ಸಾಮಾಜಿಕ ವಲಯಕ್ಕೆ ಸುಧಾರಣಾ ಕ್ರಮಗಳು
Team Udayavani, Feb 2, 2020, 4:05 AM IST
ಕೇಂದ್ರ ಬಜೆಟ್‌ನಲ್ಲಿ ಸಾಮಾಜಿಕ ವಲಯಕ್ಕೆ ನೀಡುವ ಆದ್ಯತೆಯು ಬಜೆಟ್‌ನ ಸಮಗ್ರತೆಗೆ ಸಾಕ್ಷಿಯಾಗಿದೆ. ಸಾಮಾಜಿಕ ವಲಯದ ಬೆಳವಣಿಗೆಯ ಜಿಡಿಪಿ ವೃದ್ಧಿಗೂ ಕಾರಣವಾಗಲಿದೆ. ಉದ್ಯೋಗ ಸೃಷ್ಟಿ, ಹೊಸ ಎಂಜಿನಿಯರುಗಳು, ಮಾರ್ಕೆಟಿಂಗ್ ಹೆಡ್‌ಗಳ ಸೃಷ್ಟಿ ಸೇರಿದಂತೆ ಕೌಶಲ್ಯಸಹಿತ ಸಂಪನ್ಮೂಲದ ಪ್ರಮಾಣ ಹೆಚ್ಚಾಗಲಿದೆ. ಇದು ಭವಿಷ್ಯದ ದೃಷ್ಟಿಯಿಂದ ಒಳ್ಳೆಯದು ಹಾಗೂ ಅಗತ್ಯವೂ ಹೌದು.
ಕೇಂದ್ರ ಬಜೆಟ್‌ನಲ್ಲಿ ಶಿಕ್ಷಣ, ಆರೋಗ್ಯ, ಮಹಿಳಾ ಸಬಲೀಕರಣ, ಅಪೌಷ್ಟಿಕತೆ ನಿವಾರಣೆ, ಎಸ್‌ಸಿ-ಎಸ್‌ಟಿ, ಆದಿವಾಸಿಗಳ ಕಲ್ಯಾಣ, ಸೇರಿದಂತೆ ಸಾಮಾಜಿಕ ವಲಯದ ಸುಧಾರಣಾ ಕ್ರಮಗಳು ಮುಂದಿನ ಎರಡು ವರ್ಷಗಳಲ್ಲಿ ಫಲಿತಾಂಶ ನೀಡಲಿವೆ. ಈಗಿನ ಸಂದಿಗ್ಧ ಸ್ಥಿತಿಯಲ್ಲಿ ಬಜೆಟ್‌ನಲ್ಲಿ ಕೈಗೊಂಡಿರುವ ಈ ವಲಯದ ಸುಧಾರಣಾ ಕ್ರಮಗಳು ಸ್ವಲ್ಪ ಮಟ್ಟಿಗೆ ಆಶಾದಾಯಕ ಎಂದೇ ಹೇಳಬಹುದು.
ಶಿಕ್ಷಣಕ್ಕೆ 99,300 ಕೋಟಿ ರೂ., ಆರೋಗ್ಯಕ್ಕೆ 69,000 ಕೋಟಿ ರೂ., ಎಸ್‌ಸಿ-ಎಸ್‌ಟಿ ಕಲ್ಯಾಣಕ್ಕೆ 1.33 ಲಕ್ಷ ಕೋಟಿ ರೂ., ಅಪೌಷ್ಟಿಕತೆ ನಿವಾರಣೆ ಕಾರ್ಯಕ್ರಮಗಳಿಗೆ 35,600 ಕೋಟಿ ರೂ., ಮಹಿಳಾ ಸಬಲೀಕರಣಕ್ಕೆ 28,600 ಕೋಟಿ ರೂ. ಮೀಸಲಿಟ್ಟಿರುವುದು ಸಾಮಾಜಿಕ ವಲಯದ ವೃದ್ಧಿಯ ಸಂಕೇತ. ಇದರಿಂದ ಹೆಚ್ಚಿನ ಉದ್ಯೋಗಾವಕಾಶಗಳು ಸೃಷ್ಟಿಯಾಗಲಿವೆ.
ಬಡ ಕುಟುಂಬಗಳ ವಿದ್ಯಾರ್ಥಿಗಳಿಗೆ ಆನ್‌ಲೈನ್ ಪದವಿ ಯೋಜನೆ, ಕೌಶಲ್ಯ ಅಭಿವೃದ್ಧಿ, ಶಿಕ್ಷಕರು, ದಾದಿಯರು, ಅರೆವೈದ್ಯಕೀಯ ಸಿಬ್ಬಂದಿಗೆ ಕೌಶಲ್ಯಾಭಿವೃದ್ಧಿ ಬ್ರಿಡ್ಜ್ ಕೋರ್ಸ್ ಒದಗಿಸುವುದು ಉತ್ತಮ ನಿರ್ಧಾರವಾಗಿದೆ. ಇದರಿಂದ ನಾನಾ ಕ್ಷೇತ್ರಗಳಿಗೆ ಅಗತ್ಯವಾದ ಮಾನವ ಸಂಪನ್ಮೂಲ ದೊರಕುತ್ತದೆ. ಆದರೆ, ಈ ಎಲ್ಲ ಯೋಜನೆಗಳ ಲಾಭ ರಾಜ್ಯ ಸರ್ಕಾರಗಳು ಸಮರ್ಪಕವಾಗಿ ಪಡೆಯಬೇಕು.
