ನೀಟ್ ಬರೆಯಲು ಒಳ ಅಂಗಿ ತೆಗೆಸಿದರು!
Team Udayavani, May 8, 2017, 9:32 AM IST
ಹೊಸದಿಲ್ಲಿ: ‘ಏ ಫುಲ್ ಕೈ ಶರ್ಟ್ ಹಾಕಿದ್ದೀಯಾ? ತೊಂದರೆ ಅಲ್ಲ. ಅದನ್ನು ಹರಿದರಾಯಿತು. ನೀವು ಧರಿಸಿದ ಒಳ ಅಂಗಿ ಪರೀಕ್ಷಿಸಬೇಕಾಗಿದೆ…’ ಇದು ಯಾವುದೇ ಸಿನಿಮಾ ಡೈಲಾಗ್ ಅಲ್ಲ ಕರ್ನಾಟಕ ಸೇರಿದಂತೆ ದೇಶದ 1,900 ಕೇಂದ್ರಗಳಲ್ಲಿ ವೈದ್ಯಕೀಯ ಪ್ರವೇಶ ಪರೀಕ್ಷೆ ರಾಷ್ಟ್ರೀಯ ಪ್ರವೇಶ ಮತ್ತು ಅರ್ಹತಾ ಪರೀಕ್ಷೆ (ನೀಟ್) ನಡೆದ ಕೇಂದ್ರಗಳಲ್ಲಿ ನಡೆದ ಅಂಶಗಳಿವು. ಕೇಂದ್ರ ಮಾಧ್ಯಮಿಕ ಶಿಕ್ಷಣ ಮಂಡಳಿ (ಸಿಬಿಎಸ್‌ಇ) ನಡೆಸಿದ ಪ್ರವೇಶ ಪರೀಕ್ಷೆ ಬರೆಯುವುದಕ್ಕೆ ಮುನ್ನ ಅಭ್ಯರ್ಥಿಗಳನ್ನು ಭದ್ರತಾ ಸಿಬ್ಬಂದಿ, ತಪಾಸಣೆ ವೇಳೆ ಕಂಡು ಬಂದ ಹೈಡ್ರಾಮ ಇದು. ನಿಯಮಗಳ ಹೊರತಾಗಿಯೂ ಆಭರಣ, ಹೇರ್‌ಕ್ಲಿಪ್, ವಾಚ್ ಧರಿಸಿ ಬಂದಿದ್ದರಿಂದ ಅವುಗಳನ್ನು ಕಟ್ಟುನಿಟ್ಟಾಗಿ ತೆಗೆಸಲಾಟಯಿತು. ಸುಪ್ರೀಂ ಕೋರ್ಟ್ ತೀರ್ಪು ನೀಡಿದ್ದರಿಂದ ದೇಶಾದ್ಯಂತ ಪೂರ್ಣ ಪ್ರಮಾಣದಲ್ಲಿ ನೀಟ್ ನಡೆದಿದೆ.
ಕೇರಳದ ಕಣ್ಣೂರಿನ ಪರೀಕ್ಷಾ ಕೇಂದ್ರವೊಂದರಲ್ಲಿ ವಿದ್ಯಾರ್ಥಿನಿಯ ಒಳಉಡುಪು ತೆಗೆಯುವಂತೆ ಪರೀಕ್ಷಾಧಿಕಾರಿಗಳು ಸೂಚಿಸಿದ ಆಕ್ಷೇಪಾರ್ಹ ಘಟನೆಯೂ ನಡೆದಿದೆ. ಈ ಬಗ್ಗೆ ಮಾಧ್ಯಮಗಳ ಜತೆ ಮಾತನಾಡಿದ ಆಕೆಯ ಹೆತ್ತವರು ಇಂಥ ಕ್ರಮ ಖಂಡಿಸಿದ್ದಾರೆ. ಮತ್ತೂಬ್ಬ ವಿದ್ಯಾರ್ಥಿನಿಯ ಡ್ರೆಸ್‌ನಲ್ಲಿದ್ದ ಲೋಹದ ಗುಂಡಿಗಳನ್ನು ತೆಗೆಯಲು ಆದೇಶಿಸಲಾಯಿತು.
