Elections ಬಿಜೆಪಿಯಿಂದ ರಾಜಸ್ಥಾನದಲ್ಲಿ ಧಾರ್ಮಿಕ ಪ್ರಯೋಗ
Team Udayavani, Nov 9, 2023, 5:59 AM IST
ರಾಜಸ್ಥಾನದಲ್ಲಿ ಚುನಾವಣಾ ಕಾವು ಏರಿದೆ. ಮರುಭೂಮಿ ನಾಡಿನಲ್ಲಿ ಸಿಎಂ ಅಶೋಕ್ ಗೆಹ್ಲೋಟ್ ನೇತೃತ್ವದ ಕಾಂಗ್ರೆಸ್ ಸರ್ಕಾರದ ಆಡಳಿತ ವಿರೋಧಿ ಅಲೆಯನ್ನು ತನ್ನ ಗೆಲುವಾಗಿ ಪರಿವರ್ತಿಸಲು ಬಿಜೆಪಿ ಶತಾಯಗತಾಯ ಪ್ರಯತ್ನಿಸುತ್ತಿದೆ. ಈ ಬಾರಿಯ ವಿಧಾನಸಭೆ ಚುನಾವಣೆಯಲ್ಲಿ ನಾಲ್ವರು ಧಾರ್ಮಿಕ ನಾಯಕರು ಹಾಗೂ ಭಕ್ತಿ ಸಂಗೀತದ ಗಾಯಕರೊಬ್ಬರನ್ನು ಕಣಕ್ಕೆ ಇಳಿಸಿದೆ.
ಸಿರೋಹಿ ಕ್ಷೇತ್ರದಿಂದ ರಬರಿ ಸಮುದಾಯದ ಓತರಂ ದೇವಸಿ ಅವರಿಗೆ ಬಿಜೆಪಿ ಟಿಕೆಟ್ ನೀಡಿದೆ. ಚಾಮುಂಡಿ ಮಾತಾ ದೇಗುಲದ ಆರ್ಚಕರಾದ ಇವರು, “ಬೋಪ ಜೀ’ ಎಂದೇ ಖ್ಯಾತರು. 2013ರಲ್ಲಿ ಗೆದ್ದು, ವಸುಂಧರಾ ರಾಜೇ ಸಂಪುಟದಲ್ಲಿ ಗೋ ಅಭಿವೃದ್ಧಿ ಸಚಿವರಾಗಿದ್ದರು.
ಅಲ್ವಾರ್ ಕ್ಷೇತ್ರದ ಹಾಲಿ ಸಂಸದ, ಬಾಬಾ ಮಸ್ತ್ನಾಥ್ ಮಠದ ಮುಖ್ಯಸ್ಥ ಬಾಬಾ ಬಾಲಕನಾಥ್ ಅವರನ್ನು ಬಿಜೆಪಿ ಕಣಕ್ಕಿಳಿಸಿದೆ. ಇವರು ತಿಜಾರಾ ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿ ಇಮ್ರಾನ್ ಖಾನ್ ಎದುರು ಸ್ಪರ್ಧಿಸಲಿದ್ದಾರೆ.
ಪೋಖಾನ್ ಕ್ಷೇತ್ರದಿಂದ ತರತರ ಮಠದ ಮಹಾಂತ್ ಪ್ರತಾಪ್ ಪುರಿಗೆ ಬಿಜೆಪಿ ಟಿಕೆಟ್ ನೀಡಿದೆ. ಇವರು ಕಾಂಗ್ರೆಸ್‌ನ ಹಾಲಿ ಸಚಿವ ಸಲೇಹ್ ಮೊಹಮ್ಮದ್ ವಿರುದ್ಧ ಸ್ಪರ್ಧಿಸುತ್ತಿದ್ದಾರೆ. 2018ರಲ್ಲಿ ಸಲೇಹ್ ವಿರುದ್ಧ 1,000 ಮತಗಳ ಅಂತರದಿಂದ ಪ್ರತಾಪ್ ಪುರಿ ಸೋತಿದ್ದರು.
ಜೈಪುರದ ಹವಾ ಮಹಲ್ ಕ್ಷೇತ್ರದಿಂದ ಧಾರ್ಮಿಕ ನಾಯಕ ಹತಾಜಿ ಧಾಮ್‌ನ ಬಾಲಮುಕುಂದ್ ಅವರನ್ನು ಕೇಸರಿ ಪಕ್ಷ ಅಖಾಡಕ್ಕಿಳಿಸಿದೆ. ಮತ್ತೊಂದೆಡೆ, ಪಚ್‌ಪದ್ರಾ ಕ್ಷೇತ್ರದಿಂದ ಭಕ್ತಿ ಸಂಗೀತದ ಯುವ ಗಾಯಕ, ಮಾಲಿ ಸಮುದಾಯದ(ಒಬಿಸಿ) ಪ್ರಕಾಶ್ ಮಾಲಿ ಅವರಿಗೆ ಬಿಜೆಪಿ ಟಿಕೆಟ್ ನೀಡಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Bhopal: ಬಿಜೆಪಿ ಮಾಜಿ ಶಾಸಕ ಸಿಂಗ್ ನಿವಾಸದ ಮೇಲೆ ಐಟಿ ದಾಳಿ; ನಗದು, 3 ಮೊಸಳೆ ಪತ್ತೆ!
ಪರೀಕ್ಷೆಯಿಂದ ತಪ್ಪಿಸಿಕೊಳ್ಳಲು 23ಶಾಲೆಗೆ ಬಾಂಬ್ ಬೆದರಿಕೆ ಹಾಕಿದ್ದ 12ನೇ ತರಗತಿ ವಿದ್ಯಾರ್ಥಿ
Delhi-NCR: ದಟ್ಟ ಮಂಜು ಕವಿದ ವಾತಾವರಣ-ವಿಮಾನ,ವಾಹನ ಸಂಚಾರಕ್ಕೆ ಎಫೆಕ್ಟ್, ಟ್ರಾಫಿಕ್ ಜಾಮ್
Man Fined: ಹೀಗೂ ಉಂಟೇ…! ಹೆಲ್ಮೆಟ್ ಧರಿಸಿಲ್ಲ ಎಂದು ಪಾದಚಾರಿಗೆ ದಂಡ ವಿಧಿಸಿದ ಪೊಲೀಸ್
BJP; ಅಮಿತ್ ಶಾ ಹೇಳಿಕೆ ಪರ ನಿಲ್ಲಲು ಸಂತೋಷ್ ಸೂಚನೆ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.