ಕೇಂದ್ರ ಬಜೆಟ್‌ನಲ್ಲಿ ರಾಜ್ಯ ಸರ್ಕಾರಗಳ ಅದರಲ್ಲೂ ಕರ್ನಾಟಕ ರಾಜ್ಯ ಇಂದು ಎದುರಿಸುತ್ತಿರುವ ಆರ್ಥಿಕ ಸಂಕಷ್ಟಕ್ಕೆ ಪರಿಹಾರೋಪಾಯಗಳನ್ನು ನೀಡಲಾಗಿದೆ. ಅದರ ಉಪಯೋಗಕ್ಕೆ ರಾಜ್ಯ ಸರ್ಕಾರ ಸೂಕ್ತ ರೀತಿಯಲ್ಲಿ ಮುಂದಾಗಬೇಕು. ಕ್ವಾಂಟಮ್ ಎಂಜಿನಿಯರಿಂಗ್ ಸೇರಿ ಐಟಿ-ಬಿಟಿ ವಲಯದ ಹೊಸ ಆವಿಷ್ಕಾರಗಳು ಬೆಂಗಳೂರಿಗೆ ಹೆಚ್ಚು ಲಾಭ ತರಬಲ್ಲದು. ಲಾಜೆಸ್ಟಿಕ್ ಸೇರಿ ಇತರೆ ವಲಯಗಳಿಗೆ ಒತ್ತು ನೀಡಿರುವುದರಿಂದ ಉದ್ಯಮಿಗಳಿಗೆ ಅನುಕೂಲವಾಗಿದೆ.
ಇದರಿಂದ ಉದ್ಯೋಗವೂ ಸೃಷ್ಟಿಯಾಗುವುದರಿಂದ ಬಡ ಹಾಗೂ ಮಧ್ಯಮ ವರ್ಗದವರಿಗೆ ಅವಕಾಶಗಳು ಹೆಚ್ಚಾಗಿ ಲಭಿಸುತ್ತವೆ. ಈ ಮೂಲಕ ಸಾಮಾಜಿಕ ವಲಯದ ವೃದ್ಧಿಯಾಗುತ್ತದೆ. ಒಟ್ಟಾರೆ ಹೇಳಬಹುದಾದರೆ ಮುಂದಿನ ಐದು ವರ್ಷ ಆರ್ಥಿಕ ಬೆಳವಣಿಗೆ ಗಮನದಲ್ಲಿಟ್ಟುಕೊಂಡು ಬಜೆಟ್‌ನಲ್ಲಿ ಸಾಮಾಜಿಕ ವಲಯಕ್ಕೆ ಒತ್ತು ನೀಡಲಾಗಿದೆ.
* ಆರ್.ಜಿ.ಮುರಳೀಧರ್‌ವಿಶ್ಲೇಷಕ, ಸಾಮಾಜಿಕ ಕ್ಷೇತ್ರ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Tragedy: ಸ್ನೇಹಿತನ ಮದುವೆ ಮಂಟಪದಲ್ಲೇ ಕುಸಿದು ಬಿದ್ದು ಅಮೆಜಾನ್ ಉದ್ಯೋಗಿ ಮೃತ್ಯು
Three Nation Trip: 5 ದಿನದಲ್ಲಿ 3 ದೇಶಗಳ ಪ್ರವಾಸ ಮುಗಿಸಿ ತವರಿಗೆ ಮರಳಿದ ಪ್ರಧಾನಿ ಮೋದಿ
Adani ವಿರುದ್ಧ ಲಂಚ ಆರೋಪ; ಏನಿದು ಪ್ರಕರಣ? ಅಮೆರಿಕದಲ್ಲಿ ಪ್ರಕರಣ ಏಕೆ?
Mahayuti ಗೆಲುವು: ಆ್ಯಕ್ಸಿಸ್ ಮೈ ಇಂಡಿಯಾ, ಚಾಣಕ್ಯ ಸಮೀಕ್ಷೆ ಭವಿಷ್ಯ
Khalistan; ಕೆನಡಾ ಹಿಂದೂಗಳ ಮೇಲೆ ದಾಳಿ: ಉಗ್ರರ ಹೊಸ ಬೆದರಿಕೆ
MUST WATCH
ಹೊಸ ಸೇರ್ಪಡೆ
Crocodile: ನಿಟ್ಟೂರಲ್ಲಿ ಕಾಣಿಸಿಕೊಂಡ ಮೊಸಳೆ ಸೆರೆ… ನಿಟ್ಟುಸಿರು ಬಿಟ್ಟ ಗ್ರಾಮಸ್ಥರು
Mudigere: ಕಾಫಿ ಬೆಳೆಗಾರರ ಸಂಘಟನೆಗಳ ಪದಾಧಿಕಾರಿಗಳ ಜೊತೆ ಪೊಲೀಸ್ ಅಧಿಕಾರಿಗಳ ಸಭೆ
Aaram Aravinda Swamy: ಸ್ವಾಮಿ ನಂಬಿ ಬಂದ ಅನೀಶ್; ಪ್ರೇಕ್ಷಕ ಕೈ ಹಿಡಿಯೋ ನಿರೀಕ್ಷೆ
Udupi: ಸಹಕಾರ ಕ್ಷೇತ್ರ ಪಠ್ಯವಾಗಲಿ: ಡಾ| ಎಂ.ಎನ್.ಆರ್.
Actor Darshan Bail Case: ಹತ್ಯೆ ಸ್ಥಳದಲ್ಲಿ ದರ್ಶನ್ ಇದ್ರು: ಫೋಟೋ ಸಾಕ್ಷ್ಯ ಲಭ್ಯ!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.