ರಿಲಯನ್ಸ್ ಇಂಡಸ್ಟ್ರೀಸ್ ಹೊಸ ಮೈಲುಗಲ್ಲು
Team Udayavani, Nov 28, 2019, 8:09 PM IST
– 10 ಲಕ್ಷ ಕೋಟಿ ರೂ. ದಾಟಿದ ಮಾರುಕಟ್ಟೆ ಮೌಲ್ಯ
– ಈ ಸಾಧನೆಗೈದ ಭಾರತದ ಮೊದಲ ಕಂಪನಿ ಎಂಬ ಖ್ಯಾತಿಋ
– 1,579.95 ರೂ.ಗೆ ತಲುಪಿದ ರಿಲಯನ್ಸ್ ಷೇರು ದರ
ನವದೆಹಲಿ: ಉದ್ಯಮಿ ಮುಕೇಶ್ ಅಂಬಾನಿ ನೇತೃತ್ವದ ರಿಲಯನ್ಸ್ ಇಂಡಸ್ಟ್ರೀಸ್ ಹೊಸ ದಾಖಲೆ ಸೃಷ್ಟಿಸಿದೆ. 10 ಲಕ್ಷ ಕೋಟಿ ರೂ. ಮಾರುಕಟ್ಟೆ ಮೌಲ್ಯ ಹೊಂದಿರುವ ಭಾರತದ ಮೊದಲ ಕಂಪನಿ ಎಂಬ ಹೆಗ್ಗಳಿಕೆಗೆ ರಿಲಯನ್ಸ್ ಪಾತ್ರವಾಗಿದೆ. ಗುರುವಾರದ ಷೇರು ಮಾರುಕಟ್ಟೆಯ ವಹಿವಾಟಿನಲ್ಲಿ ಕಂಪನಿಯ ಷೇರು ಮೌಲ್ಯ ಏರಿದ ಬೆನ್ನಲ್ಲೇ ಕಂಪನಿಗೆ ಇಂಥದ್ದೊಂದು ಗರಿಮೆ ದೊರೆತಿದೆ.
ತೈಲದಿಂದ ದೂರಸಂಪರ್ಕದವರೆಗೆ ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡಿರುವ ರಿಲಯನ್ಸ್ ಇಂಡಸ್ಟ್ರೀಸ್‌ನ ಷೇರು ಮೌಲ್ಯ ಮುಂಬೈ ಷೇರುಪೇಟೆಯಲ್ಲಿ ಗುರುವಾರ 10,01,555.42 ಕೋಟಿ ರೂ.ಗೆ ತಲುಪಿತು. ಕಂಪನಿಯ ಷೇರು ಶೇ.0.65ರಷ್ಟು ಏರಿಕೆ ಕಂಡಿದ್ದು, ಒಂದು ಷೇರಿನ ಮೌಲ್ಯ 1,579.95 ರೂ.ಗೆ ತಲುಪಿತು. ನಿಫ್ಟಿಯಲ್ಲಿ ಇದರ ಮೌಲ್ಯ 1,582 ರೂ. ಆಗಿತ್ತು. ಗುರುವಾರ ಒಂದೇ ದಿನ ಬಿಎಸ್‌ಇನಲ್ಲಿ ರಿಲಯನ್ಸ್‌ನ 2.73 ಲಕ್ಷ ಷೇರುಗಳನ್ನು ಹೂಡಿಕೆದಾರರು ಖರೀದಿಸಿದರೆ, ಎನ್‌ಎಸ್‌ಇನಲ್ಲಿ ಸುಮಾರು 62 ಲಕ್ಷ ಷೇರುಗಳ ಖರೀದಿ ನಡೆದಿದೆ.
