ಧರ್ಮ, ಜಾತಿ ವಿಷಯ ನನಗೆ ಚಿಕ್ಕದು: ರಾಹುಲ್ ಗಾಂಧಿ
Team Udayavani, Jul 18, 2018, 12:04 PM IST
ಹೊಸದಿಲ್ಲಿ: “ಕಾಂಗ್ರೆಸ್ ಮುಸ್ಲಿಂ ಪಕ್ಷ’ ಹೇಳಿಕೆ ವಿವಾದ ಇದೀಗ ಮತ್ತಷ್ಟು ತಾರಕಕ್ಕೇರುವ ಸಾಧ್ಯತೆ ಇದೆ. ಈ ಕುರಿತು ಮೊದಲ ಬಾರಿಗೆ ಮೌನ ಮುರಿದಿರುವ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ, ತಾನು ಧರ್ಮ, ಜಾತಿ ವಿಷಯಗಳನ್ನು ತುಂಬಾ ಗಂಭೀರವಾಗಿ ಪರಿಗಣಿಸುವುದಿಲ್ಲ. ತುಳಿತಕ್ಕೊಳಗಾದವರ ಪರ ಇರುತ್ತೇನೆ ಎಂದು ಪ್ರತಿಕ್ರಿಯಿಸಿದ್ದಾರೆ.
ಇದೇ ಹೇಳಿಕೆ ಮುಂದಿಟ್ಟುಕೊಂಡು ಮತ್ತೆ ತಿರುಗಿ ಬಿದ್ದಿರುವ ಬಿಜೆಪಿ, ರಾಹುಲ್ ಗಾಂಧಿ ತಮ್ಮ “ಕಾಂಗ್ರೆಸ್ ಮುಸ್ಲಿಂ ಪಕ್ಷ’ ಹೇಳಿಕೆಯನ್ನು ಅಲ್ಲಗಳೆದಿಲ್ಲ. ಪರೋಕ್ಷ ತಮ್ಮದು ಮುಸ್ಲಿಂ ಪಾರ್ಟಿ ಎಂಬುದನ್ನು ಒಪ್ಪಿಕೊಂಡಿದ್ದಾರೆ. ಮುಸ್ಲಿಂ ಓಲೈಕೆಯಲ್ಲಿ ತೊಡಗಿರುವ ಎಐಎಂಎಂ ಪಾರ್ಟಿ ಮುಖ್ಯಸ್ಥ ಅಸಾದುದ್ದೀನ್ ಒವೈಸಿಗೆ ರಾಹುಲ್ ಪೈಪೋಟಿ ನೀಡುತ್ತಿದ್ದಾರೆ ಎಂದು ವಾಗ್ಧಾಳಿ ನಡೆಸಿದೆ. ಬುಧವಾರದಿಂದ ಸಂಸತ್ ಕಲಾಪ ಪ್ರಾರಂಭವಾಗಲಿದೆ.
ಕಳೆದ ವಾರ ರಾಹುಲ್ ಮುಸ್ಲಿಂ ಚಿಂತಕರೊಂದಿಗೆ ಮಾತ ನಾಡುವಾಗ “ಕಾಂಗ್ರೆಸ್ ಮುಸ್ಲಿಂ ಪಕ್ಷ’ ಎಂದು ಹೇಳಿದ್ದಾರೆ ಎಂದು ಉರ್ದು ಪತ್ರಿಕೆಯೊಂದು ವರದಿ ಮಾಡಿತ್ತು. ಈ ಕುರಿತು ಮಂಗಳವಾರ ಟ್ವಿಟರ್ ಮೂಲಕ ಪ್ರತಿಕ್ರಿಯಿಸಿರುವ ರಾಹುಲ್, ನಾನು ಧರ್ಮ, ಜಾತಿ ವಿಷಯಗಳನ್ನು ತುಂಬಾ ಗಂಭೀರವಾಗಿ ತೆಗೆದುಕೊಳ್ಳು ವುದಿಲ್ಲ. ಸಮಾಜದ ಕಟ್ಟಕಡೆಯ ವ್ಯಕ್ತಿಪರ ಇರು ತ್ತೇನೆ. ಭಯ, ದ್ವೇಷವನ್ನು ಅಳಿಸಿ ಹಾಕುತ್ತೇನೆ ಎಂದಿದ್ದಾರೆ.
ಇದರ ಬೆನ್ನಲ್ಲೇ ಪ್ರತಿಕ್ರಿಯೆ ನೀಡಿರುವ ಬಿಜೆಪಿ ವಕ್ತಾರ ಸಂಬಿತ್ ಪಾತ್ರಾ, ರಾಹುಲ್ ತಮ್ಮ ವಿವಾದಿತ ಹೇಳಿಕೆಯನ್ನು ಸಂಪೂರ್ಣವಾಗಿ ತಿರಸ್ಕರಿಸಿಲ್ಲ. ತಮ್ಮ ಹೇಳಿಕೆಯನ್ನು ಮತ್ತೆ ಪುಷ್ಟೀಕರಿಸಿದಂತಿದೆ ಎಂದಿದ್ದಾರೆ.
