇಂಡಿಯಾ ಬಳಿ ಮುಳುಗಿದ 67 ಪ್ರಯಾಣಿಕರಿದ್ದ ಬೋಟ್… ರಕ್ಷಣಾ ತಂಡ ದೌಡು
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.