ಈ ಮೂಲಕ ರಿಲಯನ್ಸ್ ಕಂಪನಿಯು ಈಗ ಎಷ್ಟು ದೈತ್ಯವಾಗಿ ಹೊರಹೊಮ್ಮಿದೆಯೆಂದರೆ, ಇದರ ಮಾರುಕಟ್ಟೆ ಮೌಲ್ಯವು ನಿಫ್ಟಿಯಲ್ಲಿ ಲಿಸ್ಟ್ ಆಗಿರುವ 19 ಕಂಪನಿಗಳು ಅಥವಾ ಸರ್ಕಾರಿ ಸ್ವಾಮ್ಯದ 35 ಕಂಪನಿಗಳು, ಬ್ಯಾಂಕುಗಳಿಗೆ ಸಮನಾಗಿವೆ.
ಮುಕೇಶ್ ಈಗ ಜಗತ್ತಿನ 12ನೇ ಸಿರಿವಂತ
ಈ ವರ್ಷವೇ ಮುಕೇಶ್ ಅಂಬಾನಿ ಅವರ ಆಸ್ತಿಯಲ್ಲಿ 13.70 ಬಿಲಿಯನ್ ಡಾಲರ್ ಏರಿಕೆಯಾಗಿದೆ. ಅಲ್ಲದೆ, ಇತ್ತೀಚಿನ ದಿನಗಳಲ್ಲಿ ರಿಲಾಯನ್ಸ್ ಷೇರುಗಳ ಮೌಲ್ಯ ಹೆಚ್ಚಾಗಿದ್ದರಿಂದ ಆಸ್ತಿ ಮೌಲ್ಯವೂ ಹೆಚ್ಚಾಗುತ್ತಿದೆ. ಈಚೆಗಷ್ಟೇ ಬಿಡುಗಡೆಯಾದ ಬ್ಲೂಮಬರ್ಗ್ ಬಿಲಿಯನೇರ್ ಇಂಡೆಕ್ಸ್‌ನಲ್ಲಿ 14ನೇ ಸ್ಥಾನದಲ್ಲಿದ್ದ ಮುಕೇಶ್ ಅಂಬಾನಿ ಈಗ 12ನೇ ಸ್ಥಾನಕ್ಕೇರಿದ್ದಾರೆ. ಈಗ ಅವರ ಒಟ್ಟಾರೆ ಆಸ್ತಿ ಮೌಲ್ಯ 61.50 ಬಿಲಿಯನ್ ಡಾಲರ್.
ಕಾರಣ ಏನಿರಬಹುದು?
ಕಂಪನಿಯ ಸಾಲ ಕಡಿತ ಯೋಜನೆ, ಸದ್ಯದಲ್ಲೇ ಜಾರಿಯಾಗಲಿರುವ ಸೇವಾ ಶುಲ್ಕ ಏರಿಕೆ ಮತ್ತು ಗ್ರಾಹಕ ವ್ಯವಹಾರದತ್ತ ಹೆಚ್ಚಿನ ಗಮನ ನೆಟ್ಟಿರುವುದು ರಿಲಯನ್ಸ್ ಷೇರು ಮೌಲ್ಯ ಹೆಚ್ಚಲು ಕಾರಣ ಎಂದು ವಿಶ್ಲೇಷಿಸಲಾಗಿದೆ. ಚಿಲ್ಲರೆ ವಹಿವಾಟಿನಲ್ಲಿ ಕಂಪನಿಯ ಆದಾಯ ಕಳೆದ 6 ವರ್ಷಗಳಲ್ಲಿ 7 ಪಟ್ಟು ಮತ್ತು ಲಾಭದ ಪ್ರಮಾಣ 14 ಪಟ್ಟು ಹೆಚ್ಚಳವಾಗಿದೆ. ಇನ್ನು ಜಿಯೋ ದೇಶದ ಅತಿದೊಡ್ಡ ದೂರಸಂಪರ್ಕ ಸೇವಾದಾರ ಕಂಪನಿಯಾಗಿ ಹೊರಹೊಮ್ಮಿದ್ದು, ಪ್ರತಿ ತಿಂಗಳು 1 ಕೋಟಿ ಹೊಸ ಗ್ರಾಹಕರು ಜಿಯೋಗೆ ಸೇರ್ಪಡೆಯಾಗುತ್ತಿದ್ದಾರೆ. ಸದ್ಯದಲ್ಲೇ ಜಿಯೋ ಸೇವಾ ಶುಲ್ಕ ಹೆಚ್ಚಳ ಮಾಡುವುದಾಗಿಯೂ ಘೋಷಿಸಿದೆ. ಇದಲ್ಲದೇ ಇತರೆ ಕ್ಷೇತ್ರಗಳಲ್ಲೂ ಕಂಪನಿಯು ತನ್ನದೇ ಆದ ಛಾಪು ಮೂಡಿಸಿದೆ.