ಸಂಸತ್ ಕಲಾಪದಲ್ಲಿ ಮಹಿಳಾ ಸಬಲೀಕರಣಕ್ಕಾಗಿ ವಿಪಕ್ಷಗಳು ಮಹಿಳಾ ಮೀಸಲಾತಿ ಮಸೂದೆ ಅಂಗೀಕಾರಕ್ಕೆ ಸಹಕಾರ ನೀಡುವುದರ ಜತೆಗೆ, ತ್ರಿವಳಿ ತಲಾಖ್ ಹಾಗೂ ನಿಕಾಹ್ ಹಲಾಲಾ ಮಸೂದೆಯನ್ನು ಚರ್ಚೆಗೆ ತರಲು ಬಿಜೆಪಿ ಜತೆ ಕೈಜೋಡಿಸಬೇಕು.
– ರವಿಶಂಕರ್ ಪ್ರಸಾದ್, ಕೇಂದ್ರ ಕಾನೂನು ಸಚಿವ
ಸುಗಮ ಕಲಾಪಕ್ಕೆ ಪ್ರಧಾನಿ ಮನವಿ
ಈ ನಡುವೆ, ಸಂಸತ್ ಕಲಾಪಗಳು ಸುಗಮವಾಗಿ ನಡೆಯಲು ಎಲ್ಲ ಪಕ್ಷಗಳು ಸಹಕಾರ ನೀಡಬೇಕು ಎಂದು ಪ್ರಧಾನಿ ನರೇಂದ್ರ ಮೋದಿ ಮನವಿ ಮಾಡಿದ್ದಾರೆ. ಮಂಗಳವಾರ ನಡೆದ ಸರ್ವಪಕ್ಷ ಸಭೆಯಲ್ಲಿ ಅವರು ಈ ಕೋರಿಕೆ ಸಲ್ಲಿಸಿದ್ದಾರೆ. ಸಭೆ ಕುರಿತು ಮಾಹಿತಿ ನೀಡಿರುವ ಕೇಂದ್ರ ಸಚಿವ ಅನಂತ್‌ಕುಮಾರ್, “ಅಧಿವೇಶನ ಸುಗಮವಾಗಿ ಸಾಗಲು ಸಹಕರಿಸುವಂತೆ ಮಾಡಿದ ಮನವಿಗೆ ವಿಪಕ್ಷಗಳು ಸಕಾರಾತ್ಮಕವಾಗಿ ಸ್ಪಂದಿಸಿವೆ. ವಿಪಕ್ಷಗ ಪ್ರಶ್ನೆಗೂ ಉತ್ತರಿಸಲು ಸರ್ಕಾರ ಸಿದ್ಧವಿದೆ’ ಎಂದಿದ್ದಾರೆ. ಜತೆಗೆ, ರಾಜ್ಯಸಭಾ ಉಪಸಭಾಪತಿ ಪಿ.ಜೆ.ಕುರಿಯನ್ ಅಧಿಕಾರಾವಧಿ ಕೊನೆಗೊಳ್ಳುವ ಕಾರಣ ಆ ಸ್ಥಾನಕ್ಕೆ ಚುನಾವಣೆಯನ್ನೂ ನಡೆಸಲಾಗುವುದು ಎಂದೂ ಹೇಳಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Notice: ಸಂಗೀತ ಕಾರ್ಯಕ್ರಮಕ್ಕೂ ಮುನ್ನ ಪಂಜಾಬಿ ಗಾಯಕ ದಿಲ್ಜಿತ್ ದೋಸಾಂಜ್ ಗೆ ನೋಟಿಸ್
Leopard: ಮನೆಯ ಮಹಡಿ ಮೇಲೆ ಚಿರತೆ ಓಡಾಟ, CCTVಯಲ್ಲಿ ದೃಶ್ಯ ಸೆರೆ, ಆತಂಕದಲ್ಲಿ ಗ್ರಾಮಸ್ಥರು
Bangladesh: ಶೇ.90ರಷ್ಟಿ ಮುಸ್ಲಿಮರು ಇರುವ ಬಾಂಗ್ಲಾದೇಶ ಶೀಘ್ರ ಇಸ್ಲಾಮಿಕ್ ರಾಷ್ಟ್ರ?
India-South Africa; ನಾಲ್ಕನೇ ಟಿ20 ಪಂದ್ಯ ಇಂದು: ಸರಣಿ ಗೆಲುವಿನ ನಿರೀಕ್ಷೆಯಲ್ಲಿ ಭಾರತ
Marriage: ಕ್ರಿಸ್ಮಸ್‌ಗೆ ಅಮೆಜಾನ್ ಸಿಇಒ ಅದ್ಧೂರಿ ವಿವಾಹ?
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.