ಶರ್ಟ್ ಹರಿದರು: ತಮಿಳುನಾಡಿನ ಹಲವು ಭಾಗಗಳಲ್ಲಿ ತುಂಬು ತೋಳಿನ ಶರ್ಟ್ ಧರಿಸಿ ಬಂದಿದ್ದವರ ಅಂಗಿಯನ್ನು ತುಂಡರಿಸಲಾಯಿತು. ಚಿನ್ನದ ಉಂಗುರ ತೆಗೆಯಲು ಸೂಚಿಸಲಾಯಿತು. ಬೂಟ್ ಹಾಕಿ ಬಂದವರನ್ನು ಅದನ್ನು ಕಳಚಿತ್ತು ಚಪ್ಪಲಿ ಧರಿಸಿ ಬರುವಂತೆ ಕಟ್ಟುನಿಟ್ಟಾಗಿ ಸೂಚಿಸಲಾಯಿತು. ವೈದ್ಯಕೀಯ, ದಂತ ವೈದ್ಯಕೀಯ ಕೋರ್ಸ್‌ಗಳಿಗಾಗಿ 11 ಲಕ್ಷ ಮಂದಿ ಪರೀಕ್ಷೆ ಬರೆದಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Choreographer ರೆಮೋ ಡಿಸೋಜಾ ವಿರುದ್ಧದ ಪ್ರಕರಣ ದೆಹಲಿ ಕೋರ್ಟ್ ಗೆ ವರ್ಗಾಯಿಸಿದ ಸುಪ್ರೀಂ
Parliament; ಪ್ರಿಯಾಂಕಾ ಗಾಂಧಿ- ರಾಹುಲ್ ಜತೆ ಸೇರಿ ಬಿಜೆಪಿ ನಿದ್ದೆಗೆಡಿಸುತ್ತಾರೆ :ಪೈಲಟ್
Goa ಕರಾವಳಿಯಲ್ಲಿ ನೌಕಾಪಡೆಯ ಸಬ್ ಮರೈನ್ ಗೆ ಡಿಕ್ಕಿ ಹೊಡೆದ ಬೋಟ್-ಇಬ್ಬರು ನಾಪತ್ತೆ!
Chhattisgarh: ಭದ್ರತಾ ಪಡೆ ದಾಳಿಗೆ 10 ನಕ್ಸಲರು ಹತ… ಅಪಾರ ಪ್ರಮಾಣದ ಶಸ್ತ್ರಾಸ್ತ್ರ ವಶ
Tragedy: ಸ್ನೇಹಿತನ ಮದುವೆ ಮಂಟಪದಲ್ಲೇ ಕುಸಿದು ಬಿದ್ದು ಅಮೆಜಾನ್ ಉದ್ಯೋಗಿ ಮೃತ್ಯು
MUST WATCH
ಹೊಸ ಸೇರ್ಪಡೆ
Belagavi: ದೂರು ಕೊಟ್ಟವರ ಮೊದಲು ಬಂಧಿಸಿ ಬಳಿಕ ನೈಜ ದರೋಡೆಕೋರರ ಸೆರೆ ಹಿಡಿದ ಪೊಲೀಸರು!
Udupi: ಆರೆಸ್ಸೆಸ್ ಹಿರಿಯ ಪ್ರಚಾರಕ್ ಭಯ್ಯಾಜಿ ಜೋಷಿ ಶ್ರೀಕೃಷ್ಣಮಠಕ್ಕೆ ಭೇಟಿ
Bagalakote: ಪ್ರೇಯಸಿ ಗೆಳತಿ ಹ*ತ್ಯೆಗೆ ಸಂಚು; ಕೊನೆಗೆ ಕೈ ಕಳೆದುಕೊಂಡಿದ್ದು ಪ್ರೇಮಿಯೇ!
Udupi: ಕೋಟಿ ಗೀತಾ ಲೇಖನ ಯಜ್ಞ: 500ಕ್ಕೂ ಹೆಚ್ಚು ವಿದ್ಯಾರ್ಥಿಗಳು, ಸಿಬ್ಬಂದಿಯಿಂದ ದೀಕ್ಷೆ
Karnataka HC; ನಾಲ್ಕನೇ ಪ್ರಕರಣದಲ್ಲೂ ಪ್ರಜ್ವಲ್ ರೇವಣ್ಣ ನಿರೀಕ್ಷಣಾ ಜಾಮೀನು ಅರ್ಜಿ ವಜಾ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.