– 2018ರ ಆಗಸ್ಟ್- 8 ಲಕ್ಷ ಕೋಟಿ ರೂ. ಮಾರುಕಟ್ಟೆ ಮೌಲ್ಯ ಹೊಂದಿದ ಭಾರತದ ಮೊದಲ ಕಂಪನಿ ಎಂಬ ಹೆಗ್ಗಳಿಕೆ
– 2019ರ ಅಕ್ಟೋಬರ್- 9 ಲಕ್ಷ ಕೋಟಿ ರೂ. ತಲುಪಿದ ರಿಲಯನ್ಸ್ ಇಂಡಸ್ಟ್ರೀಸ್ ಮಾರುಕಟ್ಟೆ ಮೌಲ್ಯ
– 2019 ನವೆಂಬರ್ – 10 ಲಕ್ಷ ಕೋಟಿ ರೂ. ಎಂ-ಕ್ಯಾಪ್ ಹೊಂದಿದ ದೇಶದ ಮೊದಲ ಕಂಪನಿ ಎಂಬ ಖ್ಯಾತಿ
ಎಂ-ಕ್ಯಾಪ್ ಯಾರದ್ದು ಹೆಚ್ಚು?
1. ರಿಲಯನ್ಸ್ ಇಂಡಸ್ಟ್ರೀಸ್- 10 ಲಕ್ಷ ಕೋಟಿ ರೂ.
2. ಟಿಸಿಎಸ್- 7.79 ಲಕ್ಷ ಕೋಟಿ ರೂ.
3. ಎಚ್‌ಡಿಎಫ್ಸಿ ಬ್ಯಾಂಕ್- 6.92 ಲಕ್ಷ ಕೋಟಿ ರೂ.
4. ಹಿಂದುಸ್ಥಾನ್ ಯುನಿಲಿವರ್ – 4.51 ಲಕ್ಷ ಕೋಟಿ ರೂ.
(ಪ್ರತಿ ದಿನದ ಷೇರು ದರದ ಏರಿಳಿತದ ಆಧಾರದಲ್ಲಿ ಕಂಪನಿಗಳ ಎಂ-ಕ್ಯಾಪ್ ಅಂಕಿಅಂಶಗಳು ಬದಲಾಗುತ್ತಿರುತ್ತವೆ)
ಸೆನ್ಸೆಕ್ಸ್ ದಾಖಲೆಯ ಓಟ ಮುಂದುವರಿಕೆ
ರಿಲಯನ್ಸ್ ಇಂಡಸ್ಟ್ರೀಸ್ ಹಾಗೂ ಐಸಿಐಸಿಐ ಬ್ಯಾಂಕ್‌ನ ಷೇರು ಮೌಲ್ಯ ವೃದ್ಧಿಸುತ್ತಲೇ ಮುಂಬೈ ಷೇರುಪೇಟೆ ಸತತ 2ನೇ ದಿನವೂ ನಾಗಾಲೋಟ ಮುಂದುವರಿಸಿದ್ದು, ಮತ್ತೆ ಸಾರ್ವಕಾಲಿಕ ದಾಖಲೆ ಬರೆದಿದೆ. ಷೇರು ಖರೀದಿಯು ಭರದಿಂದ ಸಾಗಿದ ಪರಿಣಾಮ ಗುರುವಾರ ಮುಂಬೈ ಷೇರುಪೇಟೆ ಸಂವೇದಿ ಸೂಚ್ಯಂಕ 109 ಅಂಕ ಏರಿಕೆ ಕಂಡು, 41,130ರಲ್ಲಿ ವಹಿವಾಟು ಅಂತ್ಯಗೊಳಿಸುವ ಮೂಲಕ ಹೊಸ ದಾಖಲೆ ಸೃಷ್ಟಿಸಿತು. ನಿಫ್ಟಿ ಕೂಡ 50 ಅಂಕ ಏರಿಕೆ ದಾಖಲಿಸಿ, 12,151ರಲ್ಲಿ ಕೊನೆಗೊಂಡಿತು. ಇಂಡಸ್‌ಇಂಡ್ ಬ್ಯಾಂಕ್ ಷೇರುಗಳು ಶೇ.2.68 ಹಾಗೂ ಐಸಿಐಸಿಐ ಬ್ಯಾಂಕ್ ಷೇರುಗಳು ಶೇ.2.68ರಷ್ಟು ಏರಿಕೆ ಕಂಡವು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Revival: ಭಾರತಕ್ಕೆ ಬಾಂಗ್ಲಾದೇಶ ಸೆಡ್ಡು: ಪಾಕಿಸ್ಥಾನ ಜತೆ ವಹಿವಾಟಿಗೆ ಸಜ್ಜು!
ವಾಯು ಮಾಲಿನ್ಯಕ್ಕೆ ನಗರ ಪ್ರದೇಶ ಮನೆಗಳೇ ಕಾರಣ! ಬೆಂಗಳೂರಿನ ಐಐಎಸ್‌ಸಿ ಸೇರಿ 2 ಅಧ್ಯಯನ ವರದಿ
ಶೀಘ್ರವೇ ದೇಶದ ಬುಲೆಟ್; ರೈಲು ವಿನ್ಯಾಸ ಅಂತಿಮ: ಮುಂಬಯಿ-ಅಹ್ಮದಾಬಾದ್ ಬುಲೆಟ್ ರೈಲು ಯೋಜನೆ
Jammu- Kashmir: ಆಯ್ಕೆಯಾಗಿ 2 ತಿಂಗಳಾದ್ರೂ ಶಾಸಕರಿಗೆ ಮೊದಲ ವೇತನ ಸಿಕ್ಕಿಲ್ಲ!
Enforcement Directorate: ಕ್ರಿಮಿನಲ್ ಪಿತೂರಿಯಡಿ ಮಾತ್ರವೇ ಅಕ್ರಮ ಹಣ ವರ್ಗ ಕೇಸು ಬೇಡ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Drone Prathap: ಕೃಷಿ ಹೊಂಡದಲ್ಲಿ ಸ್ಫೋಟ ಪ್ರಕರಣ; ಡ್ರೋನ್ ಪ್ರತಾಪ್ ಜಾಮೀನು ಮಂಜೂರು
Revival: ಭಾರತಕ್ಕೆ ಬಾಂಗ್ಲಾದೇಶ ಸೆಡ್ಡು: ಪಾಕಿಸ್ಥಾನ ಜತೆ ವಹಿವಾಟಿಗೆ ಸಜ್ಜು!
Derogatory Term: ಸಿ.ಟಿ.ರವಿ ಪ್ರಕರಣ ಮುಗಿದ ಅಧ್ಯಾಯ, ತನಿಖೆ ಬೇಕಿಲ್ಲ: ಸಭಾಪತಿ ಸ್ಪಷ್ಟನೆ
Language Communication: ನಾಪತ್ತೆಯಾಗಿದ್ದ ಮಹಿಳೆ “ಕನ್ನಡ’ದಿಂದಾಗಿ ಪತ್ತೆ!
ವಾಯು ಮಾಲಿನ್ಯಕ್ಕೆ ನಗರ ಪ್ರದೇಶ ಮನೆಗಳೇ ಕಾರಣ! ಬೆಂಗಳೂರಿನ ಐಐಎಸ್‌ಸಿ ಸೇರಿ 2 ಅಧ್ಯಯನ ವರದಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.